ಕ್ರೈಂ

ಮನೆ ಕಳ್ಳತನದ ಎರಡು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಪತ್ತೆ-5 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ

ಸುದ್ದಿಲೈವ್. ಕಾಂ/ಭದ್ರಾವತಿ

2021 ರಲ್ಲಿ ಭದ್ರಾವತಿಯ ಭೂತನಗುಡಿಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿದ ಹಳೇನಗರ ಪೊಲೀಸರು 5,89,500 ರೂ. ಮೌಲ್ಯದ 131 ಗ್ರಾಂ ಚಿನ್ನಾಭರಣವನ್ನ ವಶಪಡಿಸಿಕೊಳ್ಳಲಾಗಿದೆ.

ದಿನಾಂಕಃ-11-01-2021 ರಂದು ಬೆಳಗ್ಗೆ ಭೂತನಗುಡಿ ವಾಸಿಯ ಪರಶುರಾಮ್ ಎಂಬುವರ ಮನೆಗೆ  ಬಾಗಿಲಿನ ಬೀಗವನ್ನು ಹಾಕಿ, ಬೀಗದ ಕೀ ಅನ್ನು ತುಳಸಿ ಕಟ್ಟೆಯ ಹತ್ತಿರ ಇಟ್ಟು ಮಾವನವರ ಶವಸಂಸ್ಕಾರಕ್ಕೆ ಹೋದ ವೇಳೆ ಮನೆ ಕಳ್ಳತನವಾಗಿತ್ತು.

ಬೀಗದ ಕೀ ಅನ್ನು ತೆಗೆದುಕೊಂಡು ಬಾಗಿಲಿಗೆ ಹಾಕಿದ್ದ ಬೀಗವನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ ಬೀರುವಿನಲ್ಲಿ ಇಟ್ಟಿದ್ದ ಒಟ್ಟು 10,40,300/- ಬಂಗಾರದ ಆಭರಣಗಳು, ನಗದು ಹಣ ಮತ್ತು ಮೊಬೈಲ್‌ ಫೋನ್‌ ಅನ್ನು ಕಳ್ಳತನವಾಗಿತ್ತು. ಪುರುಷೋತ್ತಮ ಈ ಬಗ್ಗೆ ಹಳೆನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಸಿಪಿಐ ಭದ್ರಾವತಿ ನಗರ ವೃತ್ತ ಮತ್ತು ಪಿಎಸ್ಐ ಹೊಸಮನೆ ಪೊಲೀಸ್‌ ಠಾಣೆ ಹಾಗೂ ಸಿಬ್ಬಂದಿಗಳ ತಂಡವು  ಪ್ರಕರಣದ ತನಿಖೆ ಕೈಗೊಂಡು ಇಂದು ಹೊಸಮನೆ ನಿವಾಸಿ ಆರೋಪಿ ವಸಂತರಾಜುನ್ನ (37) ದಸ್ತಗಿರಿ ಮಾಡಿ ಈತನಿಂದ ಹೊಸಮನೆ ಪೊಲೀಸ್‌ ಠಾಣೆಯ 01 ಪ್ರಕರಣ ಮತ್ತು ಭದ್ರಾವತಿ ಹಳೆನಗರ ಪೊಲೀಸ್‌ ಠಾಣೆಯ 01 ಪ್ರಕರಣ ಸೇರಿದಂತೆ ಒಟ್ಟು 02 ಮನೆಗಳ್ಳತನ ಪ್ರರಕಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಇದರಿಂದ ಅಂದಾಜು ಮೌಲ್ಯ 5,89,500/- ರೂ ಮೌಲ್ಯದ 131 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button