ಕ್ರೈಂ

10 ರಿಂದ 15 ಜನ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಸುದ್ದಿಲೈವ್. ಕಾಂ/ಶಿವಮೊಗ್ಗ

ಎರಡು ಮೂರು ದಿನಗಳಿಂದ ನಡೆಯುತ್ತಿರುವ ಭಾವಚಿತ್ರಗಳ ನಡುವಿನ ಬಡಿದಾಟದಲ್ಲಿ ಶಿವಮೊಗ್ಗ ನಗರ ಅಕ್ಷರಶಃ ನಲುಗಿದೆ. ಇದೇ ಮಾಲ್ ಎದುರು ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಾಲ್ ನಲ್ಲಿ ಭರ್ಮಪ್ಪ ನಗರದ ನಿವಾಸಿ ಝಾಕಿರ್ ಹುಸೇನ್ ಎಂಬುವರ ತಂಗಿಯ ಮಗ 17 ವರ್ಷದ ಬಾಲಕ ಮಾಲ್ ಗೆ ತೆರಳಿದಾಗ ಘೋಷಣೆ ಕೂಗಲಾಗಿದೆ. ಘೋಷಣೆಯನ್ನ ಕಂಡು ಹೆದರಿಕೊಂಡು ಮನೆಗೆ ತೆರಳಲು ಮುಂದಾಗುತ್ತಾನೆ. ಕೇಸರಿ ಧ್ವಜ ಹಿಡಿದುಕೊಂಡು ಬಂದ ಕೇಸರಿ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ.

17 ವರ್ಷದ ಯುವಕನ ಕುತ್ತಿಗೆ, ಎದೆ ಮತ್ತು ಪಕ್ಕೆಯ ಮೇಲೆ ಹಲ್ಲೆ ನಡೆಸಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಮುಂದೆ ಬಂದು ಯುವಕನನ್ನ ರಕ್ಷಿಸಿ ನಂತರ ಪೊಲೀಸರಿಗೆ ಒಪ್ಪಿಸಿರುತ್ತಾರೆ. ಈ ಬಗ್ಗೆ ಝಾಕಿರ್ ಹುಸೇನ್ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 10-15 ಜನರ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐ ಆರ್ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button