ಸ್ಥಳೀಯ ಸುದ್ದಿಗಳು

ಜಾನುವಾರುಗಳ ದೊಡ್ಡಿ ಮುಚ್ಚುವಂತೆ ಪ್ರತಿಭಟನೆ

ಸುದ್ದಿಲೈವ್. ಕಾಂ/ಶಿವಮೊಗ್ಗ

ತಾಲೂಕಿನ ಚೋರಡಿ ಗ್ರಾಪಂಗೆ ಸೇರಿರುವ ಜಾನುವಾರು ದೊಡ್ಡಿ ಸಂಪೂರ್ಣ ಮುಚ್ಚಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ದೊಡ್ಡಿಯಿಂದಾಗಿ ರೈತರು ತಮ್ಮ ಹಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆ `ಭಾಗದಲ್ಲಿರುವ ಮಲೆನಾಡು ಗಿಡ್ಡ, ಹಳ್ಳಿಕಾರ್ ಹಸುಗಳನ್ನು ಹೊರಗೆ ಮೇಯಲು ಬಿಡದಂತೆ ಪರಿಸ್ಥಿತಿ ಇದೆ. ಕೆಲವರು ಗುಡ್ಡಕ್ಕೆ ಮೇಯಲು ಹೋದ, ಕೆರೆಗೆ ನೀರು ಕುಡಿಯಲು ಹೋಗುವ ಹಸುಗಳನ್ನು ಕೂಡ ದೊಡ್ಡಿಗೆ ತಂದು ಹಾಕುತ್ತಿದ್ದಾರೆ.ಇದು ರೈತರಲ್ಲಿ ಹಸುಗಳ ಸಾಕಣೆ ಆಸಕ್ತಿಯನ್ನೇ ಕಿತ್ತುಕೊಳ್ಳುತ್ತಿದೆ ಎಂದು ದೂರಿದರು.

ಜಾನುವಾರು ದೊಡ್ಡಿ ನಡೆಸಲು ರಾಜ್ಯ ಸರ್ಕಾರ ಅಥವಾ ಜಿಪಂನಿಂದ ಯಾವುದೇ ಆದೇಶ ಇಲ್ಲ. ಗ್ರಾಪಂ ಕೂಡಯಾವುದೇ ನಿಯಮಾವಳಿ ಮಾಡಿಲ್ಲ. ದೊಡ್ಡಿಗೆ ಹಾಕಿದ ಹಸುಗಳಿಗೆ ದಂಡ ವಿಧಿಸಲು ಹರಾಜುದಾರ ಮಾಡಿಕೊಂಡಿದ್ದಾನೆ.

ರಶೀದಿ ಇಲ್ಲ. ಒಂದು ಹಸುವಿಗೆ ಒಂದೇ ದಿನಕ್ಕೆ 400-500 ರೂ. ದಂಡ ವಿಸಲಾಗಿದೆ. ದೊಡ್ಡಿಗೆ ಹೊಡೆದುಕೊಂಡು ಬಂದ ಹಸುಗಳು ನಂತರ ಯಾರಿಗೂ ಸಿಗದೇ ಕಾಣೆಯಾಗಿವೆ. ಇಲ್ಲಿಂದಲೇ ಹಸುಗಳು ಕಸಾಯಿಖಾನೆ ಪಾಲಾಗಿರುವ ಮಾತುಗಳೂ ಕೇಳಿಬರುತ್ತಿವೆ. ದೊಡ್ಡಿಗೆ ಹಸು ಹೊಡೆದುಕೊಂಡು ಬಂದವರಿಗೆ ಕಮೀಷನ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಒಂದೆಡೆ ರಾಜ್ಯ ಸರ್ಕಾರ ಸಾವಯವ ಕೃಷಿಗೆ ಒತ್ತು ನೀಡುತ್ತಿದೆ. ದೊಡ್ಡಿಯ ಕಾರಣಕ್ಕೆ ಈ ಗ್ರಾಪಂ ವ್ಯಾಪ್ತಿಯಲ್ಲಿ ದೇಸೀ ಹಸುಗಳನ್ನು ಸಾಕುವುದೇ ಕಷ್ಟವಾಗುತ್ತಿದೆ. ಕೊರಗಿ, ಗುಂಡೂರು ಗ್ರಾಮಗಳಲ್ಲಿ ಸುಮಾರು 500ಕ್ಕೂ ಹ್ಚೆಚು ಹಸು ಮಾರಾಟವಾಗಿವೆ. ಇದು ದೇಸೀ ಹಸುಗಳ ವಿನಾಶಕ್ಕೆ ಆಹ್ವಾನ ನೀಡುತ್ತಿದೆ. ದೇಸೀ ಹಸುಗಳು ಇದ್ದರೆ ಮಾತ್ರ ಸಾವಯವ ಕೃಷಿ ಸಾಕ್ಷಿಯಿದೆ. ಹಾಗಾಗಿ ಜಾನುವಾರು ದೊಡ್ಡಿಯನ್ನು ಸಂಪೂರ್ಣ ಮುಚ್ಚಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಜಿಲ್ಲಾ ಗೋ ಸೇವಾ ಸಂಯೋಜಕ್ ಕೋಟೆ ರಾಜು, ಜಗದೀಶ್, ಗ್ರಾಮಸ್ಥರಾದ ಬಿ.ಸುಬ್ರಮಣ್ಯಘಿ, ರಮೇಶ್, ಬಸವರಾಜ, ಸತ್ಯನಾರಾಯಣ, ಸುಬ್ರಾಯಪ್ಪ ಇದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button