Join Now

ಸಕ್ರೆಬೈಲಿನ ಬಳಿ ಹೊತ್ತಿಉರಿದ ಸ್ಕೋಡಾ ಕಾರು-ಯುವಕ ಸಾವು

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದ ಸಕ್ರೇಬೈಲಿನ ಬಳಿ ಸ್ಕೋಡಾ ಕಾರೊಂದು ಧಗಧಗ ಹೊತ್ತಿ ಉರಿದಿದೆ. ಕೆಂಪೇಗೌಡರ ಹೋಟೆಲ್ ಎದುರು ಮರವೊಂದಕ್ಕೆ ಸ್ಕೋಡಾ ಕಾರು ಹೊತ್ತಿ ಉರಿದಿದೆ.

ಸ್ಕೋಡಾ ಕಾರಿನಲ್ಲಿ ಶಿವಮೊಗ್ಗದ ವೆಂಕಟೇಶ್ ನಗರದ ಸನತ್(22) ಸೇರಿ ಮೂವರು ಪ್ರಯಾಣಿಸುತ್ತಿದ್ದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಬೆಂಕಿ ತಗುಲಿದೆ. ಸನತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಭದ್ರಾವತಿಯ ಉಜ್ಜನೀಪುರದ ರುದ್ವಿಕ್ ಮತ್ತು ಅನೋಕ್ ಇಬ್ಬರಿಗೆ ಗಾಯಗಳಾಗಿವೆ. ಇವರನ್ನ ಶಿವಮೊಗ್ಗದ ಶಿವಮೊಗ್ಗದ ಎನ್ ಹೆಚ್ ಗೆ ರವಾನಿಸಲಾಗಿದೆ.

ಮಂಡಗದ್ದೆಯ ಊಟಕ್ಕೆ ತೆರಳಿದ್ದ ಮೂವರು ಊಟ ಮುಗಿಸಿ ಶಿವಮೊಗ್ಗ ಕಡೆ ಬರುವಾಗ ಕೆಂಪೇಗೌಡರ ಹೋಟೆಲ್ ಮುಂದಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸನತ್ ಸಾವನ್ನಪ್ಪಿದ್ದಾನೆ. ಆದರೆ ಕಾರು ಹೊತ್ತುಕೊಂಡು ಉರಿದಿದೆ. ಕಾರು ಹಾಗೆ ಹೊತ್ತಿ ಉರಿಯಲು ಸರಿಯಾದ ಕಾರಣ ತಿಳಿದು ಬಂದಿಲ್ಲ.

ತುಂಗ ನಗರದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಜರುಗಿಸಿದ್ದಾರೆ. ಗಾಯಗೊಂಡ ಹುಡುಗರು ಎಲ್ಲರೂ 25 ವರ್ಷದ ಒಳಗಿನ ಹುಡುಗರು ಎನ್ನಲಾಗಿದೆ.

ಇಂದು ಜಿಲ್ಲೆಯಲ್ಲಿ 260 ಜನರಲ್ಲಿ ಕೊರೋನ ಸೋಂಕು ಪತ್ತೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ನಿನ್ನೆ 230 ಜನರಲ್ಲಿ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದ್ದು ಇಂದು 260 ಜನರಿಗೆ ಸೋಂಕು ಕಾಣಿಸಿಕೊಂಡಿದೆ.  ಸಾವಿನ ಸಂಖ್ಯೆ  1073 ರಲ್ಲಿಯೇ ಇದೆ.

2587 ಜನರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಇದರಲ್ಲಿ 2455 ಜನರಲ್ಲಿ ಕೊರೋನ ನೆಗೆಟಿವ್ ಎಂದು ವರದಿಬಂದಿದೆ.

ಇಂದು 277 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.  ಕೋವಿಡ್ ಕೇರ್ ಸೆಂಟರ್ ಗೆ 00 ಜನರನ್ನ ಇಂದು ಸೇರಿಸಲಾಗಿದ್ದು, 40 ಜನರನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 1467 ಜನರನ್ನ  ಹೋಂ ಐಸೋಲೇಷನ್ ನಲ್ಲಿರಲು ಸೂಚಿಸಲಾಗಿದೆ.

ಒಟ್ಟು ಜಿಲ್ಲೆಯಲ್ಲಿ 1611 ಜನರಲ್ಲಿ ಕೊರೋನ ಪಾಸಿಟಿವ್ ಆಕ್ಟಿವ್ ಕೇಸ್ ಗಳಿವೆ. ಶಿಕ್ಷಣ ಸಂಸ್ಥೆಗಳಲ್ಲಿರುವ ಇಂದು  472 ಶಿಕ್ಷಣ ಸಂಸ್ಥೆಗಳವರನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ  32 ಜನರಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ಬುಲಿಟಿನ್ ತಿಳಿಸಿವೆ.

