ರಾಜಕೀಯ

ಮೂವರು ಗಣ್ಯರ ಹುಟ್ಟುಹಬ್ಬಕ್ಕೆ ಬಿಜೆಪಿಯಿಂದ ಕಮಲೋತ್ಸವ!

ಸುದ್ದಿಲೈವ್.ಕಾಂ/ಶಿವಮೊಗ್ಗ

ಸೆ.17 ರಂದು ಪ್ರಧಾನಿ ಹುಟ್ಟು ಹಬ್ಬವನ್ನ ಅ.2 ರವರೆಗೆ ಆಚರಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿಯೂ ವಿವಿಧ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ ಎಂದು ಸಙಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಡ್ಡಾರವರು ಜನ್ಮದಿನವನ್ನ ಸೇವಾ ಪಾಕ್ಷಿಕವಾಗಿ ಪಕ್ಷದ ಚೌಕಟ್ ನಲ್ಲಿ 15 ದಿನಗಳ ಕಾಲ ಆಚರಿಸಲಾಗುತ್ತಿದೆ. ಇದರಲ್ಲಿ ಜನರಿಗೆ ನೀಡಿದ ಸೇವೆಯನ್ನ ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.

ಜನಕಲ್ಯಾಣಯೋಜನೆಯನ್ನ ಪುಸ್ತಕಗಳನ್ನ‌ ಯುವಮೋರ್ಚ ಮನೆ‌ಮನೆಗೆ ತೆರಳಿ ನೀಡಲಾಗುವುದು. ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಮುಂದಿನ ಐದು ವರ್ಷದಲ್ಲಿ ಕ್ಷಯ ರೋಗವನ್ನ ನಿರ್ಮೂಲನೆ ಮಾಡಲಾಗುತ್ತಿದೆ. ಅವರಿಗೆ ಬೇಕಾದ ಆರೋಗ್ಯ ಕಾಳಜಿ ಮಾಡಲಾಗುತ್ತಿದೆ ಎಂದರು.

200 ಕೋಟಿ ಕೊರೋನ ಲಸಿಕೆ ನೀಡಲಾಗುತ್ತಿದೆ. ಪ್ರತಿ ಬೂತ್ ನಲ್ಲಿ ಬೂಸ್ಟರ್ ಡೋಸ್ ನೀಡಲಾಗುವುದು. ಹುಟ್ಟುಹಬ್ವದ ಅಂಗವಾಗಿ ಪ್ರತಿ ಲೋಕ್ ಸಭೆಯ ಕ್ಷೇತ್ರದಲ್ಲಿನ 100 ಕೆರೆ ದತ್ತು ತೆಗೆದುಕೊಳ್ಳಲಾಗಿದೆ. 10 ಲಕ್ಷ ರೂ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ. ಊರಿನವರು ಎನ್ ಆರ್ ಐ ಜಿಯಲ್ಲಿ ಕೈಜೋಡಿಸಬೇಕಿದೆ.

ಜಲವೇ ಜೀವನದ‌ಅಡಿಯಲ್ಲಿ ಹರಿದು ಹೋಗುವ ನೀರನ್ನ ಇಂಗಿಸುವ ಕೆಲಸವಾಗುತ್ತಿದೆ. ಸೆ.25 ರಂದುದೀನ್ ದಯಾಳು ದಿನಾಚರಣೆಯನ್ನ ಆಚರಿಸಲಾಗುತ್ತಿದೆ. ಪ್ರತಿ ತಿಂಗಳ ಮೂರನೇ ಭಾನುವಾರ ಮನ್ ಕಿ ಬಾತ್ ಇದ್ದು ಪ್ರತಿಬೂತ್ ನಲ್ಲಿ ಕೇಳುವ ಅವಕಾಶ, ಅ.2ರಂದು ಗಾಂಧಿಜಿಯ ಜನ್ಮದಿನಚರಣೆಗಾಗಿ ಖಾದಿಗೆ ಒತ್ತುನೀಡಲಾಗುತ್ತಿದೆ ಎಂದರು.

ನಮ್ಮ ಜಿಲ್ಲೆಯಲ್ಲಿ ವಿಕಲ ಚೇತನರಿಗೆ ಹೆಲ್ತ್ ಕ್ಯಾಂಪ್ ಮಾಡಲಾಗುತ್ತಿದೆ ಅವರಿಗೆ ಉಪಕರಣ ನೀಡಲಾಗುತ್ತಿದೆ. ಜ22 ರಂದು ಕೇಂದ್ರದಿಂದ‌ ಅಸೆಸ್ ಮೆಂಟ್ ಮಾಡಿಲಾಗಿತ್ತು. 1020 ಪಟ್ಟಿ ಮಾಡಲಾಗಿದೆ 75‌ಲಕ್ಷ ರೂ ಮೊತ್ತದ ಸಲಕರಣೆಯನ್ನ ಮೋದಿ ಹುಟ್ಟು ಹಬ್ಬದಂದು ಕುವೆಂಪು ರಂಗಮಂದರದಲ್ಲಿ ನೀಡಲಾಗುತ್ತಿದೆ.

67 ಟ್ರೈಸಿಕಲ್ , 208 ಮೀಲ್ ಚೇರ್426 ಜನರಿಗೆ ಊರು ಗೋಲು, ವಾಕಿಂಗ್ ಸ್ಟಿಕ್,ಅಂಧತ್ರಿಗೆ ಸ್ಮಾರ್ಟ್ ಸ್ಕೇಲ್ ನೀಡಲಾಗುತ್ತಿದೆ.

ಟಿಡಿ ಮೇಘರಾಜ್ ಮಾತನಾಡಿ, 15 ದಿನಗಳಲ್ಲಿ 3 ಗಣ್ಯ ವ್ಯಕ್ತಿಗಳ ದಿನಾಚರಣೆಬರುತ್ತಿದೆ.ಇಡೀ ಜಿಲ್ಲೆಯಲ್ಲಿ ಪರಿಣಾಮ ಕಾರಿ ಜಾರಿಗೊಳಿಸಲು ಐದು ಜನರ ತಂಡ ರಚಿಸಲಾಗುತ್ತಿದೆ. 17 ರಂದು ಯುವ‌ಮೋರ್ಚಾದ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ. ಬ್ಲಡ್ ಬ್ಯಾಂಕ್ ನಲ್ಲಿ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡು ಅವಶ್ಯಕತೆ ಇರುವಷ್ಟು ರಕ್ತದನವನ್ನ ತುಂಬಿಸಿ ಕೊಡಲಾಗುತ್ತಿದೆ.

ದೀನ್ ದಯಾಳು ಜನ್ಮದಿನಾಚರಣೆಯನ್ನ ಕಮಲೋತ್ಸವ ಎಂದು ಆಚರಿಸಲು ಯೋಚಿಸಲಾಗುತ್ತಿದೆ.‌ ಪ್ರತಿ ವರ್ಷ ಗಾಂಧಿ ಜಯಂತಿಯಂದು ಸ್ವಚ್ಛ ಭಾರತಕ್ಕೆ ಹೆಚ್ಚು ಆಧ್ಯತೆನೀಡಿ ಖಾದಿ ಬಳಕೆ ನಾಲ್ಕು ಪಟ್ಟು ಹೆಚ್ಚಾಗಿದೆ ಎಲ್ಲಾ ಮಂಡಲದಲ್ಲಿ ನೀಡಲಾಗುತ್ತಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button