ಕ್ರೈಂ

ಬಾಪೂಜಿ ನಗರದಲ್ಲಿ ಗಲಾಟೆ,ಮೆಗ್ಗಾನ್ ಗೆ ದಾಖಲು

20220913_223435ಸುದ್ದಿಲೈವ್.ಕಾಂ/ಶಿವಮೊಗ್ಗ

ಬಾಪೂಜಿ ನಗರದಲ್ಲಿ ಪರಸ್ಪರ ಸ್ನೇಹಿತರು ಕಚ್ಚಾಡಿಕೊಂಡು ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಗಲಾಟೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟು ಮಾಡಿತ್ತು.

ಇಬ್ಬರು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕರ ನಡುವೆ ಪರಸ್ಪರ ಕಚ್ಚಾಟ ಉಂಟಾಗಿದೆ. ಇಬ್ಬರು ಪರಸ್ಪರ ಕಚ್ಚಾಡಿಕೊಂಡಿದ್ದು ಇದಲ್ಲಿ ಒಬ್ಬ ಬಾಪೂಜಿ ನಗರದ 6 ನೇ ತಿರುವಿನಲ್ಲಿ ಗಣಪತಿ ಪೆಂಡಾಲ್ ಕಡೆ ಓಡಿ ಬಂದಿದ್ದಾನೆ.

17 ವರ್ಷದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ, ಇನ್ನೊಬ್ಬ 14 ವರ್ಷದ ಬಾಲಕನಿಗೆ ಹೊಡೆದಿದ್ದಾನೆ. ಬಾಲಕನಿಗೆ ಹೊಡೆಯುವುದನ್ನ ನೋಡಿದ 14 ವರ್ಷದ ಬಾಲಕನ ಚಿಕ್ಕಪ್ಪ ತೇಜಸ್ ಡ್ಯಾನಿಯಲ್ 17 ವರ್ಷದ ಬಾಲಕನಿಗೆ ಹೊಡೆದಿದ್ದಾರೆ.

ಇದರಿಂದ ರೊಚ್ಚಿಗೆದ್ದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ 18 ವರ್ಷದ ಯುವಕ ಆರೀಫ್ ನಿಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಆರೀಫ್ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನೊಂದಿಗೆ ಸೇರಿ ತೇಜಸ್ ವಿರುದ್ಧ ಮುಗಿ ಬಿದ್ದಿದ್ದಾರೆ. ಆ ವೇಳೆ ತೇಜಸ್ ಗೆ ಚಾಕು ತಾಗಿ ಗಾಯಗಳಾಗಿವೆ. ಮೆಗ್ಗಾನ್ ಗೆ ದಾಖಲಾಗಿದ್ದಾನೆ.

ಈ ವೇಳೆ ಪೊಲೀಸರು ಸೇರಿ ಆರೀಫ್ ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ‌ಯುವಕರನ್ನ ರಕ್ಷಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button