ತಾಲೂಕವಾರು ಹೀಗಿದೆ

ಶಿವಮೊಗ್ಗ ತಾಲೂಕಿನಲ್ಲಿ 131, ಭದ್ರಾವತಿ 48, ತೀರ್ಥಹಳ್ಳಿಯಲ್ಲಿ 17, ಶಿಕಾರಿಪುರದಲ್ಲಿ 17, ಸಾಗರದಲ್ಲಿ 26,  ಹೊಸನಗರದಲ್ಲಿ 05, ಸೊರಬದಲ್ಲಿ 04, ಹೊರ ಜಿಲ್ಲೆಯಲ್ಲಿ 12 ರಲ್ಲಿ ಪಾಸಿಟಿವ್ ಕಂಡುಬಂದಿದೆ.

ಇಲ್ಲಿ ಚಪ್ಪಲಿ ಸವೆಯುತ್ತೆ ಆದರೆ ನಿಜವಾದ ಫಲಾನುಭವಿಗಳಿಗೆ ಮನೆ ಸಿಗೊಲ್ಲ ಕಾರಣವೇನುಗೊತ್ತಾ?

ಸುದ್ದಿಲೈವ್.ಕಾಂ/ರಿಪ್ಪನ್ ಪೇಟೆ

ಇಲ್ಲಿನ ಹುಂಚಾ ಗ್ರಾಮ ಪಂಚಾಯಿತಿಯಲ್ಲಿ ಹಂಚಲಾಗಿರುವ ಬಸವ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಮನೆಗಳನ್ನ ಹಂಚಲಾಗಿದ್ದು ಬಹುತೇಕ ಮನೆಗಳು ನಿಜವಾದ ಫಲಾನುಭವಿಗಳಿಗೆ ಹಂಚಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಈ ಆರೋಪಗಳು ಗ್ರಾಪಂ ಸದಸ್ಯರ ವಿರುದ್ಧವೇ ಕೇಳಿ ಬರುತ್ತಿರುವುದು ಬಹಳ ವಿಶೇಷವಾಗಿದೆ.

20 ವರ್ಷದ ಹಿಂದೆ ಮನೆ ಬಿದ್ದು ಹೋಗಿರುವವರು, 2019 ರಿಂದ ಅರ್ಜಿ ಹಾಕಿ ಗ್ರಾಮಪಂಚಾಯಿತಿಗೆ ಓಡಾಡುತ್ತಿದ್ದರಿಗೆ ಮನೆ ಹಂಚದೆ ಪಿಡಿಒಗಳಿಗೆ ಗ್ರಾಮಪಂಚಾಯಿತಿ ಸದಸ್ಯರೇ ಬಿಡುತ್ತಿಲ್ಲವೆಂಬುದು ಮನೆಗೆ ಅರ್ಜಿ ಹಾಕಿ ಕಳೆದ 20 ವರ್ಷದಿಂದ ಅರ್ಜಿ ಹಾಕಿದವರ ಕೂಗಾಗಿದೆ.

ಕಳೆದ 20 ವರ್ಷದಿಂದ ಹಿರಿಯಣ್ಣ ಎಂಬುವರು ಇಂದಿಗೂ ಗುಡಿಸಲು ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರು ಗಂಡ ಹೆಂಡತಿ ಇಬ್ವರೇ ಇದ್ದು ಕಳೆದ 20 ವರ್ಷದಿಂದ ಗ್ರಾಪಂ ಅಲೆದಾಡುತ್ತಿದ್ದಾರೆ. ಪಿಡಿಒ ಬಂದು ಸ್ಥಳ ಪರಿಶೀಲಿಸಿದ್ದಾರೆ. ಆದರೆ ಮೊನ್ನೆ ನಡೆದ ಗ್ರಾಮ ಸಭೆಯಲ್ಲಿ ಇವರ ಹೆಸರು ಕೈಬಿಡಲಾಗಿದೆ.

ಇಂದ್ರಮ್ಮ ಎಂಬುವರು 2019 ರಿಂದ ಅರ್ಜಿ ಹಾಕಿದ್ದಾರೆ ಅವರಿಗೂ ನೀಡಿಲ್ಲ. ಅದೇರೀತಿ 50 ವರ್ಷದಿಂದ ಅರ್ಜಿ ಹಾಕಿದವರಿಗೆ ಮನೆ ನೀಡಿಲ್ಲ. ಜ.13 ರಂದು ನಡೆದ ಗ್ರಾಮ ಸಭೆಯಲ್ಲಿ ಚರ್ಚಿಸಿದ ಶಿಫಾರಸ್ಸಿನಂತೆ ಹಾಗೂ ಜ. 17 ರಂದು ಗ್ರಾಮ ಸದಸ್ಯರ ವಸತಿ ರಹಿತರ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ 30 ಜನರನ್ನ ಆಯ್ಕೆ ಮಾಡಲಾಗಿದೆ. ಆದರೆ ಈ ಹಂಚಿಕೆಗೆ ಸದಸ್ಯರ ಶಿಫಾರಸ್ಸಿನಂತೆ ನಡೆದಿದೆಯೇ ಹೊರತು ನಿಜವಾದ ಫಲಾನುಭವಿಗಳನ್ನ ಕೈಬಿಡಲಾಗಿದೆ ಎಂಬುದು ಆರೋಪವಾಗಿದೆ.

