ಸ್ಥಳೀಯ ಸುದ್ದಿಗಳು

ಆಹಾರ ದಸರಾದ ವೇಳಪಟ್ಟಿ ಬಿಡುಗಡೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಸೆ.26 ರಿಂದ ದಸರಾ ಆರಂಭವಾಗಲಿದ್ದು, ಶಿವಮೊಗ್ಗದಲ್ಲಿ ದಸರಾ ಚಟುವಟಿಕೆಗಳು ಗರಿಗೆದರಿವೆ. ದಸರ ಅಂಗವಾಗಿ ಮಹಿಳೆಯರಿಗಾಗಿ ಆಹಾರ ದಸರಾ ಸ್ಪರ್ಧೆ ಈ ದಸರಾದಲ್ಲಿ ಪ್ರತಿವರ್ಷ ನಡೆದುಕೊಂಡು ಬರುತ್ತಿರುವ ಸ್ಪರ್ಧೆ ಒಂದಾಗಿದೆ.

ಮಹಾನಗರ ಪಾಲಿಕೆಯ ವತಿಯಿಂದ 14 ದಸರ ಸಮಿತಿ ರಚಿಸಲಾಗಿದೆ‌. ಈ ದಸರಾ ಸಮಿತಿಯ ಆಹಾರ ದಸರಾದ ವೇಳಾಪಟ್ಟಿ ಹೀಗಿದೆ.

ಸೆ.24 ರಂದು ವೀರಶೈವ ಕಲ್ಯಾಣಮಂದಿರದ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಮಧ್ಯಾಹ್ನ 2 ರಿಂದ 3 ರವರೆಗೆ ಅತ್ತೆ ಸೊಸೆಗಾಗಿ ಅಡುಗೆ ಸ್ಪರ್ಧೆ, ಸಂಜೆ 4 ರಿಂದ 5 ರವರೆಗೆ ಕಾಲೇಜು ವಿದ್ಯಾರ್ಥಿನಿಯರಿಗೆ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ.

ಸೆ.27 ರಂದು ನಗರದ ಹೃದಯಭಾಗದಲ್ಲಿರುವ ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳಾ ಶಿಕ್ಷಕರಿಗಾಗಿ ಒಂದು ನಿಮಿಷದಲ್ಲಿ ಎಷ್ಟು ಸೇಬುಹಣ್ಣು ತಿನ್ನುತ್ತಾರೆ ಎಂಬ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದು ಬೆಳಿಗ್ಗೆ 10-30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಅಂದು ಮಧ್ಯಾಹ್ನ 12 ಗಂಟೆಗೆ ಶಿವಪ್ಪ ನಾಯಕ ವೃತ್ತದ ಬಳಿ ಒಂದು ನಿಮಿಷದಲ್ಲಿ ಮುದ್ದೆ ಬಸ್ಸಾರು ತಿನ್ನುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದಾಗಿದೆ.

ಸೆ.30 ರಂದು 6 ದಿನಗಳ ಕಾಲ ಫ್ರೀಡಂ ಪಾರ್ಕ್ ನಲ್ಲಿ ಆಹಾರ ಮೇಳ ನಡೆಯಲಿದೆ. ಅಕ್ಟೋಬರ್ 5 ರವರೆಗೆ ಆಹಾರ ಮೇಳೆ ನಡೆಯಲಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button