ತಾಲ್ಲೂಕು ಸುದ್ದಿ

ಶಿರಾಳಕೊಪ್ಪದ ಓಂ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ

ಸುದ್ದಿಲೈವ್.ಕಾಂ/ಶಿಕಾರಿಪುರ

ತಾಲೂಕಿನ ಶಿರಾಳಕೊಪ್ಪದ ಬಸ್ ನಿಲ್ದಾಣ ಓಂ ಹಿಂದೂ ಮಹಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಗಣಪತಿಯನ್ನ ಆಂಜನೇಯ ಹೊಂಡದಲ್ಲಿವಿಸರ್ಜನೆ ಗೊಳ್ಳಲಲಿದೆ.

ಭಾರಿ ಜನಸ್ತೋಮ ಸೇರಿರುವ ಈ ಗಣಪತಿ ಉತ್ಸವಕ್ಕೆ 12 ಗಂಟೆಗೆ ಚಾಲನೆ ನೀಡಲಾಗಿದೆ. ಶಿರಾಳಕೊಪ್ಪದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಹಿರೇಕೆರೂರು ರಸ್ತೆ, ಸೊರಬ ರಸ್ತೆ ಹಾಗೂ ಆನವಟ್ಟಿ ರಸ್ತಯಲ್ಲಿ ಸಂಚರಿಸಿ ಆಂಜನೇಯ ಹೊಂಡದಲ್ಲಿ ವಿಸರ್ಜನೆಗೊಳ್ಳಲಿದೆ.

ಇಷ್ಟುವರ್ಷ ಛತ್ರದಹಳ್ಳಿಯಲ್ಲಿ ಗಣಪತಿಯನ್ನ ವಿಸರ್ಜಿಸಲಾಗುತ್ತಿತ್ತು. ಆದರೆ ಈ ಬಾರಿ ಶಿರಾಳಕೊಪ್ಪದ ಟೌನ್ ನಲ್ಲಿರುವ ಆಂಜನೇಯ ಹೊಂಡದಲ್ಲಿ ವಿಸರ್ಜಿಸಲಾಗುತ್ತಿದೆ. ಮಧ್ಯಾಹ್ನ 4 ಗಂಟೆಯ ನಂತರ ಬಿಜೆಪಿಯ ರಾಜ್ಯ ಉಪಾಧ್ಯಾಕ್ಷ ಬಿ.ವೈ.ವಿಜಯೇಂದ್ರ ಸಹ ರಾಜಬೀದಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ಈಗಾಗಲೇ ಡೊಳ್ಳು ವಾದ್ಯಗಳ ಮೂಲಕ ಗಣಪತಿಯನ್ನ ರಾಜಬೀದಿ ಉತ್ಸವ ಆರಂಭವಾಗಿದ್ದು ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಆದಿತ್ಯರಿಂದ ಚಾಲನೆ ನೀಡಲಾಗಿದೆ. ಮಂಗಳೂರಿನ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button