23 ಜನರಿಗೆ ಬಸವ ಯೋಜನೆಯಲ್ಲಿ ಮನೆ ಹಂಚಲಾಗಿದೆ ಇನ್ನು ಉಳಿದ 7 ಮನೆಗಳನ್ನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ ಅಡಿ ಹಂಚಲಾಗಿದೆ. ಈ ಯೋಜನೆಯನ್ನ ಪಡೆದ ಬಹುತೇಕ ಫಲಾನುಭವಿಗಳು ತೋಟ ಹೊಂದಿದವರಾಗಿದ್ದಾರೆ ಎಂದು ಮನೆಗಾಗಿ ಕಚೇರಿ ಅಲೆದು ಅಲೆದು ಚಪ್ಪಲಿ ಸವೆಸಿದವರ ಕೂಗಾಗಿದೆ.

ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಭದ್ರಾವತಿ ನಡುವೆ ಬರುವ ಎಲ್‍ಸಿ ನಂ.34ರಲ್ಲಿ ರೈಲ್ವೇ ಓವರ್‍ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರದ ದೃಷ್ಠಿಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಚಾಲಕರು/ಪ್ರಯಾಣಿಕರು ತಾತ್ಕಾಲಿಕ ಅವಧಿಗೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸೂಚಿಸಲಾಗಿರುವ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ತಿಳಿಸಿದ್ದಾರೆ.

ಪರ್ಯಾಯ ಮಾರ್ಗಗಳು : ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗ ಬಿಳಿಕಿ ಕ್ರಾಸ್-ಕೃಷ್ಣಪ್ಪ ವೃತ್ತದ ಮುಖಾಂತರ ಭದ್ರಾವತಿ ತಲುವುದು.

ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಸಂಚರಿಸುವ ವಾಹನಗಳು ಅಂಡರ್‍ಬ್ರಿಡ್ಜ್- ಉಂಬ್ಳೇಬೈಲ್ ರಸ್ತೆ ಕೃಷ್ಣಪ್ಪ ವೃತ್ತ- ರಾಷ್ಟ್ರೀಯ ಹೆದ್ದಾರಿ-69ರ ಮುಖಾಂತರ ಶಿವಮೊಗ್ಗಕ್ಕೆ ಸಂಚರಿಸಿ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿದಿರೆ ಗ್ರಾಮದಲ್ಲಿ ಶಾಸಕ ಕೆ.ಬಿ.ಅಶೋಕ ನಾಯ್ಕ್ ರಿಂದ ಜಲಜೀವನ್ ಮಿಷನ್ ಕಾಮಗಾರಿಗೆ ಭೂಮಿಪೂಜೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗ ತಾಲೂಕಿನ ಬಿದರೆ ಗ್ರಾಮದಲ್ಲಿ ಜಲ ಜೀವನ ಅಭಿಯಾನ ಯೋಜನೆಯಡಿ ಗ್ರಾಮದ ಪ್ರತಿ ಮನೆಗೆ ಕುಡಿಯುವ ನೀರಿನ ನಳ(ನಲ್ಲಿ) ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ್ ಭೂಮಿ ಪೂಜೆ ನೆರವೇರಿಸಿದರು. ಈಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೇಂದ್ರದ ಈ ಯೋಜನೆಯನ್ನ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀ ಮತಿ, ಉಪಾಧ್ಯಕ್ಷ ತುಳಸಿ ಸಂಪತ್, ಸದಸ್ಯರಾದ ಮನುದಿಪ್, ರಂಗನಾಥ್ ನಾಗರಾಜಪ್ಪ ದೊರೆಸ್ವಾಮಿ ಮೀನಾಕುಮಾರಿ ಪುಷ್ಪ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಗೋಪಾಲ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಧರ್, ಜಗದೀಶ್, ಸಂಪತ್ ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಶಿವಮೊಗ್ಗ ನಗರದಲ್ಲಿ ಮೂರು ದಿನಗಳ ವರೆಗೆ ಶಾಲೆಗಳ ರಜೆ ಘೋಷಣೆ-ಮಾರಿ ಜಾತ್ರೆ ಮಾರ್ಚ್ ನಲ್ಲಿ ನಡೆಯುವ ಸಾಧ್ಯತೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಕರೋನ ಹೆಚ್ಚಳದ ಹಿನ್ಬಲೆಯಲ್ಲಿ ನಾಳೆಯಿಂದ ಶಿವಮೊಗ್ಗದ ಶಾಲೆಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ಇದು ಶಿವಮೊಗ್ಗ ನಗರಕ್ಕೆ ಮಾತ್ರ ಅನ್ವಯವಾಗಲಿದೆ

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಸಚಿವ ಈಶ್ವರಪ್ಪ ಶಿವಮೊಗ್ಗದ 45 ಶಾಲೆಗಳಲ್ಲಿ 200 ವಿದ್ಯಾರ್ಥಿಗಳಿಗೆ ಕೊರೋನ ಕಾಣಿಸಿಕೊಂಡಿದೆ. ಹಾಗಾಗಿ ನಾಳೆಯಿಂದ ಶುಕ್ರವಾರದ ವರೆಗೆ ರಜೆ ಘೋಷಿಸಲಾಗಿದೆ.

