ರಾಜಕೀಯ

ಚುನಾವಣೆ ಬೇಡವೆಂದು ಬಿಎಸ್ ವೈ ಸಹ ಸೂಚಿಸಿದ್ದರು-ಆದರೆ ಸಮಯ ಮೀರಿಹೋಗಿತ್ತು-ಎಸ್ ಎಸ್ ಜ್ಯೋತಿ ಪ್ರಕಾಶ್

ಸುದ್ದಿಲೈವ್. ಕಾಂ/ಶಿವಮೊಗ್ಗ

ಚುನಾವಣೆಯಲ್ಲಿ ಎದುರಾಳಿ ಆಗಿ 7 ಜನ ಗೆದ್ದ ಎಸ್ಪಿ ದಿನೇಶ್ ಅವರ ಗುಂಪಿಗೆ ಶುಭಾಶಯಗಳು, ಹಿಂದಿನ ಅವಧಿಯಲ್ಲಿ ಚುನಾವಣೆ ನಿಗದಿತ ಅವಧಿಯಲ್ಲಿ ನಡೆಸಲಾಗಲಿಲ್ಲ. ಆದರೆ ಇನ್ನು ಮುಂದೆ ಬೈಲಾ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ಬಸವೇಶ್ವರ ವೀರಶೈವ ಸಮಾಜದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಎಸ್ ಎಸ್ ಜ್ಯೋತಿ ಪ್ರಕಾಶ್ ಭರವಸೆ ನೀಡಿದ್ದಾರೆ.

ಅವರು ಮೀಡಿಯಾ ಹೌಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ, ಈ ಹಿಂದೆ ನಿಕಟಪೂರ್ವ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಹ ಚುನಾವಣೆ ಬೇಡ ಎಂದು ಸಲಹೆ ನೀಡಿದ್ದರು. ಆದರೆ ಅವರ ಹೇಳಿಕೆಯನ್ನ ಚಾಲನೆ ತರಲು ವಿಳಂಬವಾಯಿತು. ಅಷ್ಟರಲ್ಲೇ ಮೂರು ತಂಡ ರಚನೆ ಆಯಿತು.

ಮುಂದಿನ ದಿನಗಳಲ್ಲಿ ವೀರ ಶೈವ ಧರ್ಮದ‌ಬಗ್ಗೆ ಹೆಚ್ಚಿನ ಜಾಗೃತಿ ಮಾಡುತ್ತೇವೆ ರಾಮಣ್ಣ‌ಶೆಟ್ಟಿಯ ವೀರಶೈವ ಗದ್ದುಗೆ ಇದೆ. ಅಲ್ಲಿ ಸಂಸ್ಕೃತ ಪಾಠ ಶಾಲೆ ಆರಂಭಿಸುತ್ತೇವೆ. ವೀರಶೈವರಲ್ಲಿ ಪುರೋಹಿತರು ಹೆಚ್ಚು ಹೆಚ್ಚು ನೇಮಿಸಬೇಕಿದೆ. ಹಾಗಾಗಿ ಸಂಸ್ಕೃತ ಪಾಠ ಶಾಲೆ ಆರಂಭಿಸಲಾಗುತ್ತಿದೆ ಎಂದರು.

ಸಂಘಟನಾ ಶಕ್ತಿಯಿಂದ ಹೆಚ್ಚಿನ ಜನರ ನೋಂದಾಣಿ ಮಾಡಿಕೊಳ್ಳಲಾಗುತ್ತಿದೆ. ಶಾಲೆಯನ್ನ ದತ್ತು ತೆಗೆದುಕೊಳ್ಳುವ ಕಾರ್ಯ ಹೆಚ್ಚಾಗಲಿದೆ. ಒಂದು ಟೈ ಆಗಿರುವುದರಿಂದ‌ ಅವರ ತಂಡದಲ್ಲಿರುವ ರತ್ನ ಜೆ.ಆರ್‌ ಒಂದು ವರ್ಷ ನಿರ್ದೇಶಕರಾಗಿರುತ್ತಾರೆ. ನಂತರ ಉಳಿದ ಒಂದು ವರೆ ವರ್ಷದ ಅವಧಿಗೆ ನಮ್ಮ ತಂಡದ ನಾಗರಾಜ್ ನಿರ್ದೇಶಕರಾಗಲಿದ್ದಾರೆ ಎಂದರು.

ನಾವೆಲ್ಲಾ ಅಂದರೆ ಎಸ್ಪಿ ದಿನೇಶ್ ಅವರ ತಂಡದ ಜೊತೆ ಕುಳಿತು ಅಧ್ಯಕ್ಷರನ್ನ ಆಯ್ಕೆ ಮಾಡುತ್ತೀವಿ. 6 ಜನ ನಮ್ಮಲ್ಲಿ ಸೋತಿದ್ದಾರೆ. ನಮ್ಮ ಟೀಂ ನಲ್ಲಿ ಸಂತೋಷ್ ಬಳ್ಳೇಕೆರೆ ಮತ್ತು ಮೋಹನ್ ಬಾಳೇ ಕಾಯಿ ಗೆದ್ದಿದ್ದೇವೆ.

ಸುದ್ದಿಗೋಷ್ಠಿಯಲ್ಲಿ ಸಂಘದ ನೂತನ ನಿರ್ದೇಶಕರಾದ ಎನ್ .ಜೆ ರಾಜಶೇಖರ್,ಟಿ.ಬಿ ಜಗದೀಶ್, ಸಂತೋಷ್ ಬಳ್ಳೇಕೆರೆ, ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button