ರಾಜ್ಯ

17982 ಸಾವಿರ ಅಡಿ ಎತ್ತರದಲ್ಲಿ ರಾರಾಜಿಸಿದ ಅಪ್ಪು

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿವಮೊಗ್ಗ: ಜಗತ್ತಿನ ಅತಿ ಎತ್ತರದ ರಸ್ತೆ ಪ್ರದೇಶವಾಗಿರುವ ಭಾರತದ ಖರದುಂಗ್ಲಾ(17982 ಅಡಿ) ದಲ್ಲಿ ಅಪ್ಪುವಿನ ಫೋಟೋ ಹಾಗೂ ಕನ್ನಡದ ಧ್ವಜವನ್ನು ಹಾರಿಸುವ ಮೂಲಕ ಶಿವಮೊಗ್ಗದ ಯುವಕರು ಗಮನ ಸೆಳೆದಿದ್ದಾರೆ.

ಪ್ರಸ್ತುತ ಲಡಕ್ ಪ್ರವಾಸದಲ್ಲಿರುವ ಶಿವಮೊಗ್ಗ ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ವಿನಯ್ ತಾಂದ್ಲೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಮೋದ್, ಗೌತಮ್, ಹರೀಶ್, ಕಿರಣ್ ಅವರು ತಮ್ಮ ನೆಚ್ಚಿನ ನಾಯಕನ ಭಾವಚಿತ್ರ ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರ ಪ್ರದೇಶದಲ್ಲಿ ಹಾರಿಸುವ ಸಲುವಾಗಿಯೇ ಪ್ರಯಾಣ ಬೆಳೆಸಿದ್ದರು.

ಈ ಬಗ್ಗೆ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ ಮಾತನಾಡಿ, ‘ಅಪ್ಪು ಕೇವಲ ಕರ್ನಾಟಕದ ಜನರ ಪ್ರೀತಿಯನ್ನು ಮಾತ್ರವಲ್ಲದೇ ಜಗತ್ತಿನ ಎಲ್ಲಾ ದೇಶಗಳ ಜನರ ಪ್ರೀತಿ ಗಳಿಸಿದ್ದರು. ಅವರ ನೆನಪು ಇಂದಿಗೂ ದೂರವಾಗುತ್ತಿಲ್ಲ. ಹಾಗಾಗಿಯೇ ನೆಚ್ಚಿನ ನಾಯಕನ ಚಿತ್ರವನ್ನು ಹಾಗೂ ಕನ್ನಡ ಧ್ವಜವನ್ನು ಅತ್ಯಂತ ಎತ್ತರದ ಪ್ರದೇಶದಲ್ಲಿ ಹಾರಿಸಬೇಕು ಎಂದು ಸ್ನೇಹಿತರೆಲ್ಲರೂ ಸೇರಿ ಈ ಪ್ರವಾಸ ಕೈಗೊಂಡಿದ್ದೇವೆ’ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button