ಕ್ರೈಂ

9 ವರ್ಷದ ಮಗುವಿನ ಅಪಹರಣ

ಸುದ್ದಿಲೈವ್.ಕಾಂ/ಭದ್ರಾವತಿ

9 ವರ್ಷದ ಹೆಣ್ಣು ಮಗುವೊಂದನ್ನ ತಾಯಿ ಹತ್ತಿರ ಕರೆದುಕೊಂಡು ಹೋಗುವುದಾಗಿ ನಂಬಿಸಿ ಅಪರಿಚಿತ ಮಹಿಳೆಯೋರ್ವಳು ಅಟೊದಲ್ಲಿ ಅಪಹರಣ ಮಾಡಿಕೊಂಡು ಹೋಗಿರುವ ಘಟನೆ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

9 ವರ್ಷದ ಮಗುವು ತನ್ನ ಅಜ್ಜಿ ಮನೆಯ ಮುಂದೆ ಆಟ ವಾಡುತ್ತಿತ್ತು. ನಿನ್ನ ಅಮ್ಮನ ಹತ್ತಿರ ಕರೆದುಕೊಂಡು ಹೋಗುವೆ ಬಾ ಎಂದು ಅಪರಿಚಿತ ಮಹಿಳೆಯೊಬ್ಬಳು ಆಟೋದಲ್ಲಿ ಕರೆದುಕೊಂಡು ಹೋಗಿರುವ ಘಟನೆ ನಿನ್ನೆ ನಡೆದಿದೆ.

ಮಗುವಿನ ತಂದೆ ತಾಯಿಗೆ ಸಂಸಾರದಲ್ಲಿ ಸರಿ ಬಾರದ ಕಾರಣ ತಂದೆ ತಿಂಗಳು ಗಟ್ಟಲೆ ಮನೆಗೆ ಬರುತ್ತಿರಲಿಲ್ಲ.‌ ಅಲ್ಲದೆ ಮಗುವಿನ ತಾಯಿಗೆ ಎರಡು ಮಕ್ಕಳಿದ್ದು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ.‌ ಈ ಹಿನ್ನಲೆಯಲ್ಲಿ ಅಜ್ಜಿ ಮಗುವನ್ನ ಕರೆದುಕೊಂಡು ಬಂದು ತಮ್ಮೊಂದಿಗೆ ಸಾಕುತ್ತಿದ್ದರು.

ಕೂಲಿ ಕೆಲಸಕ್ಕೆ ಹೋಗುವ ಅಜ್ಜ ಮತ್ತು ಅಜ್ಜಿ ಮಗುವನ್ನ‌ ಮನೆಯ ಮುಂದೆ ಆಟವಾಡಲು ಬಿಟ್ಟು ಕೆಲಸಕ್ಕೆ ತೆರಳಿದ್ದರು. ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನ ಅಪರಿಚಿತ ಹೆಂಗಸು ಬಂದು 9 ವರ್ಷದ ಮಗುವನ್ನ ಆಟೋದಲ್ಲಿ ಕೈಹಿಡಿದು ಕರೆದುಕೊಂಡು ಹೋಗಿದ್ದಾರೆ. ಇದನ್ನ ಪಕ್ಕದ ಮನೆಯವರು ನೋಡಿ ಮಗುವಿನ ಅಜ್ಜ ಅಜ್ಜಿಗೆ ವಿಷಯ ತಿಳಿಸಿದ್ದಾರೆ.‌ ಹೊಸಮನೆ ಪೊಲೀಸ್ ಠಾಣೆಯಲ್ಲಿ ಮಗುವಿನ ಅಪಹರಣ ಪ್ರಕರಣವನ್ನ ದಾಖಲಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button