ಸುದ್ದಿ

ಕೊಡಚಾದ್ರಿಯಲ್ಲಿ ವೈಟ್ ಬೋರ್ಡ್ vs ಯೆಲ್ಲೋ ಬೋರ್ಡ್ ನಡುವೆ ಜಟಾಪಟಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಿಗರನ್ನ ಕರೆದೋಯ್ಯುವ ಜೀಪ್ ನ  ಮಾಲೀಕರ ನಡುವೆ ಗಲಾಟೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ಸ್ಥಳ ಕೊಡಚಾದ್ರಿಯಲ್ಲಿ ಜೀಪ್ ಮಾಲೀಕರ ನಡುವೆ ಜಟಾಪಟಿ ತಾರಕಕ್ಕೇರಿದೆ.

ವೈಟ್ ಬೋರ್ಡ್ ಜೀಪ್ ಮತ್ತು ಯೆಲ್ಲೋ ಬೋರ್ಡ್ ಜೀಪ್ ಮಾಲೀಕರ ನಡುವೆ ಬೀದಿ ಜಗಳ ಉಂಟಾಗಿದೆ. ವೈಟ್ ಬೋರ್ಡ್ ಜೀಪ್ ತಡೆದ ಯೆಲ್ಲೋ ಬೋರ್ಡ್ ಜೀಪ್ ಮಾಲೀಕರು ವೈಟ್ ಬೋರ್ಡ್ ಓಡಿಸದಂತೆ ಗಲಾಟೆ ನಡೆಸಿದ್ದಾರೆ.

ಕೊಡಚಾದ್ರಿ ಬೆಟ್ಟಕ್ಕೆ ವೈಟ್ ಬೋರ್ಡ್ ಜೀಪ್ ಹೋಗಲು ಅವಕಾಶ ಕೊಡೊಲ್ಲ ಎಂದು ಗಲಾಟೆ ಮಾಡಲಾಗಿದೆ. ಕೊಡಚಾದ್ರಿ ಅರಣ್ಯ ಇಲಾಖೆಯ ಗೇಟ್ ಬಳಿಯೇ ಮಾಲೀಕರು ಜಗಳವಾಡಿದ್ದಾರೆ.

ವರ್ಷಕ್ಕೆ 14,000 ಇನ್ಶೂರೆನ್ಸ್ ಕಟ್ಟೋ ನಾವು ಏನು ಮಾಡಬೇಕು ಅಂತಾ ಯೆಲ್ಲೋ ಬೋರ್ಡ್ ವಾಹನ ಚಾಲಕರು ವೈಟ್ ಬೋರ್ಡ್ ವಾಹನ ಮಾಲೀಕರನ್ನ ಪ್ರಶ್ನಿಸಿದ್ದಾರೆ. ಲೈಪ್ ಟೈಂ ಟ್ಯಾಕ್ಸ್ ಕಟ್ಟೊ ವೈಟ್ ಬೋರ್ಡ್ ನವರಿಗೆ ಬಾಡಿಗೆ ಹೊಡಿಯೋ ಅವಕಾಶ ಕೊಟ್ಟವರಾರು ಎಂದು ಕೇಳಲಾಗಿದೆ.

ವೈಟ್ ಬೋರ್ಡ್ ಜೀಪ್ ನಲ್ಲಿ ಬಾಡಿಗೆ ಮಾಡೋದು ಕಾನೂನು ಪ್ರಕಾರ ಅಪರಾಧ.ಕೊಡಚಾದ್ರಿ ರೋಡ್ ನಲ್ಲಿ ಅಪಘಾತವಾಗಿ ಪ್ರಾಣಕ್ಕೆ ತೊಂದರೆಯಾದ್ರೆ ಯಾರು ಹೊಣೆ..ಈ ಬಗ್ಗೆ ನಗರ ಪೊಲೀಸ್ ಠಾಣೆ ಗಮನಕ್ಕೆ ತಂದ್ರೂ ಯಾವುದೇ ಪ್ರಯೋಜನ ಇಲ್ಲ ಅಂತಾರೇ ಸ್ಥಳೀಯರು.

ನಿರ್ವಹಣೆ ಮಾಡುತ್ತಿರುವ ಅರಣ್ಯ ಇಲಾಖೆಯಿಂದಲೂ ದಿವ್ಯ ನಿರ್ಲಕ್ಷ್ಯ.ಗೇಟ್ ನಲ್ಲಿ ಹಣ ವಸೂಲಿಗೆ ಮಾತ್ರ ಸಿಮೀತವಾದ ಅರಣ್ಯ ಇಲಾಖೆ ಎಂದು ಕೆಂಡಕಾರಲಾಗಿದೆ.ಪ್ರವಾಸಿಗರ ಸುರಕ್ಷತೆಗೆ ಕೊಡಚಾದ್ರಿಯಲ್ಲಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಈ ಹಿಂದಿನಿಂದ ಕೊಡಚಾದ್ರಿಯಲ್ಲಿ ಮಾಮೂಲಿಯಾಗಿರುವ ಜೀಪ್ ಮಾಲೀಕರ ಸುಲಿಗೆ ನಡೆಯುತ್ತಿದೆ. ಒಂದು ಬಾರಿಯ ಕೊಡಚಾದ್ರಿ ಟ್ರಿಪ್ ಗೆ 2.5 ಸಾವಿರ ವಸೂಲಿ ಮಾಡಲಾಗುತ್ತಿದೆ. ಆರ್ ಟಿ ಒ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸುಲಿಗೆಗೆ ಕಣ್ಣುಮುಚ್ಚಿ ಕುಳಿತಿವೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button