ಕ್ರೈಂ

ಮನೆ ಬಾಡಿಗೆ ಕೇಳಿಕೊಂಡು ಬಂದ ಅಪರಿಚಿತ ಮಹಿಳೆ ಮತ್ತು ಗಂಡಸು-ಮನೆಗೆ ನುಗ್ಗಿ ಚಿನ್ನಾಭರಣ ಕಳವು-ಮಹಿಳೆ ಅರೆಸ್ಟ್

20220913_091021ಸುದ್ದಿಲೈವ್.ಕಾಂ/ಶಿವಮೊಗ್ಗ

ಮಧ್ಯಾಹ್ನ ಮನೆ ಬಾಡಿಗೆ ಕೇಳಿಕೊಂಡು ಬಂದ ಅಪರಿಚಿತ ಪುರುಷ ಮತ್ತು ಮಹಿಳೆ ಇಬ್ಬರು ಸಂಜೆಯ ವೇಳೆಗೆ ಮನೆ ಬಾಡಿಗೆ ಇದೆ ಎಂದು ತೋರಿಸಿದ ಮನೆಗೆ ನುಗ್ಗಿ ಚಿನ್ನಾಭರಣವನ್ನ ಹೊತ್ತೊಯ್ದ ಘಟನೆ ನಡೆದಿತ್ತು ಇದರಲ್ಲಿ ಬುರ್ಕಾ ಹಾಕಿಕೊಂಡು ಬಂದಿದ್ದ ಖತರ್ನಾಕ್ ಲೇಡಿಯನ್ನ ಪೊಲೀಸರು ಪತ್ತೆಹಚ್ಚಿ ಅರೆಸ್ಟ್ ಮಾಡಿದ್ದಾರೆ.

ಜಯನಗರ ಮೊದಲನೇ ತಿರುವಿನಲ್ಲಿರುವ ಸಮರ್ಥ ಅಪಾರ್ಟ್ ಮೆಂಟ್ ನ ಬಳಿ ಬುರ್ಕಾ ಹಾಕಿಕೊಂಡು ಬಂದ ಅಪರಿಚಿತ ಮಹಿಳೆ ಮತ್ತು ಪುರುಷ ಚಂದ್ರಕಲಾ ಎಂಬುವರ ಮನೆ ಬಳಿ ಬಂದಿದ್ದಾರೆ. ಮನೆ ಬಾಡಿಗೆ ಇದೆಯಾ ಎಂದು ಕೇಳಿದ್ದಾರೆ.

ಪಕ್ಕದ ಮನೆ ಬಾಡಿಗೆ ಇದೆ ಎಂದು ಚಂದ್ರಕಲಾ ರವರು ತಿಳಿಸಿ ಫೊನ್ ನಂಬರ್ ಇದೆ ಸಂಪರ್ಕಿಸಿ ಎಂದು ಹೇಳಿ ಮನೆಯೊಳಗೆ ಹೋಗಿದ್ದಾರೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಮನೆ ಬಾಡಿಗೆ ಕೇಳಿಕೊಂಡು ಬಂದ ಇಬ್ವರು ಅಪರಿಚಿತರು ಸಂಜೆ 6 ಗಂಟೆಗೆ ಚಂದ್ರಕಲಾರ ಮನೆಯೊಳಗೆ ನುಗ್ಗಿದ್ದಾರೆ.

ಮನೆಯೊಳಗೆ ನುಗ್ಗಿದ ಬುರ್ಕಾ ಧರಿಸಿದ ಹೆಂಗಸು ಚಂದ್ರಕಲಾರ ಬಾಯಿಯನ್ನ ಅದುಮಿಟ್ಟಿದ್ದಾರೆ. ಬುರ್ಕಾ ಧರಿಸಿದ ಹೆಂಗಸಿನ ಜೊತೆ ಬಂದ ಗಂಡಸು ಚಂದ್ರಕಲಾರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾನೆ. ಚಂದ್ರಕಲಾ ಕಿರುಚಿಕೊಂಡಿದ್ದಾರೆ.

ಪತಿ ಊರಲ್ಲಿಲ್ಲದ ವೇಳೆ ಈ ಘಟನೆ ನಡೆದಿದೆ. ಚಂದ್ರಕಲಾ ಗಂಡಸಿನ ಕೈ ಕಚ್ಚಿದ್ದಾಳೆ, ಮನೆಯಿಂದ ಗಂಡಸು ಓಡಿಹೋಗುವಾಗ ಟಿವಿ ಮೇಲೆ ಇಟ್ಟಿದ್ದ 21 ಗ್ರಾಂ ಚಿನ್ನದ ಸರವನ್ನ‌ ಎತ್ತಿಕೊಂಡು ಹೋಗಿದ್ದಾನೆ. ಗಂಡಸು ಯಾರು ಎಂಬುದು ಇನ್ನೂ ತಿಳಿದಿಲ್ಲ. ಆದರೆ ಮಹಿಳೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರಿನ ಭಾಗ್ಯ ಎಂಬುವಳಿಂದ ಈ ಕೃತ್ಯ ನಡೆದಿದೆ. ಬ್ಯಾಗ್ ನಲ್ಲಿ ಸದಾ ಬುರ್ಕಾ ಇಟ್ಟುಕೊಂಡು ಮಹಿಳೆ ಓಡಾಡುತ್ತಿದ್ದಳು ಎಂದು ತಿಳಿದುಬಂದಿದೆ. ಚಿನ್ಬದ ಸರ ಕದ್ದುಕೊಂಡು ಹೋದ ಗಂಡಸು ಇನ್ನೂ ಅರೆಸ್ಟ್ ಆಗಬೇಕಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button