ಕ್ರೈಂ

ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಹಲ್ಲೆ

ಸುದ್ದಿಲೈವ್.ಕಾಂ/ಭದ್ರಾವತಿ

ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಾಗಿದ್ದರೂ ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನನ್ನ ಅಡ್ಡಕಟ್ಟಿ ಹಲ್ಲೆ ನಡೆಸಲಾಗಿದೆ.

ಸುನೀಲ್ ಎಂಬ ಬಜರಂಗದಳದ ಯುವಕನ‌ಮೇಲೆ ಮುಬಾರಕ್ ಯಾನೆ ಡಿಚ್ಚಿ ಎಂಬಾತ ನೆಹರೂ ನಗರದಲ್ಲಿ ಅಡ್ಡಕಟ್ಟಿ ದಾಳಿ ನಡೆಸಿದ್ದಾನೆ.

ನಿನ್ನೆ ಓರ್ವ ಯುವಕನನ್ನ ಡಿಚ್ಚಿ ಮುಬಾರಕ್ ಹಲ್ಲೆ ನಡೆಸುವ ವೇಳೆ ಸುನೀಲ್ ಮತ್ತು ಸಹಚರರು ಜಗಳ ಬಿಡಿಸಿದ್ದರು. ಈ ವೇಳೆ ಸುನೀಲ್ ನಿಗೆ ಟಾರ್ಗೆಟ್ ಮಾಡಿದ ಮುಬಾರಕ್ ಚಾಕುವಿನಿಂದ ಹಲ್ಲೆ ನಡೆಸಲು ಉತ್ನಿಸಿದ್ದಾನೆ.

ನೆಹರೂ ನಗರದ ಮನೆಯ ಮುಂದೆ ಗಾರೆಕೆಲಸಕ್ಕೆಂದು ಸುನೀಲ್ ನಡೆದುಹೋಗುವಾಗ ರಸ್ತೆ ಅಡ್ಡಕಟ್ಟಿ ಹಲ್ಲೆ ನಡೆಸಿದ್ದಾನೆ. ಸುನೀಲನ ಎಡ ಗೈ, ಭುಜ ಮತ್ತು ತಲೆಗೆ ಕೈಯಿಂದ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button