ಸ್ಥಳೀಯ ಸುದ್ದಿಗಳು

ಹಿಂದೂಮಹಾಸಭಾ ಗಣಪತಿಯ ರಾಜಬೀದಿ ಉತ್ಸವದಲ್ಲಿ ರಾರಾಜಿಸಲಿದೆಯಾ ವೀರ ಸಾವರ್ಕರ್ ಫೊಟೊ?

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿವಮೊಗ್ಗದಲ್ಲಿ ಪ್ರಮುಖ ಗಣಪತಿ ಎಂದರೆ ಒಂದು ಹಿಂದೂ ಮಹಾ ಸಭಾ ಗಣಪತಿ ಮತ್ತು‌ ಓಂ ಗಣಪತಿ. ಈ ಎರಡೂ ಗಣಪತಿಯನ್ನೂ ಸೇರಿದಂತೆ ನಗರದಲ್ಲಿ ಈಗಾಗಲೇ ತಾಲೂಕಿನಲ್ಲಿ 755 ಗಣಪತಿಗಳು ಪ್ರತಿಷ್ಠಾಪನೆಗೊಳ್ಳಲಿದೆ.

ಆದರೆ ಹಿಂದೂ ಮಹಾ ಸಭಾ ಗಣಪತಿಯ ಪ್ರತಿಷ್ಠಾಪನೆ ವೇಳೆ ಮತ್ತು ರಾಜಬೀದಿ ಉತ್ಸವದ ವೇಳೆಯಲ್ಲಿ ವೀರ ಸಾವರ್ಕರ್ ಫೊಟೊ ಮಾತ್ರ ರಾರಾಜಿಸಲಿದೆ ಎಂಬ ಬಲವಾದ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿ ಗಣಪತಿ ಸಮಿತಿಯಲ್ಲಿ ಸಾವರ್ಕರ್ ಫೊಟೊ ಅಳವಡಿಸಲು ಕರೆ ನೀಡಿದ್ದಾರೆ.

ಅದೇ ರೀತಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾನದ  ರಾಜಬೀದಿ ಮೆರವಣಿಗೆಯಲ್ಲಿ ಸಾವರ್ಕರ್ ಫೊಟೊ ಮತ್ತೆ ರಾರಾಜಿಸಲಿದೆ. ಮೆರವಣಿಗೆಯ ಉದ್ದಕ್ಕೂ ಈ ಬಾರಿ ಸಾವರ್ಕರ್ ವಿಜೃಂಭಸಲಿದೆ.ಈ ಎಲ್ಲಾ ವಿಷಯಗಳಿಗೆ ಪುಷ್ಠಿ ನೀಡಲಿದೆ ನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಹಾಗೂ ಹಿಂದೂ ಮಹಾಸಭಾ‌ ಗಣಪತಿ ಪ್ರತಿಷ್ಠಾನದ ಮುಖಂಡ ಚನ್ನಬಸಪ್ಪನವರ ಈ ಹೇಳಿಕೆ.  ನಮಗೆ ಸಾವರ್ಕರ್ ಫೊಟೊ ಅಳವಡಿಸಿ ಎಂಬ ಕರೆ ನೀಡುವುದು ಅವಶ್ಯಕತೆಯೇ ಇಲ್ಲ.

ಬಾಲಗಂಗಾಧರನಾಥ ತಿಲಕ್ ಮತ್ತು ಸಾವರ್ಕರ್ ಈ ದೇಶದ ಸ್ವಾತಂತ್ರ್ಯಕ್ಕಾಗಿ ಗಣಪತಿ ಉತ್ಸವವನ್ನ‌ ಸಾರ್ವಜನಿಕ ಗೊಳಿಸಿ ಜಾಗೃತಿ ಮೂಡಿಸಿದವರು. ಸಾವರ್ಕರ್ ಫೊಟೊ ಅಳವಡಿಕೆಗೆ ಕರೆಯೇ ಬೇಡ ಅದನ್ನ ಹೇಗೆ ರಾರಾಜಿಸಬೇಕು ಎಂಬುದು ಹಿಂದೂ ಮಹಾಸಭಾಗೆ ಗೊತ್ತಿದೆ ಎಂದರು.

