ರಾಜಕೀಯ

ಕುವೆಂಪು ರಂಗಮಂದಿರದಲ್ಲಿ ಮಡಿವಾಳ ಸಮಾಜದ ಜನಜಾಗೃತಿ ಸಮಾವೇಶ-ಬಿವೈಆರ್, ಆಯನೂರು ಮಂಜುನಾಥ್ ಭಾಗಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ಮಡಿವಾಳ ಸಮಾಜವನ್ನ ಪರಿಶಿಷ್ಠ ಜಾತಿಗೆ ಸೇರಿಸಲು ಚರ್ಚೆಯೊಂದು ಆರಂಭವಾಗಿದೆ. ಆದರೆ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.‌

ಅವರು ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಕಾ ಮಡಿವಾಳ ಸಮಾಜ ವೃತ್ತಿ ನಿರತರ ಸಂಘ ಹಮ್ಮಿಕೊಂಡಿದ್ದ ಸಮಾಜ ಬಾಂಧವರ ಜನ‌ಜಾಗೃತಿ ಸಮಾವೇಶ ಮತ್ತು ಪುರ ಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನಂಬಿಕೆ ವಿಶ್ವಾಸದ ಸಮಾಜ ಮಡಿವಾಳರ ಸಮಾಜವಾಗಿದೆ ಮಡಿವಾಳರ ಆಶೀರ್ವಾದದಿಂದಲೂ ಸಂಸದನಾಗಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ಆಶ್ವಾಸನೆ ನೀಡಿರುವುದನ್ನ ಬಹುಪಾಲು ಆಶ್ವಾಸನೆ ಈಡೇರಿಸಲಾಗಿದೆ ಎಂದರು.

ಸೊರಬ ಮತ್ತು ಆನವಟ್ಟಿ ಕ್ಷೇತ್ರದಲ್ಲಿ ಮಡಿವಾಳರ ಸಮುದಾಯ ಭವನಕ್ಕೆ ಚಾಲನೆ ನೀಡಲಾಗಿದೆ.‌ ಶಿಕಾರಿಪುರ,ಮತ್ತು ಸಾಗರದಲ್ಲಿ, ಹೊಳೆಹೊನ್ನೂರಿನಲ್ಲಿ ಅನುದಾನ ನೀಡಲಾಗುತ್ತಿದೆ. ಗಾಂಧಿ ಬಜಾರ್ ನ ಅಂತರಘಟ್ಟಮ್ಮ ದೇವಸ್ಥಾನದ ಬಳಿ ಭವನಕ್ಕೆ, ಸಂಸದನ ಅನುದಾದನದಲ್ಲಿ ನೀಡಲಾಗಿದೆ ಎಂದರು.

ನಾನು ಕೊಟ್ಟೆ ಎನ್ನುವುದಕ್ಕಿಂತ ಸಮಾಜ ಕೊಡುವಂತೆ ಮಾಡಿದೆ. ಮಡಿವಾಳ ಮಾಚಿದೇವನ ಪ್ರತಿಮೆಯನ್ನ ಅಕ್ಕಮಹಾದೇವಿಯ ಐತಿಹಾಸಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ. ಸಮಾಜದ ಸಂಘಟನೆ ಶಕ್ತಿ ನೀವು. ಎಸ್ ಸಿ ಜನಾಂಗಕ್ಕೆ ಸೇರಿಸಬಹುದ ಎಂಬ ಚಿಂತನೆ ನಡೆಯುತ್ತಿದೆ. ಶೇ.50 ರಷ್ಟು ಮೀಸಲಾತಿ ಮೀರುವಂತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಚೌಕಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು.‌

ಮೀಸಲಾತಿ ಕುರಿತು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ಕಾನೂನು ಸಾಧಕ ಬಾಧಕ ನೋಡಬೇಕಿದೆ. ರಾಜಕೀಯ ಸ್ಥಾನ ಮಾನದ ಬಗ್ಗೆ ಚರ್ಚೆ ಆಗುತ್ತಿದೆ ಇದು ಒಳ್ಳೆಯ ಬೆಳವಣಿಗೆ ಎಂದರು. ಶಂಕರಪ್ಪನವರನ್ನ ಬಿಎಸ್ ವೈ ಶಾಸಕರನ್ನಾಗಿ ಮಾಡಲು ಪ್ರಯತ್ನಿಸಿದರು. ಆಗಲಿಲ್ಲ ರಘು ಕೌಟಿಲ್ಯ ಎಂಎಲ್ ಸಿ ಆಗುವಲ್ಲಿ 15 ಮತದಲ್ಲಿ ಸೋತಿದ್ದಾರೆ. ರಾಜಕೀಯ ಸ್ಥಾನ ಮಾನ ದೊರಕಲು ಹಲವು ಪ್ರಯತ್ನಗಳು ನಡೆದಿದೆ. ಮುಂದೆಯೂ ನಡೆಯಲಿ ಪ್ರತಿಫಲ ದೊರೆಯುತ್ತದೆ ಎಂದರು.

ಪರಿಶಿಷ್ಠ ಜಾತಿಗೆ ಸೇರಿಸಬೇಕೆಂಬ ಅನ್ನಪೂರ್ಣ ವರದಿ ಆದಷ್ಟು ಬೇಗ ಜಾರಿಯಾಗಲಿಎಂದು ಕೋರಿದರು.‌

ಕಾರ್ಯಕ್ರಮದಲ್ಲಿ ಮತ್ತೋರ್ವ ಮುಖ್ಯ ಅತಿಥಿಯಾಗಿ ಬಂದಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ಅವಿಭಾಜ್ಯ ಅಂಗ ಮಡಿವಾಳ ಸಮಾಜವಾಗಿದೆ,

ಹಿಂದೆ ಮಡಿವಾಳರು ಚಪ್ಪರಕ್ಕೆ ಹಳದಿ ಕಟ್ಟಿದಾಗಲೇ ಮದುವೆಯಂತಹ ಶುಭಕಾರ್ಯ ಆರಂಭವಾಗುತ್ತಿತ್ತು. ಕಾಲ ಕಳೆದಂತೆ ಬಂಡವಾಳ ಶಾಹಿಗಳ ಕೈಯಲ್ಲಿ ವೃತ್ತಿಪರತೆ ಸಿಕ್ಕಿಕೊಂಡ ಕಾರಣ ಪೈಪೋಟಿ ಆರಂಭವಾಗಿದೆ. ಮದ್ಯಮ ಜನಾಂಗ ಮತ್ತು ಆರ್ಥಿಕ ಹಿಂದುಳಿದವರು ಬದುಕುವುದು ಕಷ್ಟವಾಗಿದೆ. ಹಾಗಾಗಿ ಸರ್ಕಾರಿ ಸವಲತ್ತಿಗೆ ಮೀಸಲಾತಿ ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನ ಚಿತ್ರದುರ್ಗದ ಮಡಿವಾಳ ಮಾಚಿದೇವ ಸಂಸ್ಥಾನದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ವಹಿಸಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button