ಕ್ರೈಂ

ಮಾಜಿ ಸಚಿವರಿಗೆ ಬೆದರಿಕೆ ಪತ್ರ-ಎಫ್ಐಆರ್ ದಾಖಲು

ಸುದ್ದಿಲೈವ್.ಕಾಂ/ಶಿವಮೊಗ್ಗ

ಮಾಜಿ ಸಚಿವ ಈಶ್ವರಪ್ಪನವರಿಗೆ ಬಂದಿರುವ ಬೆದರಿಕೆ ಪತ್ರ ಈಗ ಎಫ್ಐಆರ್ ಆಗಿದೆ. ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇರೆಗೆ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಎರಡು ದಿನಗಳ ಹಿಂದೆ ಮಾಜಿ ಸಚಿವ ಈಶ್ವರಪ್ಪನವರ ಮನೆಗೆ ಅಂಚೆ ಮೂಲಕ ಬಂದ ಅನಾಮೇಧೇಯ ಪತ್ರವೊಂದು ಬಂದು ತಲುಪಿತ್ತು. ಈ ಪತ್ರದ ಕುರಿತು ಈಶ್ವರಪ್ಪನವರ ಆಪ್ತ ಕಾರ್ಯದರ್ಶಿ ಲೋಕೇಶ್ ಎಸ್ಪಿ ಲಕ್ಷ್ಮೀ ಪ್ರಸಾದ್ ಗೆ ಲಿಖಿತ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇರೆಗೆ ಈಗ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎನ್ ಸಿ (Non-cognizable) ಮಾಡಿಕೊಂಡು ನ್ಯಾಯಾಂಗದ ಒಪ್ಪಿಗೆ ಪಡೆದು ಎಫ್ಐಆರ್ ಮಾಡಿಕೊಳ್ಳಲಾಗಿದೆ.

ಮಾಜಿ ಸಚಿವರಿಗೆ‌ ಬಂದ ಪತ್ರದಲ್ಲಿ ಅವ್ಯಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಲಾಗಿದೆ ಎಂದು ಎಫ್ ಐಆರ್ ನಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ನಿನ್ನೆ ಜಿಲ್ಲಾ ರಕ್ಷಣಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್ ಮೀಡಿಯಾ ಹೌಸ್ ನಲ್ಲಿ ನಡೆದ ಸಂವಾದದಲ್ಲಿಯೂ ಸಹ ಈಶ್ವರಪ್ಪನವರಿಗೆ ಬಂದ ಅಪರಿಚಿತ ಪತ್ರದ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button