ಅದರಂತೆ ಈ ಬಾರಿ ಹಿಂದೂ ಮಹಾಸಭಾ ಗಣಪತಿಯು ಆ.31 ರಂದು ಬೆಳಿಗ್ಗೆ ಪ್ರತಿಷ್ಠಾಪನೆಗೊಳ್ಳಲಿದ್ದು ಸೆಪ್ಟಂಬರ್ 9 ರಂದು ವಿಸರ್ಜನೆ ಗೊಳ್ಳಲಿದೆ.‌ ವಿಸರ್ಜನೆಯ ವೇಳೆ ವಿಜೃಂಭಣೆಯಿಂದ ನಡೆಯಲಿದೆ. ಈ ಬಾರಿಯ ಆಹ್ವಾನ ಪತ್ರಿಕೆಯೂ ಪ್ರಿಂಟ್ ಆಗಿದೆ. ಆಹ್ವಾನ ಪತ್ರಿಕೆಯಲ್ಲಿಯೇ ವೀರ ಸಾವರ್ಕರ್ ಹಿಂದೂ ಸಂಘಟನಾ ಮಹಾಮಂಡಲಿ ಶಿವಮೊಗ್ಗ (ಹಿಂದೂ ಮಹಾಸಭಾ ಅಂಗ ಸಂಸ್ಥೆ) ಎಂದು ಅಚ್ಚು ಹಾಕಿಸಲಾಗಿದೆ.

ಕಳೆದ ಎರಡು ವರ್ಷ ಕೊರೋನದಿಂದ ಯಾವ ವಿಜೃಂಭಣೆ ಇಲ್ಲದೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೊಂಡರೆ ಈ ಬಾರಿಯ 78 ನೇ ಗಣೇಶೋತ್ಸವಕ್ಕೆ ಯಾವ ಅಡಚಣೆ ಇಲ್ಲ. ಆ. 31 ರಂದು ಬೆಳಿಗ್ಗೆ 11 ಗಂಟೆಗೆ ಕೋಟೆಯ ಭೀಮೇಶ್ವರ ದೇವಸ್ಥಾನದಲ್ಲಿ ವರಸಿದ್ದಿ ವಿನಾಯಕ ಸ್ವಾಮಿಪ್ರತಿಷ್ಠಾಪಿಸಲಾಗುವುದು ಅಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸೆ. ೧ ರಂದು ಸಪ್ತಸ್ಬರಗಾನ ಹೊಸನಗರ ಇವರಿಂದ ಸುಗಮ ಸಂಗೀತ, ಸೆ.2 ರಂದು ಕೆಳಕುಂಜಾಲು ನೀಲಾವರರಿಂದ ಯಕ್ಷಗಾನ, ಸೆ. 3 ರಂದು ಎಸ್ಎಸ್ ಶಿವಾನಂದ ಸ್ವಾಮಿ ಇವರಿಂದ ಹರಿಕಥೆ, ಸೆ. ೪ ರಂದು ಸಹಚೇತನ ನಾಟ್ಯಾಲಯ ತಂಡದವರಿಂದ ನಾಟ್ಯ ವೈಭವ, ಸೆ. ೫ ರಂದು ಸ್ವರಾಂಜಲಿ ಭೀಮನಕೋಣೆ ಇವರಿಂದ ಸಂಗೀತ ಸಂಜೆ,

ಸೆ. 6 ರಂದು ಡಾ.ವಿದ್ವಾನ್ ಶ್ರೀ ಎಸ್ ಆರ್ ನಾಗರಾಜ್ ಮತ್ತು ವಿದುಷಿ ಶ್ರೀಮತಿ ವೀಣಾ‌ ನಾಗರಾಜ್ ಇವರಿಂದ ಧ್ವಂಧ್ವ ಹಾಡುಗಾರಿಕೆ, ಸೆ.7 ರಂದು ಕೇಡಲಸರದ ಮಹಾಗಣಪತಿ ವೀರಾಂಜನೇಯ ಕಲಾ ಪ್ರತಿಷ್ಠಾಪನೆ ಇವರಿಙದ ಯಕ್ಷಗಾನ, ಸೆ.8 ರಂದು ವೀರ ಶಿವಮೂರ್ತಿಯ ಪುಣ್ಯ ಸ್ಮರಣೆ ಹಾಗೂ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಸೆ. 9 ರಂದು ಬೆಳಿಗ್ಗೆ 9-30 ಕ್ಕೆ ಗಣಪತಿಯ ರಾಜಬೀದಿ ಉತ್ಸವ ನಡೆಯಲಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button