ಕ್ರೈಂ

ಬುರ್ಕಾ ಹಾಕಿಕೊಂಡು ಬಂದು ಚಿನ್ನಾಭರಣ ಕಳುವು-ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಮತ್ತೆ ಬುರ್ಕಾ ಹಾಕಿಕೊಂಡು ಬಂದ ಇಬ್ಬರು ಮಹಿಳೆ ಮತ್ತು ಪುರುಷನೊಬ್ಬನಿಂದ ಕಳವು ಪ್ರಕರಣ ನಡೆದಿದೆ.

ಮೊನ್ನೆ ಜಯನಗರದ ಮೊದಲೇ ತಿರುವಿನಲ್ಲಿ ಮನೆ ಬಾಡಿಗೆ ವಿಚಾರಿಸಿಕೊಂಡು  ಬಂದ ಮಹಿಳೆ ಮತ್ತು ಪುರುಷನೊಬ್ಬ ಮನೆಗೆ ನುಗ್ಗಿ ಚಿನ್ನಾಭರಣವನ್ನ ಕಿತ್ತುಕೊಂಡು ಹೋದ ಪ್ರಕರಣ ನಡೆದ ಬೆನ್ನಲ್ಲೇ ಗಾಂಧಿ ಬಜಾರ್ ನ ಚಿನ್ನದಂಗಡಿಯಲ್ಲಿ ಬುರ್ಕಾ ಹಾಕಿಕೊಂಡು ಬಂದ ಇಬ್ಬರು ಮಹಿಳೆಯು ಮತ್ತು ಪುರುಷರಿಂದ ಕಳವು ಪ್ರಕರಣ ನಡೆದಿದೆ.

ಜಯನಗರದಲ್ಲಿ ಬುರ್ಕಾ ಹಾಕಿಕೊಂಡು ಬಂದ ಚಿಕ್ಕಮಗಳೂರಿನ ಭಾಗ್ಯ ಎಂಬ ಮಹಿಳೆಯನ್ನ ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದರು. ಆದರೆ ಈ ಪ್ರಕರಣದಲ್ಲಿ ದೊಡ್ಡಪೇಟೆ ಪೊಲೀಸರ ಅಂಗಳಕ್ಕೆ ಬಂದು ನಿಂತಿದೆ.

ನಿನ್ನೆ ಮಧ್ಯಾಹ್ನ ಶಿವಮೊಗ್ಗ ನಗರದ ಜಾಮೀಯಾ ಮಸೀದಿ ಬಳಿಯ ರೂಪಶ್ರೀ ಬಂಗಾರದ ಅಂಗಡಿಗೆ ಬುರ್ಕಾ ಹಾಕಿಕೊಂಡು ಬಂದ ಇಬ್ಬರು ಮಹಿಳೆಯರು ಮತ್ತು ಪುರುಷನೋರ್ವ ಅಂಗಡಿಗೆ ಬಂದು ಒಂದು ಉಂಗುರ ಮತ್ತು ಎರಡು ಜೊತೆ ಬಂಗಾರದ ಓಲೆ ನೋಡಿದ್ದಾರೆ.

ಅಂಗಡಿ ಮಾಲೀಕ ದಿನೇಶ್ ಕುಮಾರ್ ಅವರ ಗಮನ ಬೇರೆಡೆ ಹರಿಸಿ 89 ಸಾವಿರ ರೂ ಮೌಲ್ಯದ ಚಿನ್ಬಾಭರಣವನ್ನ ನೋಡಿ ಅದೇ ರೀತಿಯ ನಕಲಿ ಚಿನ್ನಾಭರಣವನ್ನ ಅದರ ಸ್ಥಳದಲ್ಲಿ ಇಟ್ಟು ಪರಾರಿಯಾಗಿದ್ದಾರೆ. ಇಬ್ಬರು ಗ್ರಾಹಕರಾಗಿ ಬಂದ ಮಹಿಳೆ ಮತ್ತು ಪುರುಷನು ಅಂಗಡಿಯಲ್ಲಿ ಖರೀದಿ ಮಾಡುವ ವೇಳಳೆ ಕಳವು ಮಾಡಿರುವ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button