ಮನೋರಂಜನೆ

ಮತ್ತೂರಿನಲ್ಲಿ ಎಡಿಜಿಪಿ ಸಂಸ್ಕೃತ ಭಾಷೆಯಲ್ಲಿ ಸಂಭಾಷಣೆ ನಡೆಸಿದ ವಿಡಿಯೋಗೆ ನೆಟ್ಟಿಗರು ಫುಲ್ ಖುಷ್

ಸುದ್ದಿಲೈವ್. ಕಾಂ/ಶಿವಮೊಗ್ಗ

ಫ್ಲೆಕ್ಸ್ ವಿಚಾರದಲ್ಲಿ ಶಿವಮೊಗ್ಗದಲ್ಲಿ ಉದ್ಭವಿಸಿದ ಕೋಮು ಸಂಘರ್ಷದ ವಿಚಾರವಾಗಿ ಬಂದೋ ಬಸ್ತ್ ನ ತಪಾಸಣೆಗಾಗಿ ಬಂದಿದ್ದ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಟ್ವಿಟರ್ ನಲ್ಲಿ ಒಂದು ವಿಡಿಯೋ ಹರಿಬಿಟ್ಟಿದ್ದಾರೆ.

ಶಿವಮೊಗ್ಗ ತಾಲೂಕು ಮತ್ತೂರಿಗೆ ಭೇಟಿ ನೀಡಿ ಅಲ್ಲಿನ ವಿಪ್ರೋತ್ತಮರನ್ನ ಭೇಟಿ ಮಾಡಿ ಸಂಸ್ಕೃತದಲ್ಲಿ ಮೂರು ನಾಲ್ಕು ವಾಕ್ಯದಲ್ಲಿ ಸಂಸ್ಕೃತ ಮಾತನಾಡಿರುವ ವಿಡಿಯೋ ಒಂದು ಹರಿ ಬಿಟ್ಟಿದ್ದಾರೆ. ಅವರ ವಿಡಿಯೋ ಈಗ ವೈರಲ್ ಆಗಿದೆ.

ಎಡಿಜಿಪಿ ಶಿವಮೊಗ್ಗದಲ್ಲಿ ಭೇಟಿ ನೀಡಿದಾಗ ಭಾರತದ ಸಂಸ್ಕೃತದ ಗ್ರಾಮವೆಂದು ಹೆಸರುವಾಸಿಯಾಗಿರುವ ಮತ್ತೂರಿಗೆ ಭೇಟಿ ನೀಡಿದ್ದೆ. ಸಂಸ್ಕೃತ ಶಾಸ್ತ್ರೀಯ ಭಾಷೆ ಹಾಗೂ ಕೇಳಲು ಇಂಪಾದ ಭಾಷೆಯಾಗಿದೆ. ಅಲ್ಲಿನ ಸಂಸ್ಕೃತ ಬಲ್ಲ ಜನರೊಂದಿಗೆ ಸಂಸ್ಕೃತದಲ್ಲಿಯೇ ಸಂಭಾಷಣೆ ನಡೆಸಿದ್ದೇನೆ. ಇದನ್ನ ಸಂರಕ್ಷಿಸಿ ಬೆಳೆಸಬೇಕೆಂದು ಕೋರಿದ್ದಾರೆ.

ಸಂಸ್ಕೃತದಲ್ಲಿ ಸಂಭಾಷಣೆ ನಡೆಸಿದ ವಿಡಿಯೋ 50.1k ವೀವ್ಸ್ ಆಗಿದೆ. 709 ರೀಟ್ವೀಟ್ ಆಗಿದೆ. 4266 ಜನ ಲೈಕ್ಸ್ ಮಾಡಿದ್ದಾರೆ. ಮಧುಕರ ಮತ್ತೂರು ಎಂಬುವರು ನೀವು ಬರುವುದನ್ನ ತಿಳಿಸಿದ್ದರೆ ನಾವು ಮತ್ತೂರು ಗ್ರಾಮದ ಸಮಿತಿಯಿಂದ ಸ್ವಾಗತ ಮಾಡುತ್ತಿದ್ದೆವು ಎಂದು ಅವರ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

ಹೀಗೆ ಹಲವಾರು ಜನ ಅವರ ಸಂಸ್ಕೃತ ಸಂಭಾಷಣೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ಎಡಿಜಿಪಿಯ ವಿಡಿಯೋಗೆ ನೆಟ್ಟಿಗರು ಸಕ್ಕತ್ ಖುಷಿಯಾಗಿ ಸ್ವಾಗತಿಸಿದ್ದಾರೆ.‌

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button