1 ನೇ ತರಗತಿಯಿಂದ 9 ನೇ ತರಗತಿಯ ಎಲ್ಲಾ ಶಾಲೆಗಳ ಮಕ್ಕಳಿಗೆ ರಜೆ ಘೋಷಿಸಿದ್ದು, ಈ ಬಗ್ಗೆ ಮತ್ತೆ ಭಾನುವಾರ ಸಭೆ ಕೂರಲಾಗುವುದು. ನಗರ ಮಾತ್ರ ಈ ಶಾಲೆಗಳು ರಜೆಯಾಗಲಿದೆ

ಮಾರ್ಚ್ ನಲ್ಲಿ ಮಾರಿಕಾಂಬ ಜಾತ್ರೆ

ಮಾರಿಕಾಂಬ ಜಾತ್ರೆಯನ್ನ ಸರಳ ರೀತಿಯಲ್ಲಿ ಮಾರ್ಚ್ ಕೊನೆವಾರದಲ್ಲಿ ನಡೆಸಲು ಮಾತ್ರ ಅವಕಾಶವಿದೆ. ಆದರೆ ಕೋವಿಡ್ ಹೆಚ್ಚಾದರೆ ಆ ಸಂದರ್ಭದಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಅದಕ್ಕೆ ಬದ್ದವೆಂದು ಜಾತ್ರ ಸಮಿತಿ ಒಪ್ಪಿದೆ. 6 ದಿನ ಜಾತ್ರೆಯನ್ನ 2 ದಿನಕ್ಕೆ ಮೊಟಕುಗೊಳಿಸಲಾಗಿದೆ.

ಎಕ್ಸಿಬಿಷನ್ ಮಳಿಗೆಗಳು ರನ್ನ ನಡೆಸದಂತೆ ಸೂಚಿಸಲಾಗಿದ್ದು ಮಾರಿಕಾಂಬ ಜಾತ್ರೆ ಸಮಿತಿ ಒಪ್ಪಿದೆ ಎಂದರು.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಒತ್ತುನೀಡಲಾಗಿದೆ-ಶಾಸಕ ಆಯನೂರು ಮಂಜುನಾಥ್.

ಸುದ್ದಿಲೈವ್.ಕಾಂ/ಶಿವಮೊಗ್ಗ

ಅತಿಥಿ ಉಪನ್ಯಾಸಕರಿಗೆ ಅನುಕೂಲ ಹೆಚ್ಚಿಸಿದೆ. ಇದು ಸುಲಭವಾಗಿ ಹೆಚ್ಚಳವಾಗಿರಲಿಲ್ಲ. ಅದರ ಹಿಂದೆ ಹೋರಾಟಗಳಿವೆ. ಸದನದಲ್ಲಿ ಅವರ ಬಗ್ಗೆ ಚರ್ಚೆನೇ ಆಗುತ್ತಿರಲಿಲ್ಲ. ಆದರ ಬಗ್ಗ ಚರ್ಚೆ ಆಗುವಂತೆ ಮಾಡಿರುವ ಎಂಬ ಗೌರವವಿದೆ ಎಂದು ಶಾಸಕ ಆಯನೂರು ಮಂಜುನಾಥ್ ಹೇಳಿದ್ದಾರೆ.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರನ್ನ ಮತ್ತು ಸರ್ಕಾರದವರನ್ನ ಒಂದೇ ವೇದಿಕೆಯ ಮೇಲೆ ಕೂರಿಸಲಾಗಿದೆ. ಸಮಗ್ರ, ಬೇಡಿಕೆಗಳನ್ನ ಸಮಸ್ಯೆಗಳನ್ನ ಚರ್ಚಿಸಲಾಗಿದೆ. ಹಬ್ಬದ ಒಳಗೆ ಏನು ಪರಿಹಾರ ಕೊಡುತ್ತೇವೆ ಕೊಡಿ ಎಂದಿದ್ದೇವೆ. ಹಬ್ಬಕ್ಕೆ ಘೋಷಣೆ ಆಗಿದೆ.

5 ವರ್ಷ ಸರ್ವಿಸ್ 32 5 ವರ್ಷಕ್ಕಿಂತ ಕಡಿಮೆ ಮತ್ತು ಟೀಚಿಂಗ್ ಕ್ಯಾಲಿಫೈ ಇಲ್ಲದವರಿಗೆ 25 ಸಾವಿರ, ಅರ್ಹತೆ ಇಲ್ಲದವರಿಗೆ 20 ಸಾವಿರ ಹಣ ನಿಗದಿ ಪಡಿಸಿರುವುದು ಸ್ವಾಗತಾರ್ಹವೆಂದರು. ಈ ರೀತಿ ಆದೇಶ ಬಂದರೆ ಒಂದಿಷ್ಟು ಗೊಂದಲವಾಗುತ್ತದೆ.

