ಕ್ರೈಂ

ಮೊಹ್ಮದ್ ಜಬಿಗೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವುದು ರಾಜಕೀಯ ಪ್ರೇರಿತ

ಸುದ್ದಿಲೈವ್. ಕಾಂ/ಶಿವಮೊಗ್ಗ

ಬಜಾರ್ ನಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿದ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹ್ಮದ್ ಜಬೀ ಯಾನೆ ಚರ್ಬಿಗೆ ಪೊಲೀಸರು ನಕಲಿ ಗುಂಡು ಹಾರಿಸಿ ಬಂಧಿಸಿದ್ದಾರೆಎಂದು ಆತನ ಕುಟುಂಬ ಆರೋಪಿಸಿದೆ.

ಜಬೀವುಲ್ಲಾ ಚಾಕು ಚುಚ್ಚಿರುವ ವಿಡಿಯೋಗಳು ಫೊಟೊಗಳನ್ನ ಸಾರ್ವಜನಿಕರಿಗೆ ಬಿಡುಗಡೆ ಮಾಡಿ ನಂತರ ಗುಂಡು ಹಾರಿಸ ಬಹುದಿತ್ತು. ಅದನ್ನ ಬಿಟ್ಟು ಮನೆಯಲ್ಲಿ ಊಟ ಮಾಡುತ್ತಿರುವ ಜಬಿ ನನ್ನ ವಿಚಾರಣೆಗೆ ಕರೆದುಕೊಂಡು ಹೋಗಿ ಕಾಲಿಗೆ ಗುಂಡೇಟು ಹೊಡೆಯಲಾಗಿದೆ. ಇದು ರಾಜಕೀಯ ದುರುದ್ದೇಶವಾಗಿದೆ ಎಂದು ಕುಟುಂಬ ಶಬನಾ ಬಾನು ಕೋಂ ಜಬಿ ಆರೋಪಿಸಿದ್ದಾರೆ.

ಐದು ಜನ ವಿಚಾರಣೆಇದೆಬನ್ನಿ ಎಂದು ಜೆಸಿ ನಗರದ ನಿವಾಸಿ ಜಬಿಯ ಮನೆಗೆ ಬಂದ ಪೊಲೀಸರು ಕರೆದುಕೊಂಡು ಹೀಗಿದ್ದಾರೆ. ಇದು ದಾಖಲಾತಿಗಳಿವೆ. ಚಾಕು ಚುಚ್ಚಿದ್ದರೆ ಊರುಬಿಡುತ್ತಿದ್ದ. ಪೊಲೀಸರು ಕಾಲಿಗೆ ಗುಂಡೇಟು ಹೊಡೆದಿದ್ದಾರೆ ಎಂದು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ.

ಮುಸ್ಲೀಂ ಜನ ಆತಂಕಕ್ಕೆ ಒಳಗಾಗಿದ್ದಾರೆ. ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಕುತಂತ್ರ ರೂಪಿಸಿದೆ. ಹಿಂದೂ ಸಂಘಟನೆಯ ಧೀನ್ ದಯಾಳು ಸಾವರ್ಕರ್ ಫೊಟೊ ತಂದು ಇಡುತ್ತಾರೆ ಆದರೆ ಎಫ್ಐಆರ್ ಆಗಲ್ಲ.

ಸಾವರ್ಕರ್ ಫೊಟೊ ಬೇಡ ಎಂದರೆ ಎಫ್ಐಆರ್ ಆಗುತ್ತದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನ ಅಧಿಕಾರಿಗಳು ಮುಟ್ಟಿದರೆ ವರ್ಗಾವಣೆ ಆಗ್ತಾರೆ. ಪ್ರಶ್ನೆ ಮಾಡುವವರು ಜೈಲು ಪಾಲು ಆಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button