ರಾಜಕೀಯ

ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಿರುವುದು ಯೋಗಿ ಮಾದರಿಯ ಸರ್ಕಾರದ ಆರಂಭ-ಈಶ್ವರಪ್ಪ

ಸುದ್ದಿಲೈವ್.ಕಾಂ/ಭದ್ರಾವತಿ

ಇಂದು ಬೆಳಿಗ್ಗೆ ಫೈರಿಂಗ್ ಮಾಡಿ ಪ್ರೇಮ್ ಸಿಂಗ್ ಯುವಕನಿಗೆ ಚೂರಿ ಚುಚ್ಚಿರುವ ಆರೋಪಿಯನ್ನ ಹಿಡಿದಿರುವುದು ಯೋಗಿ ಮಾದರಿ ಸರ್ಕಾರ ಆರಂಭವೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭದ್ರಾವತಿಯಲ್ಲಿ ಗುಡುಗಿದ್ದಾರೆ.

ಭದ್ರಾವತಿಯಲ್ಲಿ ಹಲ್ಲೆಗೊಳಗಾದ ಬಜರಂಗದಳದ ಕಾರ್ಯಕರ್ತ ಸುನೀಲ್ ನ ಆರೋಗ್ಯ ವಿಚಾರಿಸಲು ಸರ್ಕಾರಿ ಆಸ್ಪತ್ರೆಗೆ ಭೇಟಿ ಮಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಇದು ಯೋಗಿ ಸರ್ಕಾರದ ಮಾದರಿಯ ಆರಂಭವಾಗಿದೆ. ಹಂತ ಹಂತವಾಗಿ ರಾಜ್ಯದಲ್ಲಿ ಯೋಗಿ ಮಾದರಿಯ ಸರ್ಕಾರವೇ ಜಾರಿಯಾಗಲಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಸ್ಲೀಂ ಇರುವ ಜಾಗದಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಿರುವುದುತಪ್ಪು ಅಂತಾರೆ ಅವರು ದೇಶ ಭಕ್ತರಲ್ಲ ದೇಶ ದ್ರೋಹಿಗಳು, ಭಾವೈಕ್ಯತೆಯನ್ನ ಹಾಳು ಮಾಡುವ ಹೇಳಿಕೆ ನೀಡಿರುವ ಅವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಲ್ ನಲ್ಲಿ ಸಾವರ್ಕರ್ ಫೊಟೊ ತೆಗೆಯುವಂತೆ ಆಗ್ರಹಿಸಿ ಬಂಧನಕ್ಕೊಳಗಾದ ಆಸಿಫ್ ಗೂ ಮತ್ತು ಕಾಂಗ್ರೆಸ್ ಗೆ ಏನು ಸಂಬಂಧ? ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಆದರೆ ಆಸಿಫ್ ಪತ್ನಿ ಪಾಲಿಕೆ ಸದಸ್ಯೆ ಇದಕ್ಕಿಂತ ಸಂಬಂಧ ಬೇಕ? ಎಂದು ಪ್ರಶ್ನಿಸಿದ ಈಶ್ವರಪ್ಪ, ಡಿಕೆಶಿ ಮತ್ತು ಸಿದ್ದರಾಮಯ್ಯ ಕೆಂಪೇಗೌಡ ಮತ್ತು ಸಂಗೊಳ್ಳಿ ರಾಯಣ್ಣನ ಮೇಲೆ ರಾಜಕೀಯ ಮಾಡಲು ಹೊರಟಿದ್ದಾರೆ.

ಮೊದಲು ದೇಶಕ್ಕಾಗಿ ಹೋರಾಡಿದ ಮತ್ತು ದೇಶ ಕಟ್ಟಿದ ವೀರರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನ ನಿಲ್ಲಿಸಬೇಕೆಂದು ಕರೆ ನೀಡಿದರು.

ಸುನೀಲ್ ಮೇಲೆ ಹಲ್ಲೆ ರಾಜಕೀಯ ಪ್ರೇರಣೆ ಇದೆ. ಇದನ್ನ ಪೊಲೀಸರು ತನಿಖೆಯಿಂದ ಹೊರ ತೆಗೆಯುತ್ತಾರೆ. ಮುಸ್ಲೀಂ ಮುಖಂಡರೇ ಅವರ ಯುವಕರಿಗೆ ಬುದ್ದಿ ಹೇಳಬೇಕು. ಇಲ್ಲ ಅಂದರೆ ಹಿಂದೂ ಸಮಾಜಕ್ಕೆ ಬುದ್ದಿ ಹೇಳಲು ಬರುತ್ತದೆ. ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂಬ ಕಾರಣಕ್ಕೆ ಸಮಾಜ ಕೈಕಟ್ಟಿಕುಳಿತಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button