ಸಂಬಳ ಹೆಚ್ಚಾದ ಕಾರಣ ವಾರಕ್ಕೆ 15 ಪಿರಿಯಡ್ ಆಗಬೇಕಿದೆ. ಆದರೆ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. 9.5 ಸಾವಿರ ಒಖಗೆ ಬರುತ್ತಾರೆ. 5½ ಸಾವಿರ ಅತಿಥಿ ಉಪನ್ಯಾಸಕರು ಅರ್ಹರು 4½ ಅತಿಥಿ ಉಪನ್ಯಾಸಕರು ಮಾತ್ರ, ಆದರೆ ತರಗತಿ ಹೆಚ್ಚಿಸುವ ಚಿಂತನೆ ಆಗುತ್ತದೆ ಕ್ಲಾಸ್ ರೂಂ ಹೆಚ್ಚಿಸುವುದು.

ಕೆಲ ತರಗತಿಯಲ್ಲಿ 110 ಜನ ವಿದ್ಯಾರ್ಥಿಗಳಿದ್ದಾರೆ. ಕೊರೋನ ಹಿನ್ನಲೆಯಲ್ಲಿ ತರಗತಿಯಲ್ಲಿ 50-50 ವಿದ್ಯಾರ್ಥಿಗಳನ್ನ ಮಾಡಿದಲ್ಲಿ ಈ ಅಭದ್ರತೆ ತರಬಹುದಾಗಿದೆ. ಸೇವಾ ಭದ್ರತೆ ಬೇಕಿದೆ. ಯಾವುದೇ ಕಾರಣಕ್ಕೂ ಅತಿಥಿ ಉಪನ್ಯಾಸಕರನ್ನ ಉಳಿಸುವ ಪ್ರಯತ್ನಗಳು ನಡೆದಿದೆ. ಜ.30 ಒಳಗೆ ಆನ್ ಲೈನ್ ಅರ್ಜಿ ಹಾಕಬೇಕಿದೆ. ಮೊದಲು ಅರ್ಜಿ ಹಾಕಿಕೊಳ್ಳಿ ಎಂಬುದು ಸಲಹೆ.

ಇವರು ಪ್ರತಿ ವರ್ಷ ಹಾಕಿಕೊಳ್ಳಬಹುದು ಸರ್ಕಾರದ ವಿಶ್ಲೇಷಣೆ ಪ್ರಕಾರ 14000 ಅತಿಥಿ ಉಪನ್ಯಾಸಕರಲ್ಲಿ 9⅓ ಸಾವಿರ ಅತಿಥಿ ಉಪನ್ಯಾಸಕರು ಉಳಿಯಲಿದ್ದಾರೆ. ಇನ್ನು 1½ ಸಾವಿರ ಅತಿಥಿ ಉಪನ್ಯಾಸಕರನ್ನ ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಆದರೂ ಇನ್ನೂ 3 ಸಾವಿರಕ್ಕೂ ಹೆಚ್ಚು ಜನ ಹೊರ ಉಳಿಯಲುದ್ದಾರೆ. ಆದರೆ ತರಗತಿಗಳನ್ನ ಪ್ರತ್ಯೇಕಿಸಿದರೆ ಉಪನ್ಯಾಸಕರನ್ನ ಉಳಿಸಿಕೊಳ್ಳಬಹುದು. ಈ ಬಗ್ಗೆ ಸರ್ಕಾರಕ್ಕೆ ಪತ್ರಬರೆದಿರುವುದಾಗಿ ತಿಳಿಸಿದರು.

ಈ ಆದೇಶದ ವಿರುದ್ಧ ಕೆಲ ಅತಿಥಿ ಉಪನ್ಯಾಸಕರು ವಾಟ್ಸಪ್ ನಲ್ಲಿ ಬಿಲೋದ ಬೆಲ್ಟ್ ಮಾತನಾಡುತ್ತಿದ್ದಾರೆ. ನಿಮ್ಮ ಸಮಸ್ಯೆ ಅರಿವಿದೆ. ಆದರೆ ಬಿಲೋದ ಬೆಲ್ಟ್ ಮಾತನಾಡಿದ್ದಾರೆ. ಇದನ್ನ ಬೆಂಬಲಿಸಲಾಗದು. ಬಿಲೋದ ಬೆಲ್ಟ್ ಮಾತನಾಡುವುದು ಬಿಡಿ. ಮತ್ತೆ ಕೊರೋನ ಬಂದರೆ ಇರುವ ಅವಕಾಶವೂ ಕೈಬಿಡುವ ಸಾಧ್ಯತೆ ಇದೆ. ಕೆಟ್ಟಪದಗಳಲ್ಲಿ ತೆಗಳುವ ಬದಲು ಏನಾಗಬೇಕು ಚರ್ಚಿಸಿ ಎಂದರು.

