ರಾಜಕೀಯ

ರಾಜಕೀಯ ಅಖಾಡವನ್ನ ಅಧಿಕೃತಗೊಳಿಸಿದ ಡಾ.ಧನಂಜಯ ಸರ್ಜಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ ಎನ್ನುವ ಮೂಲಕ ಡಾ.ಧನಂಜಯ ಸರ್ಜಿ ಚುನಾವಣ ಅಖಾಡಕ್ಕೆ ಎಂಟ್ರಿಕೊಟ್ಟಿದ್ದಾರೆ.

ನಿನ್ನೆ ಸರ್ಜಿ ಕನ್ವೆನ್ಷನಲ್ ಹಾಲ್ ನಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ದಿನದಂದು ಈ ಅಧಿಕೃತ ಘೋಷಣೆ ಮಾಡುವ ಮೂಲಕ ಡಾ.ಸರ್ಜಿ ರಾಜಕೀಯ ಅಖಾಡವನ್ನ ಅಧಿಕೃತಗೊಳಿಸಿದ್ದಾರೆ. ವೈದ್ಯರ ರಾಜಕೀಯ ಪ್ರವೇಶದಿಂದ ಶಿವಮೊಗ್ಗದ ರಾಜಕೀಯ ಕ್ಷೇತ್ರ ಕಂಪನಗೊಳ್ಳಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.

ಸಾರ್ವಜನಿಕ ಜೀವನ ಆಯ್ಕೆ ಮಾಡಿಕೊಳ್ಳುವ ಮೊದಲು ಸಾಕಷ್ಟು ಘರ್ಷಣೆಗಳಿಗೂ ಕಾರಣವಾಗಿತ್ತು ಎಂದು ಡಾ.ಸರ್ಜಿ ತಮ್ಮ ಭಾಷಣದಲ್ಲಿ ತಿಳಿಸಿದರು. ಆದರೆ ಮೋದಿಯವರು ವಿದ್ಯಾವಂತರು ರಾಜಕೀಯಕ್ಕೆ ಬರಬೇಕು ಎಂದು ಹೇಳಿದ್ದಾರೆ ಎಂದು ಕೋಟ್ ಮಾಡುವ ಮೂಲಕ ಚುನಾವಣ ರಾಜಕೀಯವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ನಗರದ ಜನರ ಮನಸ್ಸಿನಲ್ಲಿದ್ದ ಊಹಾಪೂಹಗಳಿಗೆ ಫುಲ್ ಸ್ಟಾಪ್ ಇಟ್ಟಿರುವ ವೈದ್ಯರು ರಾಜಕೀಯ ಜೀವನಕ್ಕೆ ಧುಮುಕುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಯಾವ ಪಕ್ಷ, ಯಾವ ಚಿಹ್ನೆ ಅಡಿ ಅವರು ಸ್ಪರ್ಧಿಸಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button