ರಾಜಕೀಯ

ಅಯೋಧ್ಯ ಮಾದರಿಯಲ್ಲಿಯೇ ಕಾಶಿ ಮತ್ತು ಮಥುರಾ ಪಡೆಯಲ್ಲಿದ್ದೇವೆ-ಈಶ್ವರಪ್ಪ

ಸುದ್ದಿಲೈವ್. ಕಾಂ/ಶಿವಮೊಗ್ಗ

ರಾಷ್ಟ್ರಭಕ್ತರು ಸಂತೋಷ ಪಡುವ ದಿನ. ಕಾಶಿವಿಶ್ವನಾಥ ದೇವಾಲಯದ ಪಕ್ಕದ ಶೃಂಗರ ಗೌರಿ, ಮಾರುತಿ ಸೇರಿದಂತೆ ಅನೇಕ ದೇವತೆಗಳಿಗೆ ವರ್ಷವಿಡಿ ಪೂಜೆಗೆ ಅವಕಾಶ ನೀಡಬೇಕೆಂದು ಕೋರ್ಟ್ ಗೆ ಹೋಗಿದ್ರು. ಜಿಲ್ಲಾ ಕೋರ್ಟ್ ಚರ್ಚೆಗೆ ಅನುಮತಿ ನೀಡಿರುವುದು ಇದು ಎರಡನೇ ಜಯ ಎಂದು ಮಾಜಿ ಸಚಿವ ಈಶ್ವರಪ್ಪ ಸ್ಪಷ್ಟಡಿಸಿದರು.

ಮಾಧ್ಯಮಗಳಲ್ಲಿ ಮಾತನಾಡಿ, ಮೊದಲೆನೆಯದು ಅಯೋಧ್ಯೆಯದು ಮೊದಲೆನಯದು. ವರ್ಷವಿಡಿ ರಾಷ್ಟಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಸಿಗುತ್ತದೆ ಎಂಬ ನಂಬಿಕೆ ಇದೆ. ಕಾಶಿ,.ಮಥುರ ಅಯೋಧ್ಯ ಮೂರು ಶ್ರದ್ದಾ ಕೇಂದ್ರಗಳು. ಯಾವ ಮುಸ್ಮನಾರ ಆಕ್ರಮಣ ಮಾಡಿ ಮೂರು ಜಾಗಗಳಲ್ಲಿನ ನಮ್ಮ ಶ್ರದ್ರಾ ದೇವತೆಗಳಾದ ಕೃಷ್ಣ, ಶಿವ ರಾಮನನ್ನು ದ್ವಂಸ ಮಾಡಿ ಮೂರು ಕಡೆ ಮಸೀದಿ ಕಟ್ಟಲಾಗಿದೆ. ಅಯೋದ್ಯದ ಬಾಬರ್ ಮಸೀದಿ. ಗುಲಾಮರ ಪ್ರತೀಕವಾಗಿತ್ತು‌ ಅಲ್ಲಿ ಭವ್ಯ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ಕಾಶಿಯಲ್ಲಿ ಈಶ್ವರನ ಕಡೆ ಮುಖಮಾಡಿದ ನಂದಿ ಇದೆ. ಅದು ಬೇಗ ಮುಕ್ತವಾಗಿ, ಎಲ್ಲಾ ದೇವತೆಗೆ ಪೂಜೆ ಆಗಬೇಕೆಂಬ ಬಯಕೆ ಇದೆ. ವರ್ಷಕ್ಕೊಮ್ಮೆ ಅವಕಾಶವಿತ್ತು. ಈಗ ವರ್ಷವಿಡಿ ಅವಕಾಶದ ವಿಚಾರವಾಗಿ ಚರ್ಚೆಗೆ ಅವಕಾಶ ನೀಡಿದೆ. ಸೆಪ್ಟೆಂಬರ್ 27 ರಿಂದ ಚರ್ಚೆಗೆ ಅವಕಾಶ ನೀಡಿದೆ. ಕೋರ್ಟ್ ತೀರ್ಪನ್ನು ಸಂತೋಷದಿಂದ ಸ್ವಾಗತ ಮಾಡುತ್ತೆನೆ. ಮಥುರದ ಶ್ರೀಕೃಷ್ಣನ ದೇವಾಲಯದ ಪಕ್ಕದ ಮಸೀದಿ ಇದೆ. ಅಲ್ಲೂ ಪೂರ್ಣ ಪ್ರಮಾಣದ ದೇವಾಲಯವಾಗಲಿ ಎಂದು ಅಶಿಸುತ್ತೆನೆ. ಶ್ತದ್ದಾಕೇಂದ್ರಗಳಿಗೆ ಭೂಮಿ ಮೇಲಿನ ಎಲ್ಲಾ ಕೋರ್ಟ್ ಗೆ ಹೋದ್ರು ಸಹ ನಮಗೆ ಜಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬೆತ್ತಾಗಲಿದೆ

ಕಾಂಗ್ರೆಸ್ ಅನ್ನು ರಾಜ್ಯ, ದೇಶದ ಜನ ತಿರಸ್ಕಾರ ಮಾಡಿದ್ದಾರೆ. ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹಾಗೂ ನಾನೇ ಸಿಎಂ ಆಗಬೇಕೆಂದು ಗುಂಪುಗಾರಿಕೆ ಇದೆ. ಅವರು ನಮ್ಮನ್ನು ಟೀಕಿಸಲು ಹೋಗಿ ಅವರೆ ಬೆತ್ತಲೆ ಆಗುತ್ತಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಬೆತ್ತಲೆ ಆಗುತ್ತದೆ ಎಂದರು.‌

ಯಾವ ಕಾರಣಕ್ಕೆ ಭಾರತ್ ಜೋಡೋ ಪಾದಯಾತ್ರೆ

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಅವರು ಯಾವ ಕಾರಣಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು‌ ಅಧಿಕಾರಕ್ಕಾಗಿ ಭಾರತ ಪಾಕಿಸ್ತಾನ ಎರುಡ ತುಂಡು ಮಾಡಿದ್ರು. ಮೊದಲು ತುಂಡು ಮಾಡಿ ಈತ ಜೋಡೋ ಪಾದಯಾತ್ರೆ ನಡೆಸುತ್ತಿದ್ದಾರೆ.

ಹೋರಾಟ ನಡೆಸಿದ್ದು, ಅಖಂಡ ಭಾರತಕ್ಕಾಗಿಯೇ ಹೊರತು‌ ತುಂಡು ಮಾಡಲು ಅಲ್ಲ‌ .ಎಂದೂ ಭಾರತ ಅಖಂಡ ಭಾರತವಾಗುತ್ತದೆಯೋ ಆಗ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಕ್ಕಂತೆ ಆಗುತ್ತದೆ‌ ಅವರು ಮೊದಲು ತಮ್ಮ ಪಕ್ಷ ಮಾಡಿದ್ದು, ತಪ್ಪು ಎಂದು ಹೇಳಿ, ಈ ಪಾದಯಾತ್ರೆ ನಡೆಸುತ್ತಿರುವುದು ಎಂದು ಸ್ಪಷ್ಟಪಡಿಸಲಿ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button