ತಂದೆ ಮಗನ ನಡುವೆ ಕುಡಿದು ಜಗಳ-ಕೋಲಿನಿಂದ ಹೊಡೆದು ತಂದೆಯ ಕೊಲೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದ ಮಂಡೇನ್ ಕೊಪ್ಪದಲ್ಲಿ ತಂದೆ ಮತ್ತು ಮಗನ ನಡುವೆ ಕುಡಿದು ಜಗಳವಾಗಿದ್ದು ಮಗನೇ ತಂದೆಯನ್ನ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ನಿನ್ನೆ ರಾತ್ರಿ ಮಂಡೇನ್ ಕೊಪ್ಪದಲ್ಲಿ ಮಗ ಮಧು (28) ಎಂಬಾತ ತಂದೆ ಕುಮಾರ ನಾಯ್ಕ(55)ನ ಜೊತೆ ಕುಡಿದು ಜಗಳವಾಡಿದ್ದಾನೆ. ದೊಣ್ಣೆಯಲ್ಲಿ ಹೊಡೆದಿದ್ದಾನೆ. ಕುಮಾರನಾಯ್ಕನಿಗೆ ಕಿವಿಯಲ್ಲಿ ರಕ್ತಬಂದಿತ್ತು.

ಆದರೆ ಹೊಡೆತ ತಿಂದ ಕುಮಾರ ನಾಯ್ಕ ಮನೆಯಿಂದ ಹೊರಗೆ ಹೊಗಿದ್ದು ತಡರಾತ್ರಿ ಮನೆಯ ಮುಂದಿನ ಕಟ್ಟೆಯ ಮೇಲೆ ಬಂದು ಮಲಗಿದ್ದು ಮಲಗಿದ್ದ ಕುಮಾರ ನಾಯ್ಕನ ಜೀವ ಹಾಗೆ ಹಾರಿ ಹೋಗಿದೆ.

ಆದರೆ ಈ ಮಧ್ಯೆ ಮಧು ತಮಟೆ ಬಾರಿಸುವವನ್ನ ಕರೆದುಕೊಂಡು ಬಂದು ಶವಸಂಸ್ಕಾರಕ್ಕೆ ಮುಂದಾಗಿದ್ದನು. ಆದರೆ ಕುಮಾರ ನಾಯ್ಕನ ಮಗಳು ಶಿಲ್ಪಬಾಯಿ ಇದನ್ನು ಕಂಡು ಗ್ರಾಮಸ್ಥರೊಂದಿಗೆ ತುಂಗಾ‌ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಮಧುವನ್ನ ಬಂಧನಕ್ಕೊಳಪಡಿಸಲಾಗಿದೆ. ಕುಮಾರ ನಾಯ್ಕನಿಗೆ ಗಿರೀಶ್, ಮಧು ಹಾಗೂ ಶಿಲ್ಪ ಬಾಯಿ ಎಂಬ ಮೂವರು ಮಕ್ಕಳಿದ್ದಾರೆ. ಕುಮಾರ ನಾಯ್ಕನ ಜೊತೆ ಮಧು ವಾಸವಾಗಿದ್ದು, ಇಬ್ವರೂ ಯಾವಾಗಲೂ ಕುಡಿದು ಜಗಳ ವಾಗುತ್ತಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.

Share to this News
  •  
  •  
  •  
  •  
  •  
  •  
  •  
  •  
  •  
  •