ಸ್ಥಳೀಯ ಸುದ್ದಿಗಳು

ವೀರ ಸಾವರ್ಕರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್-ಬಜರಂಗ ದಳದಿಂದ ಪ್ರತಿಭಟನೆ ಠಾಣೆಗೆ ದೂರು

20220901_200912ಸುದ್ದಿಲೈವ್.ಕಾಂ/ಶಿವಮೊಗ್ಗ

ವೀರ ಸಾವರ್ಕರ್ ನ್ನ ಅವಮಾನಿಸಲಾಗಿದೆ ಎಂದು ಬಜರಂಗದಳ ದ ಕಾರ್ಯಕರ್ತರು ರಾಗಿಗುಡ್ಡದಲ್ಲಿ ಇಂದು ಧರಣಿ ನಡೆಸಿ ಅವಮಾನ ಮಾಡಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ವೀರ ಸಾವರ್ಕರ್ ವಿಚಾರವಾಗಿ ಫೇಸ್ ಬುಕ್ ನಲ್ಲಿ ಬುಲ್ ಬುಲ್ ಹಕ್ಕಿ ಮೇಲೆ ಕುಳಿತು ಬಂದ ಚಿತ್ರವೊಂದನ್ನ ರಾಗಿಗುಡ್ಡದ ಮನ್ಸೂರ್ ಅಲಿ ಎಂಬಾತನು ಹರಿಬಿಟ್ಟಿದ್ದಾನೆ ಎಂದು ಆರೋಪಿಸಿ ಬಜರಂಗದಳ ಕಾರ್ಯರ್ತರು ಪ್ರತಿಭಟನೆ ನಡೆಸಿದ್ದಾರೆ.

ಬುಲ್ ಬುಲ್ ಪಕ್ಷಿಯ ಮೇಲೆ ಕುಳಿತು ಅಂಡಮಾನ್ ಜೈಲಿನಿಂದ ಭಾರತಕ್ಕೆ ಬಂದು ಹೋಗುತ್ತಿದ್ದ ವೀರ ಸಾವರ್ಕರ್ ರವರ ಅಪರೂಪದ ಚಿತ್ರ ಎಂದು ಪೋಸ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಪೋಸ್ಟ್ ವಿರುದ್ಧ ಬಜರಂಗ್ ದಳ ಪ್ರತಿಭಟಸಿದೆ.

ಕಾಲು ಚಾಚಲೂ ಜಾಗವಿರದ ಹಾಗೂ ಆಕಾಶವೂ ನೋಡಲು ಸಾಧ್ಯವಿರದ ಸೆಲ್ ನಲ್ಲಿ ಇದ್ದ ವೀರಸಾವರ್ಕರ್ ಬುಲ್ ಬುಲ್ ಹಕ್ಕಿ ಏರಿ ಭೂಮಿತಾಯಿಯನ್ನ ಮುಟ್ಟಿ ಬರುತ್ತಿದ್ದರು ಎಂಬ ಪಠ್ಯದಲ್ಲಿ ಉಲ್ಲೇಖಿಸಲಾಗಿದೆ. ಈ ಉಲ್ಲೇಖನದ  ಹಿನ್ನಲೆಯಲ್ಲಿ ಮನ್ಸೂರ್ ಈ ಪೋಸ್ಟ್ ಹಾಕಿರ ಬಹುದು ಎಂದು ಸಹ ಅಂದಾಜಿಸಲಾಗಿದೆ

ಒಟ್ಟಿನಲ್ಲಿ ವೀರ ಸಾವರ್ಕರ್ ನ ಪರ ವಿರೋಧ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದೆ. 6 ದಿನಗಳ ಹಿಂದೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಬೋಳಿಯಾರ್ ಪೇಜ್ ನಲ್ಲೂ ಈ ಬಗ್ಗೆ ಉಲ್ಲೇಖವಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button