ಕ್ರೈಂ

ಕುಡಿಯಲು ಹಣಕೊಡಲಿಲ್ಲವೆಂದು ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಕುಡಿಯಲು ಹಣಕೊಡದಿದ್ದಕ್ಕೆ ಸ್ನೇಹಿತನನ್ನ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹರಿಗೆಯಲ್ಲಿ ನಡೆದಿದೆ.

ಹರಿಗೆಯ ಶ್ರೀನಿಧಿ ವೈನ್ಸ್ ನಲ್ಲಿ ಕುಡಿಯಲು ಹೋದ ಧನಂಜಯನಿಗೆ ಬೈರವ ಮತ್ತು ವಿಜಿ ಯಾನೆ ಗುಣಿಯವರು ಸಿಕ್ಕಿದ್ದಾರೆ. ಭೈರವ ಮತ್ತು ಗುಣಿಯವರು ನಮಗೂ ಕುಡಿಸು ಎಂದು ದುಂಬಾಲು ಬಿದ್ದಿದ್ದಾರೆ. ನನ್ನ ಬಳಿ ಹಣವಿಲ್ಲವೆಂದರೂ ಇಬ್ಬರು ಧನಂಜಯ್ ಗೆ ಪೀಡಿಸಿದ್ದಾರೆ.

ಕುಡಿಸದಿದ್ದ ಧನಂಜಯ್ ನಿಗೆ ಭೈರವ ನನ್ನ ಮೊಬೈಲ್ ಕೊಡು ಎಂದು ಖ್ಯಾತೆ ತೆಗೆದಿದ್ದಾನೆ. ನೀನು ಎಲ್ಲಿ ಕೊಟ್ಟಿದ್ದಾನ ನನಗೆ ಎಂದು ಧನಂಜಯ್ ಪ್ರಶ್ನಿಸಿದ್ದಾನೆ. ನಮಗೆ ಪ್ರಶ್ನೆ ಮಾಡ್ತ್ಯಾ ಎಂದು ಭೈರವ ತನ್ನ ಮನೆಗೆ ಕರೆದುಕೊಂಡು ಹೋಗಿ ಕೂಡಿಹಾಕಿದ್ದಾನೆ.

ಹರಿಗೆ ವೃತ್ತದ ಬಳಿ ಧನಂಜಯ್ ಮೇಲೆ ಹಲ್ಲೆ ನಡೆಸಿದ್ದಾನೆ ಕಬ್ಬಿಣದ ರಾಡಿನಿಂದ ಧನಂಜಯ್ ಮೇಲೆ ಗುಣಿ ಮತ್ತು ಭೈರವ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಸುತ್ತಮುತ್ತಲಿನ ಜನ ಜಗಳ ಬಿಡಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು‌ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button