ಜಿಲ್ಲೆಯಲ್ಲಿ 115 ವಿದ್ಯಾರ್ಥಿಗಳಲ್ಲಿ ಹಾಗೂ 26 ಶಿಕ್ಷಕರಲ್ಲಿ ಕಾಣಿಸಿಕೊಂಡ ಕೊರೋನ-ಮುನ್ನಚ್ಚರಿಕೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಹರಡದಂತೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು.

ಅವರು ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.

ಜಿಲ್ಲೆಯಲ್ಲಿ ಇದುವರೆಗೆ ಪ್ರಾಥಮಿಕ ಶಾಲಾ ಹಂತದ 115 ವಿದ್ಯಾರ್ಥಿಗಳಿಗೆ ಹಾಗೂ 26 ಶಿಕ್ಷಕರು ಕೋವಿಡ್ ಪಾಸಿಟಿವ್ ಆಗಿದ್ದಾರೆ. ಇದೇ ರೀತಿ ಕಾಲೇಜು ಹಂತದ 35 ವಿದ್ಯಾರ್ಥಿಗಳು ಹಾಗೂ 6 ಶಿಕ್ಷಕರು ಪಾಸಿಟಿವ್ ಆಗಿದ್ದು, 5ಶಾಲೆಗಳನ್ನು ಹಾಗೂ 4ಕಾಲೇಜುಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಲಾಗಿದೆ. ಪ್ರತಿದಿನ ಶಾಲಾ ಕಾಲೇಜು ಆರಂಭಕ್ಕೆ ಮೊದಲು ಕಡ್ಡಾಯವಾಗಿ ವಿದ್ಯಾರ್ಥಿಗಳ ಟೆಂಪರೇಚರ್ ತಪಾಸಣೆ ನಡೆಸಬೇಕು. ಜ್ವರದ ಲಕ್ಷಣ ಇರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಬೇಕು. ಅಂತಹ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯಗೊಳಿಸಬಾರದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಇದೇ ರೀತಿ ವಿದ್ಯಾರ್ಥಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ಇರಿಸಬೇಕು. ವಿದ್ಯಾರ್ಥಿ ನಿಲಯಗಳಲ್ಲಿ 5ಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳು ಕಂಡು ಬಂದರೆ ಅಂತಹ ವಿದ್ಯಾರ್ಥಿ ನಿಲಯಗಳನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ ಮಾಡಿ, ಅಲ್ಲಿರುವ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ ಅಲ್ಲಿಯೇ ನೋಡಿಕೊಳ್ಳಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ ಕೋವಿಡ್ ಮೇಲೆ ನಿಗಾ ಇರಿಸಲು ಈ ಕುರಿತು ವರದಿಯನ್ನು ಸಲ್ಲಿಸಲು ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಇದುವರೆಗೆ ಜಿಲ್ಲೆಯಲ್ಲಿ ಕಂಡು ಬಂದಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಪೈಕಿ ಶೇ.99ರಷ್ಟು ಮಂದಿಯಲ್ಲಿ ರೋಗ ಲಕ್ಷಣ ಇಲ್ಲದಿದ್ದರೂ, ಎಚ್ಚರಿಕೆಯನ್ನು ವಹಿಸಬೇಕು ಎಂದು ಅವರು ಹೇಳಿದರು.

ಲಸಿಕೆ ನೀಡಿಕೆ:

ಜಿಲ್ಲೆಯಲ್ಲಿ ಲಸಿಕೆಯನ್ನು ಇದುವರೆಗೂ ಪಡೆಯದವರು ಹಾಗೂ ಎರಡನೇ ಡೋಸ್ ಬಾಕಿಯಿರುವ ಪ್ರತಿಯೊಬ್ಬರಿಗೂ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಶೇ.98 ಮಂದಿ ಪ್ರಥಮ ಡೋಸ್ ಹಾಗೂ ಶೇ.83ರಷ್ಟು ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಅಭಿಯಾನದ ರೀತಿಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಪ್ರಸ್ತುತ 88ಸಾವಿರ ಡೋಸ್ ಕೋವಿಶೀಲ್ಡ್ ಮತ್ತು 23ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ. 60ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯ ಹಾಗೂ 15ರಿಂದ 17 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯವನ್ನು ಸಹ ಒಂದು ವಾರದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ನಗರಾಭಿವೃದ್ಧಿ ಯೋಜನಾಧಿಕಾರಿ ಮೂಕಪ್ಪ ಕರಿಭೀಮಣ್ಣನವರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಾ.ನಾಗರಾಜ ನಾಯಕ್, ಡಿಡಿಪಿಐ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳಾಗುವ ಔಷಧ ಕೊಡುವುದಾಗಿ ನಂಬಿಸಿ 40 ಗ್ರಾಂ ಮಾಂಗಲ್ಯ ಸರ ಕಳವು

ಸುದ್ದಿಲೈವ್.ಕಾಂ/ಶಿವಮೊಗ್ಗ

ಮಕ್ಕಳಾಗುವ ಔಷಧ ಕೊಡುತ್ತೇವೆಂದು ನಂಬಿಸಿ ವಿವಾಹಿತ ಮಹಿಳೆಯೋರ್ವರ 40 ಗ್ರಾಂನ ಮಾಂಗಲ್ಯ ಸರವನ್ನ ದೋಚಿಕೊಂಡು ಹೋಗಿರುವ ಘಟನೆ ವೆಂಕಟೇಶ ನಗರದಲ್ಲಿ ನಡೆದಿದೆ. ಮಾಂಗಲ್ಯಸರದ ಮೌಲ್ಯ ಸುಮಾರು 1 ಲಕ್ಷ 20 ಸಾವಿರ ರೂ ಎಂದು ಅಂದಾಜಿಸಲಾಗಿದೆ.

