ಸ್ಥಳೀಯ ಸುದ್ದಿಗಳು

ಪಾಲಿಕೆ ನೌಕರರಿಗೂ ಸಂಜೀವಿ ಜ್ಯೋತಿ ಯೋಜನೆ ಜಾರಿ ಮಾಡಿ-ಪಾಲಿಕೆ ಸಿಬ್ಬಂದಿಗಳಿಂದ ಪ್ರತಿಭಟನೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಮಹಾನಗರ ಪಾಲಿಕೆ ನೌಕರರಿಗೆ ಕರ್ನಾಟಕ ಆರೋಗ್ಯಜ್ಯೋತಿ ಸಂಜೀವಿನಿ ಯೋಜನೆ ಜಾರಿ ನಾಡುವಂತೆ ಒತ್ತಾಯಿಸಿ ರಾಜ್ಯ ಮಹಾನಗರ ಪಾಲಿಕೆಗಳ ನೌಕರ ಸಂಘ ಜಿಲ್ಲಾಶಾಖೆ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಪಾಲಿಕೆಯಂದ ಮೆರವಣಿಗೆ ಹೊರಟು ಮನವಿ ಸಲ್ಲಿಸಿತು.

ತಮಟೆ ಹೊಡೆದುಕೊಂಡು ಮೆರವಣಿಗೆಯು ಪಾಲಿಕೆ ಆವರಣದಿಂದ ಮೆರವಣಿಗೆ ಹೊರಟಿತು. ರಾಜ್ಯ ಸರ್ಕಾರದ ಎಲ್ಲಾ ಇಲಾಖೆ ನೌಕರರಿಗೆ ಈ ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿಗೊಳಿಸಲಾಗಿದೆ. ಮಹಾನಗರ ಪಾಲಿಕೆಯ ಸಿಬ್ವಂದಿಗಳಿಗೆ ಯಾಕೆ ಇಲ್ಲ? ಪಾಲಿಕೆ‌ ಸಿಬ್ಬಂದಿಗಳು ಸರ್ಕಾರಿ ನೌಕರರಲ್ಲವಾ ಎಂದು ಪ್ರಶ್ನಿಸಲಾಗಿದೆ.

ಹಾಗಾಗಿ ಪಾಲಿಕೆ ಸಿಬ್ಬಂದಿಗಳಿಗೂ ಮತ್ತು ಕುಟುಂಬಸ್ಥರಿಗೆ ಸೆ. 6 ರಿಂದ ಜಾರಿಗೊಂಡ ಯೋಜನೆ ಅನ್ವಯವಾಗಬೇಕು ಎಂದು ಒತ್ತಾಯಿಸಲಾಯಿತು. ರಾಜ್ಯದ 10 ಪಾಲಿಕೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆ ಮೆರವಣಿಗೆಯಲ್ಲಿ ಸಂಘದ ಉಪಾಧ್ಯಕ್ಷ ವೇಣುಗೋಲ್, ಎಂ ಮಾರಪ್ಪ ಅಧ್ಯಕ್ಷರು ಕಾರ್ಯದರ್ಶಿ ಗೋವಿಂದ, ಖಜಾಂಚಿ ಎಸ್ ಜಿ ಮಂಜಣ್ಣ, ಖಾಯಂ ನೌಕರರು ಭಾಗಿಯಾಗಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button