ಸ್ಥಳೀಯ ಸುದ್ದಿಗಳು

ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪೌರಕಾರ್ಮಿಕರು ಮೂತಿ ಮುರಿದಿದ್ದೇಕೆ?

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದ‌ ನೆಹರೂ ಕ್ರೀಡಾಂಗಣದಲ್ಲಿ ಮಹಾನಗರ ಪಾಲಿಕೆಯ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆದಿದೆ. ಈ ಕ್ರೀಡಾಕೂಟದಲ್ಲಿ‌ ಎಲ್ಲವೂ ಸರಿಯಾಗಿಲ್ಲವೆಂಬ ಅಂಶ ಹೊರಬಿದ್ದಿದೆ.

ಕ್ರೀಡಾಕೂಟದಲ್ಲಿ ನಾನಾ ಕ್ರೀಡಗಳು ಪೌಕರಕಾರ್ಮಿಕರಿಗಾಗಿ ನಡೆದಿದೆ. ಮ್ಯೂಸಿಕಲ್ ಚೇರ್, ತ್ರೋಬಾಲ್ ಮೊದಲಾದ ಕ್ರೀಡೆಗಳು ಭರ್ಜರಿಯಾಗಿ ನಡೆದಿದೆ. ಕ್ರೀಡಾಕೂಟವನ್ನ ಎಲ್ಲಾ ಪಾಲಿಕೆ ಸದಸ್ಯರು ಸೇರಿ ಮೇಯರ್ ಸುನೀತಾ ಅಣ್ಣಪ್ಪನವರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.

ಕಾರ್ಯಕ್ರಮ ಇತ್ತ ಉದ್ಘಾಟನೆಗೊಳ್ಳುತ್ತಿದ್ದಂತೆ ಇನ್ನೊಂದು ಕಡೆ ಇಬ್ವರು ಮಹಿಳಾ ಪೌರಕಾರ್ಮಿಕರು ಕಿತ್ತಾಡಿಕೊಂಡಿದ್ದಾರೆ. ಪೌರಕಾರ್ಮಿಕರು ತಮಗೆ ಅಥ್ಲೆಟಿಕ್ ಕ್ರೀಡಾಕೂಟದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲವೆಂದು ಕಚ್ಚಾಡಿಕೊಂಡಿದ್ದಾರೆ.

ಸ್ಥಳದಲ್ಲಿಯೇ ಇದ್ದ ಪೌರಕಾರ್ಮಿಕರು ಇಬ್ಬರು ಮಹಿಳೆಯರನ್ನ ಸಮಾಧಾನ ಪಡಿಸಿದ್ದಾರೆ. ಉದ್ಘಾಟನೆಯ ವೇಳೆ ಪಾಲಿಕೆ ಸದಸ್ಯರು ಫೋಟೊ ಸೆಷನ್ ನಲ್ಲಿದ್ದಾಗ ಕುರ್ಚಿ ಇಲ್ಲದೆ ಮಹಿಳಾ ಪೌರಕಾರ್ಮಿಕರು ನಿಂತಿದ್ದವರಿಗೆ ಆಯೋಜಕರು ಚೇರ್ ನೀಡಿದ್ದಾರೆ.

ನೀನೆ ಕುಳಿತುಕೊ ಎಂದು ಮಹಿಳಾ‌ಪೌರಕಾರ್ಮಿಕರು ಮೂತಿ ಮುರಿದ ದೃಶ್ಯ ಲಭ್ಯವಾಗಿದೆ. ಒಟ್ಟಿನಲ್ಲಿ ಅಥ್ಲೆಟಿಕ್ ಕ್ರೀಡಾಕೂಟ ಸಣ್ಣ ಕಾರ್ಯಕ್ರಮವಾಗಿದ್ದರೂ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button