ಸುದ್ದಿ

ಬಾಪೂಜಿ ನಗರದ ಘಟನೆ-ದೂರು ಪ್ರತಿದೂರು ದಾಖಲು

ಸುದ್ದಿಲೈವ್.ಕಾಂ/ಶಿವಮೊಗ್ಗ

ಮೊನ್ನೆ ಬಾಪೂಜಿ ನಗರದಲ್ಲಿ ನಡೆದ ಘಟನೆ ಕುರಿತು ಎರಡೂ ಕಡೆ ದೂರು ದಾಖಲಾಗಿದೆ. ಒಬ್ವರು 9 ನೇ ತರಗತಿ ಟ್ಯೂಷನ್ ಗೆ ಹೋಗುತ್ತಿದ್ದ ಹುಡುಗ ಟ್ಯೂಷನ್ ಹೇಳಿಕೊಡುತ್ತಿದ್ದ ಶಿಕ್ಷಕಿಗೆ ಹಣ ನೀಡಿದಾಗ ಮೂವರು ಅಪ್ರಾಪ್ತ ಬಾಲಕರು ನಮಗೂ ಹಣಕೊಡು ಎಂದು ಹೇಳಿದ್ದಾರೆ.

ನಿಮಗೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದ 9 ನೇ ತರಗತಿ ಬಾಲಕನಿಗೆ ನಮಗೆ ಎದುರು ಮಾತನಾಡುತ್ತೀಯ ಎಂದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ 9 ನೇ ತರಗತಿಯ ಬಾಲಕ ಗಣಪತಿ ಪೆಂಡಾಲ್ ಕಡೆ ಹೋಗಿ ಅಳ್ತಾ ಇರ್ತಾನೆ. ಅಷ್ಟರಲ್ಲಿ ಬಾಲಕನಿಗೆ ಪರಿಚಯಸ್ಥನೋರ್ವ ಸಿಕ್ಕು ಯಾಕೆ ಅಳ್ತಾ ಇದಿಯಾ ಎಂದು ಕೇಳಿದಾಗ ಬಾಲಕ ಎಲ್ಲ ವಿಷಯ ಹೇಳಿದ್ದಾನೆ.

ಅಷ್ಟರಲ್ಲಿ ತೇಜಸ್ ಡ್ಯಾನಿಯಲ್ ಗೆ ಕರೆ ಮಾಡಿಸ್ಥಳಕ್ಕೆ ಕರೆಯಿಸಿಕೊಳ್ಳಲಾಗುತ್ತದೆ. ಆಗ 9 ನೇ ತರಗತಿ ಬಾಲಕನ ಮೇಲೆ ದಾಳಿ ನಡೆಸಿಯ ಅಪ್ರಪ್ತ ಬಾಲಕರಿಗೂ ಡ್ಯಾನಿಯಲ್ ಬುದ್ದಿವಾದ ಹೇಳಿ ಕಳುಹಿಸುತ್ತಾನೆ. ಅಲ್ಲೆ ಬಾಪೂಜಿ ನಗರದ ನಗರಸಭೆ ಕ್ವಾಟ್ರಸ್ ಬಳಿ ನಿಂತಿದ್ದ ತೇಜಸ್ ಡ್ಯಾನಿಯಲ್ ಗೆ 9 ನೇ ತರಗತಿ ಓದುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿದ 17 ವರ್ಷ ಅಪ್ರಾಪ್ತ ಬಾಲಕ ನಮ್ಮ ಹುಡುಗರಿಗೆ ಬುದ್ದಿವಾದ ಹೇಳ್ತ್ಯಾ ನಿನಗೆ ಹೊಡೆಯಲಾ ಎಂದು ಗದರಿಸಿ ಬರ್ಜಿ ತೆಗೆದು ತೇಜಸ್ ಗೆ ಚುಚ್ಚಲು ಮುಂದಾಗಿದ್ದಾನೆ.

ಆತನ ಬರ್ಜಿಯ ದಾಳಿಯಿಂದ ತಪ್ಪಿಸಿಕೊಂಡ ತೇಜಸ್ ದಾಳಿ ಮಾಡಲು ಬಙದ ಅಪ್ರಪ್ತ ಬಾಲಕನನ್ನ ದಬ್ಬುತ್ತಾನೆ.‌ ದಬ್ಬಿದ ತೇಜಸ್ ಕನ್ಬಡದ ಧ್ವಜ ಕಂಭದ ಮೇಲೆ ಬಿದ್ದ ಪರಿಣಾಮ ಕೈಮೂಳೆ ಮುರಿದು ಹೋಗಿದೆ. ಅಪ್ರಾಪ್ತ ಬಾಲಕನ ಜೊತೆಯಲ್ಲಿದ್ದವರು ಜಗಳ ಬಿಡುಸುತ್ತಾರೆ. ತೇಜಸ್ ಮೆಗ್ಗಾನ್ ಗೆ ದಾಖಲಾಗುತ್ತಾನೆ.

ಇದರ ಜಿತೆಯಲ್ಲೇ 17 ವರ್ಷದ ಬಾಲಕ ತೇಜಸ್ ಡ್ಯಾನಿಯಲ್ 9 ನೇ ತರಗತಿಯ ಬಾಲಕ ಮತ್ತೋರ್ವ ಅಪ್ರಪ್ತ ಬಾಲಕನ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾನೆ. ಕೇರಿ ಹುಡುಗರ ಜೊತೆ ಆಟವಾಡುತ್ತಿದ್ದ 17 ವರ್ಷದ ಬಾಲಕನ ಸಹೋದರನಿಗೆ ತೇಜಸ್ ಕಡೆಯವರು ಹಡೆಯಲು ಬಂದಾಗ ಸಹೋದರ ಮನೆಗೆ ಹೋಗಿ ತನ್ನ ಅಣ್ಣನಿಗೆ ವಿಷಯ ತಿಳಿಸುತ್ತಾನೆ.

ಅಣ್ಣ ಬಂದು ಯಾಕೆ ನನ್ನ ತಮ್ಮನಿಗೆ ಹೊಡೆದಿದ್ದು ಎಂದು ಪ್ರಶ್ನಿಸುತ್ತಾನೆ. ನನ್ನ ಹತ್ತಿರ ಹೇಳಲಿಕ್ಕೆ ಬಂದಿದ್ದೀಯ ಎಂದು ತೇಜಸ್ ಕಡೆ ಯುವಕರು ಗದರಿಸಿಕಳುಹಿಸಿದ್ದಾರೆ. ನಂತರ ತೇಜಸ್ ಡ್ಯಾನಿಯಲ್ ಕಡೆ ಹುಡುಗರು 17 ವರ್ಷದ ಬಾಲಕನ ಮೇಲೆ ಮುಷ್ಠಿಕಟ್ಟಿ ಹೊಡೆದು ಡಿಚ್ಚಿ ಹೊಡೆದಿದ್ದಾರೆ ಎಂದು ಪ್ರತಿದೂರು ದಾಖಲಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button