ಕ್ರೈಂ

ರೌಡಿಶೀಟರ್ ಜಾಫರ್ ಯಾನೆ ನಾಲಕ್ ಕಟ್ಟು ಬಂಧನ

ಸುದ್ದಿಲೈವ್. ಕಾಂ/ಶಿವಮೊಗ್ಗ

ಮಾರಕಾಸ್ತ್ರಗಳನ್ನ ಹಿಡಿದುಕೊಂಡು ಬೀಗ ಹಾಕಿ ಅಂಗಡಿಗೆ ಖನ್ನ ಹಾಕಲು ಹೊಂಚು ಹಾಕುತ್ತಿದ್ದ ರೌಡಿಶೀಟರ್ ನನ್ನ ತುಂಗನಗರ ಪೊಲೀಸರು ಬಂಧಿಸಿದ್ದಾರೆ.

ಕೆಳಗಿನ ತುಂಗಾನಗರದಲ್ಲಿ ಬಾಗಿಲು ಹಾಕಿದ್ದ ಅಂಗಡಿ ಬಳಿ ಅರ್ಧ ಅಡಿಯ ಎರಡು ರಾಡು ಹಿಡಿದು ಕುಳಿತಿದ್ದ ಜಾಫರ್ ಸಾಧಿಕ್ ಎಂಬ ರೌಡಿಶೀಟರ್ ನನ್ನ ಕಂಡು ಗಸ್ತಿನಲ್ಲಿದ್ದ ಪೊಲೀಸರು ವಿಚಾರಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ– ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

 

ಪೊಲೀಸರನ್ನ ಕಂಡ ಜಾಫರ್ ಕಾಲುಕಿತ್ತಿದ್ದಾನೆ. ಆದರೆ ಬೆನ್ನು ಬಿಡದ ಪೊಲೀಸರು ಆತನನ್ನ ಹಿಡಿದು ತಂದು ಅಂಗಡಿ ಬಳಿ ಏನು ಮಾಡ್ತಿದ್ದೆ ಎಂದು ವಿಚಾರಿಸಿದ್ದಾರೆ. ವಿಚಾರಣೆ ವೇಳೆ ಸಮಂಜಸವಾಗಿ ಉತ್ತರ ಕೊಡದ‌ ಜಾಫರ್ ನನ್ನ ಠಾಣೆಗೆ ಕರೆದೊಯ್ದಿದ್ದಾರೆ.

ಠಾಣೆಯಲ್ಲಿ ತಪಾಸಣೆ ನಡೆಸಿದಾಗ ಒಂದು ಮರದ ಪೀಸು, ಒಂದು ಚಾಕು ಪತ್ತೆಯಾಗಿದೆ. ಈ ಬಗ್ಗೆ ವಿಚಾರಿಸದಾಗಲೂ ಉತ್ತರ ನೀಡದ ಜಾಫರ್ ನನ್ನ ಬಂಧಿಸಲಾಗಿದೆ. ಈತನ ವಿರುದ್ಧ ಅನೇಕ ಪ್ರಕರಣಗಳು ನಗರದ ಹಲವು ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರಿಗೆ ಬೇಕಾದ ವ್ಯಕ್ತಿಯಾಗಿದ್ದಾನೆ. ನಿನ್ನೆ ನ್ಯಾಯಾಲಯದಲ್ಲಿ ಬೇಲ್ ಪಡೆದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button