ಕ್ರೈಂ

ಏರ್ ಟೆಲ್ ಕ.ಪನಿಯ ಬ್ಯಾಟರಿ ಕಳವು

ಸುದ್ದಿಲೈವ್.ಕಾಂ/ಶಿವಮೊಗ್ಗ

ಹೊಸನಗರ ಭಾಗದ ಸೊಪ್ಪಿನಮಲ್ಲೆ ಗ್ರಾಮದಲ್ಲಿರುವ ಏರ್ ಟೆಲ್ ಟವರ್ ನಲ್ಲಿರುವ ಬ್ಯಾಟರಿಗಳನ್ನ ಕದ್ದಿರುವ ಘಟನೆ ನಡೆದಿದೆ. ಸೊಪ್ಪಿನಮಲ್ಲೆ ಗ್ರಾಮದಲ್ಲಿ ಏರ್ ಟೆಲ್ ಕಂಪನಿಯ 40 ಸಾವಿರ ರೂ. ಮೌಲ್ಯದ ಬ್ಯಾಟರಿಗಳನ್ನ ಕಳವು ಮಾಡಲಾಗಿದೆ.

ಈ ಕಂಪನಿಗಳ ಪೆಟ್ರೋಲಿಂಗ್ ನ್ನ ನಿಶಾ ಇಂಡಸ್ಟ್ರಿಯಲ್ ಪ್ರೈ.ಲಿ., ಮಾಡಿಕೊಂಡು ಬಂದಿದೆ. ಇದರ ಗಾರ್ಡ್ ಆದ ಅಣ್ಣಪ್ಪ ಎಂಬುವರು ಪ್ರತಿ ಬಾರಿ ಮಾಮೂಲಿ ಪೆಟ್ರೋಲಿಂಗ್ ಮಾಡಿದಾಗ ಈ ಯುನಿಟ್ ಗೆ ವಿಸಿಟ್ ಮಾಡಿ ಹೋಗುತ್ತಿದ್ದರು. ಮೊನ್ನೆಯ ವಿಸಿಟ್ ವೇಳೆ 24 ಬ್ಯಾಟರಿಗಳ ಪೈಕಿ 06 ಬ್ಯಾಟರಿಗಳು ಮಾತ್ರ ಉಳಿದಿದ್ದನ್ನ ಗಮನಿಸಿದ್ದಾರೆ. ಒಟ್ಟು 18 ಬ್ಯಾಟರಿಗಳನ್ನ ಕಳವು ಮಾಡಿರುವುದಾಗಿ ಅವರು ದೂರಿನಲ್ಲಿ ದಾಖಲಿಸಿದ್ದಾರೆ

ಸೊಪ್ಪಿನಮಲ್ಲೆ ಗ್ರಾಮದಲ್ಲಿರುವ ಏರ್ ಟೆಲ್ ಟವರ್ ನ ಜಾಗದಲ್ಲೇ ಶೆಟರ್ ನಿರ್ಮಸಿ 24 ಬ್ಯಾಟರಿ ಅಳವಡಿಸಲಾಗಿತ್ತು. ಆದರೆ ಶೆಟರ್ ನ ಬಾಗಿಲು ಒಡೆದು 24 ಬ್ಯಾಟರಿಗಳಲ್ಲಿ 18 ಬ್ಯಾಟರಿಗಳನ್ಮ ಕದ್ದೊಯ್ಯಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button