ವೆಂಕಟೇಶ ನಗರದ ಚಾನೆಲ್ ನ 5 ನೇ ತಿರುವಿನ ಚಾನೆಲ್ ಏರಿಯಾದಲ್ಲಿ ಮನೆಯ ಮುಂದೆ ಸಾವಿತ್ರಿ ಎಂಬ ವಿವಾಹಿತ ಮಹಿಳೆ ನೀರು ಹಿಡಿಯುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಆಶಾ ಕಾರ್ಯಕರ್ತೆ ಪ್ರೇಮರವರು ನಿಮಗೆ ಮಕ್ಕಳಾಗಿಲ್ಲವೆಂದು ತಿಳಿಸಿದ್ದು ನಿಮಗೆ ಔಷಧಕೊಡುತ್ತೇವೆ ಮಕ್ಕಳಾಗುತ್ತದೆ ಎಂದು ನಂಬಿಸಿದ್ದಾರೆ.

ಸಾವಿತ್ರಿ ಮತ್ತು ಮಂಜುನಾಥ್ ಅವರಿಗೆ ಮದುವೆಯಾಗಿ ಅನೇಕ ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡು ಮನೆಯ ಮುಂದ ಬಂದ ಇಬ್ಬರು ಅಪರಿಚಿತರು ಮಹಿಳೆಗೆ ಮಕ್ಕಳಾಗುವ ಔಷಧ ಕೊಡಿಸುವುದಾಗಿ ನಂಬಿಸಿದ್ದಾರೆ.

ಆದರೆ ಪತಿ ಮಂಜುನಾಥ್ ಇದನ್ನ ವಿರೋಧಿಸಿ ಅಪರಿಚಿತರನ್ನ ವಾಪಾಸ್ ಕಳುಹಿಸಿದ್ದಾರೆ. ಮಂಜುನಾಥ್ ಕೆಲಸಕ್ಕೆ ಹೋದ ಸಮಯವನ್ನ ಗಮನಿಸಿ ಮತ್ತೆ ಈ ಇಬ್ಬರು ಅಪರಿಚಿತರು ಆ ಮಹಿಳೆಯ ಮನೆಯ ಬಳಿ ಬಂದು ಔಷಧ ತೆಗೆದುಕೊಳ್ಳಿ ಯಾವುದೇ ಹಣವಿಲ್ಲವೆಂದು ಮನೆಯ ಹಾಲ್ ಗೆ ಬಂದು ನಿಂತಿದ್ದಾರೆ.

ಮನೆಯ ಅಂಗಳದಲ್ಲಿ ಬಾಟಲ್ ತೆಗೆದು ಇದನ್ನ ಕುತ್ತಿಗೆಗೆ ಹಚ್ಚುತ್ತೇವೆ ಕುತ್ತಿಗೆಯಲ್ಲಿರುವ ಮಾಂಗಲ್ಯ ಸರ ತೆಗೆದಿಡಿ ಎಂದಿದ್ದಾರೆ. ಮಹಿಳೆ ಫ್ರಿಡ್ಜ್ ಮೇಲೆ ಸರ ತೆಗೆದಿಟ್ಟಿದ್ದಾರೆ. ಬಿಸಿನೀರು ಬೇಕು ಅದರ ಜೊತೆ ಔಷಧ ಕುಡಿಯ ಬೇಕೆಂದು ಹೇಳಿದ ಪರಿಣಾಮ ಮಹಿಳೆ ಅಡುಗೆ ಮನೆಗೆ ಹೋಗಿ ಬಿಸಿನೀರು ಕಾಯಿಸಿಕೊಂಡು ಬರುವ ವೇಳೆ ಫ್ರಿಡ್ಜ್ ಮೇಲಿನ ಮಾಂಗಲ್ಯ ಸರ ಮಂಗಮಾಯವಾಗಿದೆ.

