ಕ್ರೈಂ

ಸಾಲ ಕೇಳಲು ಹೋದ ಅಳಿಯ ಮತ್ತು ಮಾವನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ

ಸುದ್ದಿಲೈವ್. ಕಾಂ/ಭದ್ರಾವತಿ

ಸಾಲ ಕೊಟ್ಟ ಹಣವನ್ನ ವಾಪಾಸ್ ಕೊಡು ಎಂದು ಕೇಳಲು ಹೋದ ಸ್ನೇಹಿತನ ಮೇಲೆ ಮನೆ ಮಂದಿಯವರೆಲ್ಲಾ ದಾಳಿ ನಡೆಸಿದ್ದಾರೆ. ಸ್ನೇಹಿತನ ಮಾವನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಭದ್ರಾವತಿ ತಾಲೂಕ್ ತಿಪ್ಲಾಪುರ ಗ್ರಾಮದ ವಾಸಿಯಾದ ಗೌಸ್ ಶರೀಪ್ ರವರ ಅಳಿಯನಾದ ಅನಿಷನು ಅವನ ಸ್ನೇಹಿತ ಮಹೆರ ಅಲಿ ರವರಿಗೆ ಸಾಲವಾಗಿ 40.000 ರೂ ಹಣ ಕೊಟ್ಟಿದ್ದರು. ಇದನ್ನ ಅಳಿಯ ಮತ್ತು ಮಾವ ಕೇಳಲು ಮೆಹರ ಅಲಿಯವರ ಮನೆಗೆ ತೆರಳಿದ್ದಾರೆ.

ಹಣ ಕೇಳಲು ಬಂದ ಸ್ನೇಹಿತ ಅನಿಷ್ ನಿಗೆ ಮೆಹರ್ ಅಲಿ ಅವಾಚ್ಯವಾಗಿ ಬೈದಿದ್ದಾನೆ. ಇದನ್ನ ನೋಡಿದ ಗೌಸ್ ಶರೀಪ್ ಮೆಹರ ಅಲಿಯನ್ನ ಹಣ ಕೊಡಲು ಕೇಳಲು ಅಳಿಯನ ಜೊತೆ ಸೇರಿದ್ದಾರೆ. ಆದರೆ ಅಲಿ ಶರೀಫ್ ರನ್ನೂ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದಿದ್ದಾನೆ. ಮೆಹರ ಅಲಿಯ ಜೊತೆ ಕೈ ಜೋಡಿಸಿದ ಅಣ್ಣ, ಮುಭಾರಕ್ ಅಲ್ಲೇ ಇದ್ದ ಕಬ್ಬಿಣದ ರಾಡಿನಿಂದ ಗೌಸ್ ಶರೀಫ್ ತಲೆಗೆ ಮತ್ತು ಕೆನ್ನೆಯ ಮೇಲೆ ದಾಳಿ ನಡೆಸಿದ್ದಾನೆ.

ಅಲ್ಲದೆ ಮೆಹರ ಅಲಿ ರವರ ತಂದೆ ನಜೀರ್ ಅಹ್ಮದ್ ಹಾಗೂ ಆತನ ಇನ್ನೊಬ್ಬ ಅಣ್ಣ ಇದಾಯತ್ ರವರು ಸಹ ಗೌಸ್ ಶರಿಫ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಅನಿಷನ ತಂದೆ ಮೆಹಬೂಬ್ ಪಾಷ ಹಾಗೂ ಅನಿಷನ ಪತ್ನಿ ಕೈರೂನ್ನೀಸಾ ರವರಿಗೆ ಮುಭಾರಕ್ ಹಲ್ಲೆ ನಡೆಸಿದ್ದಾರೆ.

ಕೈಯಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಇದನ್ನ ನೋಡಿದ ಅಕ್ಕಪಕ್ಕದವರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಈ ವೇಳೆ ಮೆಹರ ಅಲಿ ಮತ್ತು ನಜೀರ್ ಅಹ್ಮದ್ ಗೌಸ್ ಶರೀಫ್ ಮತ್ತು ಅವರ ಕಡೆಯವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ.

ಈ ರೀತಿ ಹಲ್ಲೆ ಮಾಡಿದವರ ಮೇಲೆ ಕಾನೂನು ಮಾಡಿರುವರ ಮೆಹರ್ ಅಲಿ ಮತ್ತು ಆತನಿಗೆ ಸಹಾಯ ನೀಡಿದ ಮೂವರ ವಿರುದ್ಧ ಕ್ರಮ ಜರುಗಿಸಲು ಗೌಸ್‌ ಶರೀಪ್ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button