ರಾಜಕೀಯ

ನಾರಾಯಣ ಗುರು ಕಾರ್ಯಕ್ರಮದಲ್ಲಿ ಮೀಸಲಾತಿಯ ಬಗ್ಗೆ ಮಾತನಾಡಿರುವುದನ್ನ ತಪ್ಪು ಪ್ರಚಾರ ಮಾಡಲಾಗುತ್ತಿದೆ-ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ

ನಾರಾಯಣ ಗುರು ಜಯಂತಿ ಸಂದರ್ಭದಲ್ಲಿ ನಾನು ಪಂಚಾಮ ಸಾಲಿ ಲಿಂಗಾಯಿತರಿಗೆ ಮತ್ತು ಕುರುಬರಿಗೆ ಮೀಸಲಾತಿ ಬೇಡ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಇದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್ ನ ಉಪಾಧ್ಯಕ್ಷರು. ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ನಮಗೂ ಮೀಸಲಾತಿ ಬೇಕು ಎಂದು ಕಾರ್ಯಕ್ರಮದಲ್ಲಿ ಪ್ರಸ್ತಾವನೆ ಮಾಡಿದ್ರು.ಅದಕ್ಕೆ ನಾನು ಹೇಳಿದೆ. ಈಗ ಕುಲಶಾಸ್ತ್ರ ಅಧ್ಯಯನ ನಡೆಸಲಾಗುತ್ತಿದೆ. ಕುಲಶಾಸ್ತ್ರ ಅಧ್ಯಯನದ ವರದಿ ಬಂದ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತದೆ.

ವರದಿ ಬರುವ ತನಕ ಯಾರಿಗೂ ಸಹ ಮೀಸಲಾತಿ ಸಿಗಲ್ಲ. ಎಲ್ಲಾ ವರ್ಗದಲ್ಲೂ ಸಹ ಕಡುಬಡವರಿದ್ದಾರೆ. ಮಂತ್ರಿಗಳು ಹಾಗೂ ಅಧಿಕಾರಿಗಳು ತಮ್ಮದೆ ಹುದ್ದೆಯಲ್ಲಿ ಮಕ್ಕಳು ಮುಂದುವರೆಯಬೇಕೆಂಬ ಆಸೆ ಇರುತ್ತದೆ. ಇದು ಮೀಸಲಾತಿಯ ದುರುಪಯೋಗವಾಗುತ್ತದೆ. ಇಲ್ಲಿ ಯಾರು ತುಳಿತಕ್ಕೆ ಒಳಗಾಗದವರು, ಅರ್ಹರಿಗೆ ಮೀಸಲಾತಿ ಸಿಗಬೇಕೆಂದು ಪ್ರಸ್ತಾಪಿಸಿದ್ದೆನೆ.

ನನ್ನ ಭಾಷಣವನ್ನೆ ತಪ್ಪಾಗಿ ಅರ್ಥೈಯಿಸಲಾಗಿದೆ. ನಾನು ಕುರುಬರಿಗೆ, ಪಂಚಮಸಾಲಿರವರಿಗೆ ಮೀಸಲಾತಿ ನೀಡಬಾರದೆಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.ಕಡುಬಡುವ ಹಾಗೂ ಕುಲಶಾಸ್ತ್ರೀಯ ಅಧ್ಯಯನ ಪ್ರಕಾರ ಮೀಸಲಾತಿ ಸಿಗಬೇಕೆಂದು ತಿಳಿಸಿದರು.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button