ಸ್ಥಳೀಯ ಸುದ್ದಿಗಳು

24×7 ಕುಡಿಯುವ ನೀರು ವಿಚಾರದಲ್ಲಿ ಶಾಸಕರ ಕಚೇರಿಯಲ್ಲಿ ಮಹತ್ವದ ಸಭೆ

ಸುದ್ದಿಲೈವ್.ಕಾಂ/ಶಿವಮೊಗ್ಗ

24×7 ಕುಡಿಯುವ ನೀರಿನ ಯೋಜನೆಗೆ ಜಿಐ ಪೈಪ್ ಬಳಸಬಾರದು, ಮೀಟರ್ ಅಳವಡಿಸಲು ಕಾಂಕ್ರಿಟ್ ಬಳಸಬೇಕು, 18 ಜನರ ನಾಗರೀಕ ಹಿತರಕ್ಷಣ ವೇದಿಕೆಯ ಸಮಿತಿ ವಾರಕ್ಕೊಮ್ಮೆ ನಗರ ಪರಿವೀಕ್ಷಣೆ ಮಾಡುವಂತೆ ಇಂದು ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಕುಡಿಯುವ ನೀರಿಗಾಗಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಾರಿಗೆ ಬಂದಿರುವ 24×7 ಯೋಜನೆಯಲ್ಲಿ ಅಳವಡಿಸಿರುವ ಪೈಪ್ ಗಳು ಮೀಟರ್ ಗಳನ್ನ ಸುರಕ್ಷಿತಗೊಳಿಸಬೇಕು ಮತ್ತು ಹಲವು ಬೇಡಿಕೆಗಳನ್ನಿಟ್ಟುಕೊಂಡು ಇಂದು ಕರೆದ ಶಾಸಕರ ಸಭೆಯಲ್ಲಿ ಮಾಜಿ ಸಚಿವ ಈಶ್ವರಪ್ಪರೊಂದಿಗೆ ನಾಗರೀಕ ಹಿತರಕ್ಷಣಾ ವೇದಿಕೆ ವಸಂತ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಯಲ್ಲಿ 24×7 ಕುಡಿಯುವ ನೀರು ಯೋಜನೆ ಜಾರಿಯಿದೆ. ಆದರೆ ಕುಡಿಯುವ ನೀರಿಗೆ ಜಿಐ ಪೈಪ್ ಬಳಸಲಾಗಿದೆ. ಜಿಐ ಬಳಕೆ ಮಾಡಬಾರದು. ಜಿಐ ಪೈಪ್ ಗಳನ್ನ ಬಳಸಿದ್ದಲ್ಲಿ ತುಕ್ಕು ಹಿಡಿಯಲಿದೆ ಎಂದು ವೇದಿಕೆಯವರು ಆಗ್ರಹಿಸಿದರು. ಜಿಐ ಪೈಪ್ ಬದಲು ಹೆಚ್ ಟಿ ಪಿ ಪೈಪ್ ಬಳಸಬೇಕು. ಅಲ್ಲದೆ ಮೀಟರ್ ಕಳವಾದರೆ ಏನು ಕ್ರಮ ಎಂದು ವೇದಿಕೆ ಆಗ್ರಹಿಸಿದೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಅಭಿಯಂತರ ಇಜಾಜ್ ರೊಂದಿಗೆ ಮೊಬೈಲ್ ನಲ್ಲಿ ಈಶ್ವರಪ್ಪ ಮಾತನಾಡಲಾಯಿತು. ಯುಪಿವಿಸಿ ಪೈಪ್ ಬಳಸಬೇಕೆಂದು ಅಭಿಯಂತರರು ಸೂಚಿಸಿದರು. ಅಲ್ಲದೆ ಮನೆ ಮನೆ ಗಂಗೆ ಗಂಗೆ ನೀಡಲಾಗಿದೆ ಕಳುವಾಗಿಲ್ಲವೆಂದರು.

ಅಲ್ಲದೆ ಮೀಟರ್ ನ್ನೂ ಸಹ ಅಳವಡಿಸುವಾಗ ಕಾಂಕ್ರಿಟ್ ಬಳಸಬೇಕು ಎಂದು ವೇದಿಕೆ ಕೋರಿದೆ. ವಾರಕೊಮ್ಮೆ ವೇದಿಕೆ ಮತ್ತು ಅಧಿಕಾರಿಗಳು ಜಂಟಿ ಪರಿಶೀಲನೆಗೆ ಸಭೆ ಅನುಮತಿ ನೀಡಿತು. ಉಳಿದ 14 ಸಾವಿರ ಮೀಟರ್ ಗಳಿಗೆ ಕಾಂಕ್ರಿಟ್ ಬಳಸಬೇಕೆಂದು ಸಭೆಯಲ್ಲಿ ತಿಳಿಸಲಾಯಿತು. ಜಿಐ ಪೈಪ್ ಸಧ್ಯಕ್ಕೆ ಬಳಕೆ ಆಗದಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button