ಸ್ಥಳೀಯ ಸುದ್ದಿಗಳು

ಮೆಗಗಾನ್ ಅಧೀಕ್ಷಕ ಡಾ.ಶ್ರೀಧರ್ ಗೆ ಬೆದರಿಕೆ

ಸುದ್ದಿಲೈವ್/ಶಿವಮೊಗ್ಗ

ಮೆಗ್ಗಾನ್ ಅಧೀಕ್ಷಕ ಡಾ.ಶ್ರೀಧರ್ ಗೆ ಅಪರಿಚಿತನೋರ್ವ ಮೊಬೈಲ್ ನಲ್ಲಿ ಬ್ಲಾಕ್ ಮೇಲ್ ಮಾಡಿ ಲಂಚದ ಆರೋಪ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಯದಲ್ಲಿ ಸರ್ಕಾರಿ ನಾಮನಿರ್ದೇಶಕನಾಗಿರುವ ಡಾ.ಶ್ರೀಧರ್ ಗೆ ಹಿಂದಿನ‌ ಪ್ರಾಂಶುಪಾಲರಾಗಿದ್ದವರು ನೇಮಕಾತಿಯಲ್ಲಿ ಅವ್ಯವಹಾರ, ಅಕ್ರಮ ಹಣಕಾಸಿನ‌ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಇತ್ತು.

ಈ ಮಾಹಿತಿಯನ್ನ ಸಿಂಡಿಕೇಟ್ ನ ಸಭೆಯಲ್ಲಿ ಪ್ರಸ್ತಾಪ ಮಾಡದಂತೆ ಅಪರಿಚಿತ ಮೊಬೈಲ್ ನಂಬರ್ ನಿಂದ ವಾಟ್ಸಪ್ ಕಾಲ್ ನಲ್ಲಿ ಕರೆ ಮಾಡಿ ಯಾವುದೇ ವಿಷಯ ಪ್ರಸ್ತಾಪ ಆಗಬಾರದು. ಮತ್ತು ನಿಮ್ಮ ತಂಡದ ಯಾವ ಸದಸ್ಯರೂ ತುಟಿಬಿಚ್ಚ ಬಾರದು ಎಂಬ ಬೆದರಿಕೆ ಕರೆಗಳನ್ನ ಮಾಡಿದ್ದಾನೆ.

ನಂತರ ವಾಟ್ಸಪ್ ಚಾಟ್ ನಲ್ಲಿ ಬ್ಯಾಗಿನ‌ ವಿಷಯ ಪ್ರಸ್ತಾಪಿಸಿದ ಅಪರಿಚಿತನಿಗೆ ಪ್ರತ್ಯುತ್ತರವಾಗಿ ಯಾವ ಬ್ಯಾಗು ಎಂದು ಪ್ರತಿಕ್ರಿಯಿಸಿದ್ದಕ್ಕೆ ಅದನ್ನೇ ತಪ್ಪು ಎಂದು ಬಿಂಬಿಸಿದ್ದಾನೆ. ಈ ಹಿನ್ನಲೆಯಲ್ಲಿ ಆತನನ್ನ ಬ್ಲಾಕ್ ಲೀಸ್ಟ್ ಗೆ ಹಾಕಿದ್ದಾರೆ. ಈ ವಿಷಯವನ್ನ ಆರ್ ಎಸ್ ಎಸ್ ನ ಪ್ರಮುಖರ ಪಟ್ಟಾಭಿ ಮುಂದೆ ಪ್ರಸ್ತಾಪಿಸಿರುವ ಅಪರಿಚಿತ ಹಣಪಡೆದು ಡಾ.ಶ್ರೀಧರ್ ನಮ್ಮವರಿಗೆ ಹುದ್ದೆನೂ ನೀಡಿಲ್ಲ. ನೇಮಕಾತಿಗಾಗಿ 80 ಸಾವಿರ ಹಣವನ್ನ ವಾಪಸ್ ನೀಡಿಲ್ಲ ಎಂದಿದ್ದಾನೆ.

ನಮ್ಮವರು ಮೂರು ಜನರಿದ್ದಾರೆ. ಮೂವರಿಗೆ ಶ್ರೀಧರ್‌ಪೆಂಗನಾಮ ಹಾಕಿದ್ದಾರೆ ಎಂದು ಮೊಬೈಲ್ ಕರೆ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ಅಧೀಕ್ಷಕ ಡಾ.ಶ್ರೀಧರ್ ಅಪರಿಚಿತನ ವಿರುದ್ಧ ದೊಡ್ಡಪೇಟೆ‌ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಬ್ಲಾಕ್ ಮೇಲ್ ಮಾಡುತ್ತಿರುವ ಅಪರಿಚಿತನನ್ನ ಪತ್ತೆ ಮಾಡಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button