ಕ್ರೈಂ

ಸೌಂಡ್ ಸಿಸ್ಟಮ್ಸ್ ಕೊಡಿಸಿದ ವ್ಯಕ್ತಿಯ ಮೇಲೆ ಹಲ್ಲೆ-ಮೆಗ್ಗಾನ್ ಗೆ ದಾಖಲು

ಸುದ್ದಿಲೈವ್. ಕಾಂ/ಶಿವಮೊಗ್ಗ

ಸೌಂಡ್ ಸಿಸ್ಟಮ್ ವಿಚಾರದಲ್ಲಿ ಗಲಾಟೆ ಆಗಿದೆ. ಗಣಪತಿ ವಿಸರ್ಜನೆ ವೇಳೆ ಸೌಂಡ್ ಸಿಸ್ಟಮ್ ಕೊಡಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವ ಘಟನೆಯೂ ಬೆಳಕಿಗೆ ಬಂದಿದೆ.

ಮೊನ್ನೆ ರಾತ್ರಿ ಗೋವಿಂದಾಪುರದ ಗೌಳಿನಗರದ ನಾಗ ಎಂಬುವರು ಗಣಪತಿ ವಿಸರ್ಜನೆಗಾಗಿ ಹೊಸಕೊಪ್ಪದಿಂದ ತಿಮ್ಮೇಶ್ ಎಂಬುವರಿಂದ ಸೌಂಡ್ ಸಿಸ್ಟಮ್ಸ್ ತರಿಸಿಕೊಂಡಿದ್ದಾರೆ. ಆದರೆ ಮೊನ್ನೆ ರಾತ್ರಿ ಗೌಳಿ ನಗರದವರು ರಾತ್ರಿ 10 ಗಂಟೆಯ ವರೆಗೆ ಸೌಸಿಸ್ಟಮ್ಸ್ ಬಾಕ್ಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ತಿಮ್ಮೇಶ್ ಗೆ ಸೌಂಡ್ ಸಿಸ್ಟಮ್ಸ್ ನ ಮಾಲೀಕರು ಕರೆ ಮಾಡಿದ್ದಾರೆ.

ಸೌಂಡ್ ಸಿಸ್ಟಮ್ಸ್ ನ್ನ ಕೊಡಿಸು ಎಂದು ಮಾಲೀಕ ಹೇಳಿದ್ದಕ್ಕೆ ತಿಮ್ಮೇಶ್ ನೀಲ ನಾಯ್ಕನೊಂದಿಗೆ ಹಾಯ್ ಹೊಳೆಗೆ ಬಂದು ಗಣಪತಿ ವಿಸರ್ಜನೆ ಮಾಡುತ್ತಿದ್ದವರಿಗೆ ಸೌಂಡ್ ಸಿಸ್ಟಮ್ ಕೊಡಿ ಎಂದು ಕೇಳಿದ್ದಾರೆ.ಹಣಕೊಟ್ಟಿದ್ದೇವೆ ನೀನು ಯಾರು ಕೇಳಲು ಎಂದು ಸೌಂಡ್ ಸಿಸ್ಟಮ್ಸ್ ಕೊಡಿಸಿದ ತಿಮ್ಮೇಶ್ ಗೆ  ಗದರಿಸಿದ್ದಾರೆ.

ತಿಮ್ಮೇಶ್ ಗೌಳಿ ನಗರದ ವೃತ್ತದ ಬಳಿ ಬಂದು ನೀಲನಾಯ್ಕ ಮತ್ತು ವೆಂಕಟೇಶ್ ಜೊತೆ ನಿಂತಿದ್ದಾಗ ಸೌಂಡ್ ಸಿಸ್ಟಮ್ ಕೇಳಿದ ನಾಗ, ಬಾಬು , ವೀರೇಶ್ ದಿನೇಶ್ ಸೇರಿ ಇತರೆ ನಾಲ್ಕು ಜನ ತಿಮ್ಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ದೊಣ್ಣೆಯಿಂದ ಹೊಡೆದಿದ್ದಾರೆ. ತಿಮ್ಮೇಶ್ ರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button