ಕ್ರೈಂ

ಮಾಚೇನಹಳ್ಳಿ ಬಳಿ ಲಾರಿ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ

IMG-20220914-WA0298ಸುದ್ದಿಲೈವ್.ಕಾಂ/ಶಿವಮೊಗ್ಗ

ಟಿಂಬರ್ ಲಾರಿಯನ್ನ ವಾಪಾಸ್ ತೆಗೆದುಕೊಂಡು ಸಾಮಿಲ್ ಗೆ ಹೋಗುವ ವೇಳೆ ಟ್ಯಾಂಕರ್ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರಿಂದ ಸ್ವಲ್ಪ ವೇಳೆ ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

ಭದ್ರಾವತಿ-ಶಿವಮೊಗ್ಗ ರಸ್ತೆಯಲ್ಲಿರುವ ಮಾಚೇನಹಳ್ಳಿಯಲ್ಲಿ ಎಸ್ ಬಿಐ ಬ್ಯಾಂಕ್ ಬಳಿಯಿರುವ ಸಾಮಿಲ್ ವೊಂದಕ್ಕೆ ಟಿಂಬರ್ ಅನಲೋಡ್ ಮಾಡಬೇಕಿದ್ದಾ ಲಾರಿ, ಭದ್ರಾವತಿಯಿಂದ ಬರುವ ವೇಳೆ ಮಿಸ್ ಆಗಿ ಮುಂದೆ ಹೋಗಿದೆ.

ಲಾರಿ ಚಾಲಕನಿಗೆ ಸಾಮಿಲ್ ಗೊತ್ತಾಗದೆ ಇದ್ದಿದ್ದರಿಂದ ಸಾಮಿಲ್ ಗಿಂತ ಮುಂದೆ ಹೋಗಿದೆ. ನಂತರ ಕ್ಯಾನ್ಸರ್ ಆಸ್ಪತ್ರೆಯವರೆಗೆ ತೆರಳಿ ಯೂ ಟರ್ನ್ ಮಾಡಿಕೊಂಡು ಬರಬೇಕಾಗಿದ್ದರಿಂದ ಲಾರಿಯ ಚಾಲಕ ಎಡಗಡೆ ರಸ್ತೆಯಲ್ಲಿ ರಿವರ್ಸ್ ಬರಲು ಯತ್ನಿಸಿದ್ದಾನೆ.

ರಿವರ್ಸ್ ಬಂದ ವೇಳೆ ಕ್ಯಾಂಟರ್ ಒಂದು ಬಂದು ಗುದ್ದಿದೆ. ಇದರಿಂದ ರಸ್ತೆ ಸಂಚಾರ ಕೆಲ ಕಾಲ ಬ್ಲಾಕ್ ಆಗಿದೆ. ಈ ಘಟನೆಯಲ್ಲಿ ಕ್ಯಾಂಟರ್ ನ ಮುಂಭಾಗ ಜಜ್ಜಿಹೋಗಿದೆ. ಅಪಘಾತದಲ್ಲಿ ಚಾಲಕರಿಗೆ ಏನೂ ಆಗಿಲ್ಲವೆಂದು ತಿಳಿದುವಂದಿದೆ. ತುಂಗ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button