ಕ್ರೈಂ

ಶಿವಮೊಗ್ಗ ಹಿಂದೂ ಮಹಾಸಭಾದ ವಿರುದ್ಧ ನೆಟ್ಟಿಗರ ಆಕ್ರೋಶ-ಮಹಾಸಭಾ ಅಲ್ಲ, ಇದು ಹಿಂದಿ ಮತ್ತು ಮರಾಠಿಗರ ಕೂಟ ಎಂದು ನಾಮಕರಣ!

ಸುದ್ದಿಲೈವ್. ಕಾಂ/ಶಿವಮೊಗ್ಗ

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಸಜ್ಜಾಗುತ್ತಿರು‌ವ ಗಾಂಧಿ ಬಜಾರ್ ನಲ್ಲಿ ನಿರ್ಮಿಸಿರುವ ಗೀತೋಪದೇಶ ಸಾರುವ ಕೃಷ್ಣಾರ್ಜುನರ ವಿಡಿಯೋ ಫೇಸ್ ಬುಕ್ ನಲ್ಲಿ ಭರ್ಜರಿ ವೀಕ್ಷಣೆ, ಕಾಮೆಂಟ್ಸ್ ಶೇರಿಂಗ್ ಆಗ್ತಾ ಇದೆ.

ಅದರೊಂದಿಗೆ ಶಿವಮೊಗ್ಗದ ಹಿಂದೂ ಮಹಾಸಭಾ ವಿರುದ್ಧ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಿಂದಿ ಮತ್ತು ಮರಾಠಿಗರ ಕೂಟ ಎಂದು ನಾಮಕರಣ ಮಾಡಿ ಆಕ್ರೋಶ ವ್ಯಕ್ತವಾಗುತ್ತಿದೆ. 96 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿರುವ ನಮ್ಮ ಶಿವಮೊಗ್ಗ ಪೇಜ್ ನಲ್ಲಿ ಶಿವಮೊಗ್ಗ ಹಿಂದೂ ಮಹಾಸಭಾದ ವಿರುದ್ಧ ನೆಟ್ಟಿಗರು ಅಕ್ಷರಶಃ ಮುಗಿಬಿದ್ದಿದ್ದಾರೆ.

ಫೇಸ್ ಬುಕ್ ನ ಲಿಂಕ್ ನೋಡಲು ಈ ಕೆಳಗಿನ ಲಿಂಕ್ ಒತ್ತಿ. https://fb.watch/fmMJBSGyfO/

ಅಯೋಧ್ಯ, ಶಿವಾಜಿ ನಿರ್ಮಿಸಿರುವ ಮಹಾದ್ವಾರಗಳಲ್ಲಿ ಈ ಬಾರಿ ಕನ್ನಡಿಗ ಮಹಾಪುರುಷರ ಪ್ರತಿಮೆ ರಚನೆ ಆಗಲಿ ಎಂಬ ನಿರೀಕ್ಷೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಹಿಂದೂ ಮಹಾಸಭಾ ಗಣಪತಿ ಉತ್ಸವದ ಅಲಂಕಾರ ಸಮಿತಿ ಕೃಷ್ಣಾರ್ಜುನರ ವಿಶೇಷ ಅಲಂಕಾರ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ವೀರ ಪುರುಷ ಇಮ್ಮುಡಿ ಪುಲಿಕೇಶಿ, ಕಿತ್ತೂರ ರಾಣಿ ಚೆನ್ನಮ್ಮ, ಶಿವಮೊಗ್ಗದ ಶಿವಪ್ಪ ನಾಯಕ, ವೀರ ಮದಕರಿ, ಸಂಗೊಳ್ಳಿ ರಾಯಣ್ಣನಂತಹ ಮಹಾಪುರುಷರೆಲ್ಲಾ ಈ ಹಿಂದಿ ಮತ್ತು ಮರಾಠಿ ಕೂಟಕ್ಕೆ ಮಾರಿಹೋಗಿರುವ ಶಿವಮೊಗ್ಗ ಮಹಾಸಭಾಕ್ಕೆ ನೆನಪಾಗಲಿಲ್ಲವೇಕೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಆಕ್ರೋಶವನ್ನ ಮಹಾಸಭಾ ಅರ್ಥೈಸಿಕೊಂಡು ಮುಂಬರುವ ಗಣಪತಿ ಉತ್ಸವದಂದು ತಿದ್ದಿಕೊಳ್ಳಬಲ್ಲದೆ ಎಂಬುದನ್ನ ಕಾದು ನೋಡಬೇಕಿದೆ.

ಆದರೂ ಸಹ ಫೇಸ್ ಬುಕ್ ನಲ್ಲಿ ಗಾಂಧಿ ಬಜಾರ್ ಮಹಾದ್ವಾರ ನಿರ್ಮಾಣದ ದೃಶ್ಯಾವಳಿಯನ್ನ ಹರಿಬಿಡಲಾಗಿದೆ. ಈ ದೃಶ್ಯಾವಳಿಯನ್ನ ಹರಿಬಿಟ್ಟ 18 ಗಂಟೆಯಲ್ಲಿ 18 ಸಾವಿರ ವೀವ್ಸ್ ಆಗಿದೆ. 200 ಕ್ಕೂ ಹೆಚ್ಚು ಶೇರ್ ಆಗಿದೆ‌ ಸಾವಿರಾರು ಜನ ಲೈಕ್ಸ್ ಮಾಡಿದ್ದಾರೆ. ಅದರ ಬೆನ್ನಲ್ಲೇ ನೆಟ್ಟಿಗರು ಕಿಡಿಕಾರಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button