ಕ್ರೈಂ

ಗ್ರಾಪಂ ಅಳವಡಿಸಿದ್ದ ಸೋಲಾರ್ ಪ್ಯಾನೆಲ್ ಗಳೇ ನಾಪತ್ತೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಉಂಬ್ಳೆಬೈಲಿನಲ್ಲಿ ರಾಷ್ಟ್ರೀಯ ಕುಡಿಯುವ ನೀರು ಯೋಜನೆ ಅಡಿ ಅಳವಡಿಸಲಾಗಿದ್ದ ಸೋಲಾರ್ ಪ್ಯಾನೆಲ್ ಗಳನ್ಬೇ ಕಳ್ಳತನ ಮಾಡಿರುವಬಗ್ಗೆ ಗ್ರಾಮಪಂಚಾಯಿತಿ ಪಿಡಿಒ ದೂರು ನೀಡಿದ್ದಾರೆ.

ಉಂಬ್ಳೆಬೈಲು ಗ್ರಾಮದ ಕಣಗಲಸರ ಗ್ರಾಮದ ಚೆಕ್ಕೇರೆ ಕೆರೆ ಯ ಬಳಿ ಕುಡಿಯುವ ನೀರಿನ‌ಮೋಟಾರ್ ಗಾಗಿ 36 ಸೋಲಾರ್ ಪ್ಯಾನೆಲ್ ಗಳನ್ನ ಕಳವು ಮಾಡಲಾಗಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 6‌ಲಕ್ಷ ರೂ.ಎಂದು ಅಂದಾಜಿಸಲಾಗಿದೆ.

ಈ ಗ್ರಾಮದಲ್ಲಿ ನೀರುಗಂಟಿ ರಾಜೇಶ್ ನವರು ನೋಡಿ ಸೋಲಾರ್ ಪ್ಯಾನೆಲ್ ಇಲ್ಲದೇ ಇರುವುದನ್ನ ಗಮನಿಸಿ ಪಿಡಿಒ ಅಮಿಜ್ ರಾಜ್ ತುಂಗನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿರುವ ಮಾಲನ್ನ ಹುಡುಕಿಕೊಡಿ ಎಂದು ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button