ಕ್ರೈಂ

ಪೋಷಕರನ್ನ ಸೇರಿದ ಮಿಸ್ಸಿಂಗ್ ಆಗಿದ್ದ ಬಾಲಕ

20220913_191751ಸುದ್ದಿಲೈವ್.ಕಾಂ/ಶಿವಮೊಗ್ಗ

ದೊಡ್ಡಪೇಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮಗುವೊಂದು ಪೋಷಕರಿಂದ ದೂರವಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಮಗುವಿನ ಪೋಷಕರು ಬಂದು ಕರೆದೊಯ್ದಿದ್ದಾರೆ.

ತುಂಗ ನಗರ ಬಡಾವಣೆಯ ಮಾರಿಯಮ್ಮ ದೇವಸ್ಥಾನದ ನಿವಾಸಿಗಳಾದ ತಾಯಿ ನಾಜಿಮಾ ಕೋಂ ಲೇಟ್ ಇನಾಯತ್ ಖಾನ್ (32) ಇವರ ಮಗ ಖುದ್ದೂಸ್ ಆಗಿದ್ದಾನೆ.

ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಮಗ ಅಂಗನವಾಡಿ ಶಾಲೆಗೆ ತೆರಳಿದ್ದನು. ಶಾಲೆಯಿಂದ‌ಮಗು ಬೇರೆಡೆ ಹೋಗಿದ್ದಾನೆ. ಈ ಮಗು 112 ಇಆರ್ ಎಸ್ ಗೆ ಸಿಕ್ಕಿದ್ದಾನೆ. ವಿಳಾಸ ಸರಿಯಾಗಿ ತಿಳಿಸದ ಕಾರಣ ಪೊಲೀಸರು ಠಾಣ ವ್ಯಾಪ್ತಿಗೆ ಬಂದು ಬಿಟ್ಟುಹೋಗಿದ್ದರು.

ನಂತರ ನಾಜೀಮಾರಿಗೆ ವಿಷಯ ತಲುಪಿ ದೊಡ್ಡಪೇಟೆ ಠಾಣೆಗೆ ಬಂದು ಮಗುವನ್ನ ಕರೆದುಕೊಂಡು ಹೋಗಿದ್ದಾರೆ.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button