ರಾಜ್ಯ

ಜಬಿ ಎಸ್ ಡಿ ಪಿಐ/ಪಿಎಫ್ಐ ನಲ್ಲಿ ಭಾಗಿಯಾಗಿರುವ ಫೊಟೊ ವೈರಲ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಪ್ರೇಮ್ ಸಿಂಗ್ ಪ್ರಕರಣದಲ್ಲಿ ಮೊಹ್ಮದ್ ಜಬಿ ಅಮಾಯಕ ಎಂದು ಎದ್ದಿರುವ ವಿವಾದದ ಬೆನ್ನಲ್ಲೇ ಫೊಟೊವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ಜಬಿ ಪಿಎಫ್ಐ/ಎಸ್ ಡಿ ಪಿ ಐ ನಲ್ಲಿ ಭಾಗಿಯಾಗಿರುವ ಫೊಟೊ ವೊಂದನ್ನ ಹರಿಬಿಡಲಾಗಿದೆ.

ಪ್ರೇಮ್ ಸಿಂಗ ಪ್ರಕರಣ ದ ಪ್ರಮುಖ ಆರೋಪಿಯಾದ ಮೊಹ್ಮದ್ ಜಬಿ PFI/SDPI ಕಾರ್ಯಕರ್ತ.ಈತ PFI/SDPI ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗ ವಹಿಸಿರುವ ಪೋಟೊ ಈಗ ವೈರಲ್ ಆಗಿದೆ.

ಜಭಿಯ ಪತ್ನಿ ತನ್ನ ಪತಿ ಯಾವುದೇ ಸಂಘಟನೆಯೊಂದಿಗೆ ನಂಟು ಇಲ್ಲ ಅಂತ ಹೇಳಿರುವ ಬೆನ್ನಲ್ಲೇ ಈ ಫೊಟೊವೊಂದು ವೈರಲ್ ಆಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಶಿವಮೊಗ್ಗ ಪೊಲೀಸ್ ರ ತನಿಖೆಯ ದಿಕ್ಕು ತಪ್ಪಿಸವ ಹುನ್ನಾರ ಇದರಲ್ಲಿ ಅಡಕವಾಗಿದೆಯಾ ಎಂಬ ಆರೋಪವೂ ಸಹ ಕೇಳಿ ಬರುತ್ತಿದೆ.

ಪ್ರೇಮಸಿಂಗ್ ಘಟನೆ ಆದ ನಂತರ ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದು ಇದರಿಂದ ಬಡ ಜನತೆಗೆ ಜೀವನ ಕಷ್ಟಸಾಧ್ಯ ಆಗಿರುತ್ತದೆ
ಸಾರ್ವಜನಿಕರ ಹಿತಾಸಕ್ತಿಯಲ್ಲಿ ನೊಂದ ಶಿವಮೊಗ್ಗ ಜನತೆ ಹೀಗೊಂದು ಫೋಟೊ ವೈರಲ್ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಚರ್ಚೆಗೆ ಗ್ರಾಸವಾಗುತ್ತಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button