ಈ ಬಗ್ಗೆ ಮಹಿಳೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಯನಗರ ಪೊಲೀಸರ ಕ್ರೈಂ ಬ್ರಾಂಚ್ ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ಗೌಸಿಯಾ ಹೋಟೆಲ್ ನಲ್ಲಿ ಮಾರಾಮಾರಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ   ಗೌಸಿಯಾ ಹೋಟೆಲ್ ನಲ್ಲಿ ಗ್ಯಾಂಗ್ ವಾರ್ ಟೈಪು ಮಾರಾಮಾರಿ ನಡೆದಿದೆ. ರಿಯಲ್ ಎಸ್ಟೇಟ್ ನ ಹಣದ ವಿಚಾರದಲ್ಲಿ ಯುವಕರ ನಡುವೆಯೇ ಭರ್ಜರಿ ಕಾಳಗವೇ ನಡೆದಿದೆ

ಶಿವಮೊಗ್ಗದ ಬಹುತೇಕ ಮಂದಿಗೆ ಈ ಗೌಸಿಯಾ ಹೋಟೆಲ್ ನೆನಪಿರಬಹುದು, ಹೋಗಲಿ ಮಾಲೀಕ  ಮನ್ಸೂರ್ ನೆನಪಿರಬಹುದು. ಹೋಗಲಿ ಅಸಲಿ ಫ್ಲಾಶ್ ಬ್ಯಾಕ್ ಹೇಳಬಿಡುತ್ತೇನೆ. ಬುಡಬುಡಕಿ ಸಾಧಿಕ್ ನ ಮರ್ಡರ್ ಪ್ರಕರಣದಲ್ಲಿ ಅರೊಪಿಯಾಗಿ ಜೈಲಿನಲ್ಲಿರುವ ಮನ್ಸೂರೇ ಈ ಹೋಟೆಲ್ ನ ಮಾಲೀಕ. ಬುಡಬುಡಕಿ ಸಾಧಿಕ್ ನ ಕೊಲೆಯೂ ಇದೇ ರಿಯಲ್ ಎಸ್ಟೇಟ್ ವಿಚಾರದಲ್ಲಿ ನಡೆದಿತ್ತು.

ಈಗ ಗೌಸಿಯಾ ಹೋಟೆಲ್ ನಲ್ಲಿ ಇಂದು ರಾತ್ರಿ ನಡೆದಿದ್ದು ಅದೇ ರಿಯಲ್ ಎಸ್ಟೇಟ್ ವಿಚಾರಕ್ಕೆ.  ಒಂದು ತರಹ  ರಿಯಲ್ ಎಸ್ಟೇಟ್ ಉದ್ದಿಮೆಗಳ ಹಾಟ್ ಸ್ಪಾಟ್ ಆಗೋಗಿರುವ ಗೌಸಿಯಾ ಹೋಟೆಲ್ ನಲ್ಲಿ ಮಾಜಿಕಾರ್ಪರೇಟರ್ ರೆಹಮಾನ್ ಅವರ ಮಗ ಶಫಿ ಜಮೀನಿನ ಖರೀದಿ ವಿಚಾರದಲ್ಲಿ  ಜುನೈದ್  ಬಳಿ ಬಂದು ಹಣ ಕೇಳ್ತಾನೆ.

ಮನ್ಸೂರ್ ನ ಸಹೋದರ ಸೈಫುಲ್ಲಾ ಈ ಜುನೈದ್ ನ ಸಂಬಂಧಿಯೂ ಸಹ ಹೌದು, ಯಾವಾಗ ಜುನೈದ್ ಹಣದ ವಿಚಾರ ನನ್ನ ಬಳಿ ಹೇಳಬೇಡ ಯಾರಿಗೆ ನೀನು ವ್ಯವಹಾರ ಮಾಡಿಕೊಂಡಿದ್ಯೋ ಅವರನ್ನ ಕೇಳು ಎಂದು ಹೇಳುತ್ತಾನೆ. ಇಷ್ಟಕ್ಕೆ ಕುಪಿತನಾದ‌ ಶಫಿ ಕೂಗಾಡುತ್ತಾನೆ. ಜುನೈದ್ ಮೇಲೆ ಹಲ್ಲೆ ನಡೆಸುತ್ತಾನೆ.

ಹೊರಗಡೆ ಹೋಗಿ ಸಿದ್ಧಿಕಿಯನ್ನ ಕರೆದುಕೊಂಡು ಬರುತ್ತಾನೆ.  ಸಿದ್ದಕಿ, ಶಫಿ ಹಾಗೂ ಜುನೈದ್ ಮತ್ತು ಸೈಫುಲ್ಲಾ ನಡುವೆ ಗ್ಯಾಂಗ್ ವಾರ್ ಟೈಪು ಮಾರಾಮಾರಿ ನಡೆಯುತ್ತೆ. ಈ ವೇಳೆ ಸ್ಥಳಕ್ಕೆ ಬಂದ ದೊಡ್ಡಪೇಟೆ ಪೊಲೀಸರು ಮಧ್ಯಪ್ರವೇಶದಿಂದ ಜಗಳ ತಣ್ಣಗಾಗುತ್ತೆ.

ಜುನೈದ್ ಈ ವಿಚಾರದಲ್ಲಿ ಶಫಿ ವಿರುದ್ಧ ದೂರು ನೀಡುತ್ತಾನೆ.‌ ಶಫಿಗೆ ದೊಡ್ಡಪೇಟೆ ಪೊಲೀಸರು ಶರಣಾಗಲು ಸೂಚಿಸಿದ್ದಾರೆ.

x
error: Not protected