ಕ್ರೈಂ

ಬೈಪಾಸ್ ಬಳಿ ರಸ್ತೆ ಅಪಘಾತ-ಬೈಕ್ ನ ಹಿಂಬದಿಯ ಮಹಿಳ ಸವಾರರು ಸ್ಥಳದಲ್ಲೇ ಸಾವು-ಸಿಸಿ ಟಿವಿಯಲ್ಲಿ ಅಪಘಾತದ ದೃಶ್ಯ ಸೆರೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ  ಹಿಂಬದಿ ಕುಳಿತಿದ್ದ ಮಹಿಳಾ ಸವಾರರು ಕೆಳಗೆ ಬಿದ್ದಿದ್ದಾರೆ. ಕೆಳಗೆ ಬಿದ್ದ ಮಹಿಳೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದ್ದು ಮಹಿಳಾ ಸವಾರರು ಸ್ಥಳದಲ್ಲಿ ಸಾವುಕಂಡಿರುವ ಘಟನೆ ಇಂದು ಬೆಳಿಗ್ಗೆ 9-30 ರ ಸಮಯದಲ್ಲಿ ನಡೆದಿದೆ.

ಬೈಪಾಸ್ ನ ಯಮಹಾ ಶೋರೂಂ ಎದುರು ಪತಿ ಸಯ್ಯದ್ ಸೈಫುಲ್ಲಾ ಮತ್ತು ಪತ್ನಿ ಸಂಜಿದಾ ಬೈಪಾಸ್ ನಿವಾಸಿಯಾಗಿದ್ದು, ಬೈಪಾಸ್ ನಿಂದ ಬಸ್ ನಿಲ್ದಾಣಕ್ಕೆ ಹೋಗುವಾಗ ಹಿಂಬದಿಯಿಂದ ಬಂದ ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆಯುತ್ತಿದ್ದಂತೆ ಮಹಿಳೆ ಸಂಜಿದಾ ಕೆಳಗೆ ಬಿದ್ದಿದ್ದಾರೆ. ಮಹಿಳೆಯ ಮೇಲೆ ಲಾರಿಯ ಹಿಂಬದಿ ಚಕ್ರ ಹರಿದಿದೆ. ಸಂಜಿದಾರವರು ಸ್ಥಳದಲ್ಲಿ ಸಾವುಕಂಡಿದ್ದಾರೆ.

ಅಪಘಾತ ಪಡಿಸಿದ ಲಾರಿಯ ನಂಬರ್ ಪ್ಲೇಟ್ ಸಹ ಅಳಿಸಲಾಗಿದೆ. ಎರಡೂ ಬದಿ ಲಾರಿಯ ನಂಬರ್ ಪ್ಲೇಟ್ ನ್ನ ಅಳಿಸಲಾಗಿದೆ. ಈ ಘಟನೆ ಶೋರೂಮ್ ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button