ಕ್ರೈಂ

ಗುಟ್ಕಾ ಖರೀದಿಸಲು ಹೋದ ಯುವಕನ ಮೇಲೆ ನಾಯಿದಾಳಿ!

ಸುದ್ದಿಲೈವ್.ಕಾಂ/ಶಿವಮೊಗ್ಗ

ಜೈಲ್ ರಸ್ತೆಯಲ್ಲಿರುವ ಅಂಗಡಿಯೊಂದಕ್ಕೆ ಹೋಗಿ ಅಂಗಡಿ ಮಾಲೀಕರನ್ನ ಕರೆದು ಗುಟ್ಕಾ ಖರೀದಿಸಲು ಮುಂದಾಗಿದ್ದ ಯುವಕನ ಮೇಲೆ ನಾಯಿ ದಾಳಿ ನಡೆಸಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮುಂದಾದಾಗ ಅಂಗಡಿ ಮಾಲೀಕರು ಮತ್ತು ಅಪರಿಚಿತ ಮೂವರು ವ್ಯಕ್ತಿಗಳು ಯುವಕನ‌ಮೇಲೆ ದಾಳಿ ನಡೆಸಿ ಜಣಿವಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಜೈಲ್ ರಸ್ತೆಯಲ್ಲಿ ಮನಜಾಕ್ಷಮ್ಮರವರ ಮಾರುತಿ ಟೀ ಸ್ಟಾಲ್ ಗೆ ತೆರಳಿದ ಸಾವರ್ ಲೈನ್ ರಸ್ತೆಯ ಯುವಕ ಪ್ರವೀಣ್ ಅಂಗಡಿಯಲ್ಲಿ ಮಾಲೀಕರು ಕಾಣದ ಕಾರಣ ಆಂಟಿ ಎಂದು ಕೂಗಿದ್ದಾನೆ. ಅಲ್ಲೇ ಇದ್ದ ಸಾಕಿದ ನಾಯಿ ಪ್ರವೀಣನ ಎದೆಯ ಮಟ್ಟಕ್ಕೆ ಹಾರಿ ಕಚ್ಚಲು ಮುಂದಾಗಿದೆ.

ಏಕದಂ ಶಾಕ್ ಆದ ಪ್ರವೀಣ್ ನೀರಿನ ಬಾಟಲು ಹಿಡಿದು ನಾಯಿಗೆ ಹೊಡೆಯಲು ಮುಂದಾಗಿದ್ದಾನೆ. ನಮ್ಮ‌ನಾಯಿಗೆ ಹೊಡೆಯುತ್ತೀಯ ಎಂದು ವನಜಾಕ್ಷಮ್ಮ ಕಬ್ಬಿಣದ ರಾಡು ತೆಗೆದು ಪ್ರವೀಣನ ಕಣ್ಣಿನ ಹತ್ತಿರ ಹೊಡೆದಿದ್ದಾರೆ. ಹೊಡೆಯಲು ಬಂದ ವನಜಾಕ್ಷಮ್ನರನ್ನೂ ಪ್ರವೀಣ್ ನೂಕಿದ್ದಾನೆ.

ಇದನ್ನ ಕಂಡ ಮೂವರು ನಮ್ಮ ಆಂಟಿಗೆ ಹೊಡೆಯುತ್ತೀಯಾ ಎಂದು ಪ್ರವೀಣನ ಮೇಲೆ ಹಲ್ಲೆನಡೆಸಿದ್ದಾರೆ. ಹೀಗೆ ಯುವಕನ ಮೇಲೆ ಎಲ್ಲರೂ ಮುಗಿಬಿದ್ದಿದ್ದಾರೆ. ಜೊತೆಯಲ್ಲಿದ್ದ ಕಾರ್ತಿಕ್ ಮತ್ತು ಶ್ರೀಕಾಂತ್ ಜಗಳ ಬಿಡಿಸಿದ್ದಾರೆ.

ಗಾಯಗೊಂಡ ಯುವಕನನ್ನ ಮೆಗ್ಗಾನ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ತನ್ನ ಮೇಲೆ ದಾಳಿ ನಡೆಸಿದ ಅಪರಿಚಿತ ಮೂವರು ಮತ್ತು ಮಾಲೀಕ ವನಜಾಕ್ಷಮ್ಮನವರ ವಿರುದ್ಧ ಪ್ರವೀಣ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button