ಸುದ್ದಿ

ನಿನ್ನೆಯ ಮೊನ್ನೆಯ ವರೆಗೆ ಕ್ರಿಕೆಟ್ ಆಡುವರ ಕೈಯಲ್ಲಿ ಮಾರಕಾಸ್ತ್ರ-ಆತಂಕ ವ್ಯಕ್ತಪಡಿಸಿದ ವಿಜೇಂದ್ರ

ಸುದ್ದಿಲೈವ್. ಕಾಂ/ಶಿವಮೊಗ್ಗ

ಪ್ರೇಮ್ ಸಿಂಗ್ ಗೆ ಚಾಕು ಚುಚ್ಚಿದಾಗ ಅವರ ಬೈಕ್ ನಲ್ಲಿ ಬಂದು ಮೆಗ್ಗಾನ್ ದಾಖಲಾಗಿರುವ ವಿಚಾರವನ್ಙ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜೇಂದ್ರ ಮಾಧ್ಯಮಗಳಿಗೆ ಹೇಳಿದ್ದಾರೆ.

ಮೆಗ್ಗಾನ್ ನಲ್ಲಿ ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ವಿಜೇಂದ್ರ ನಂತರ ಮಾತನಾಡಿ ಪ್ರೇಮ್ ಸಿಂಗ್ 10 ನಿಮಿಷ ತಡವಾಗಿ ಅಸ್ಪತ್ರೆ ಗೆ ದಾಖಲಿದ್ದರೂ ಸಹ ಆತನ ಜೀವ ಹೋಗುತ್ತಿತ್ತು. ವೈದ್ಯರ ಶ್ರಮದಿಂದ ಪ್ರೇಮ್ ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ 8 ರಿಂದ 10 ದಿನ ಮೆಗ್ಗಾನ್ ನಲ್ಲಿ ಅವರು ಅಬ್ಸರವೇಷನ್ ನಲ್ಲಿರಬೇಕಿದೆ ಎಂದು ತಿಳಿಸಿದರು.

ಪದೇ ಪದೇ ಗಲಭೆ

ಯಾರೂ ಏನು ಬೇಕಾದರೂ ಮಾಡಬಹುದು ಎಂಬ ಮನಸ್ಥಿತಿಗೆ ಬಂದ ಹಿನ್ನಲೆಯಲ್ಲಿ ಈ ಘಟನೆಗಳು ಪದೇ ಪದೇ ಸಂಭವಿಸುತ್ತಿದೆ. ನಿನ್ನೆ ಮೊನ್ನೆಯ ವರೆಗೆ ಕ್ರಿಕೆಟ್ ಆಡುತ್ತಿರುವ ಹುಡುಗರು ಚಾಕು ಚೂರಿ ಹಿಡಿದುಕೊಂಡು ಓಡಾಡುತ್ತಿರುವುದು ಅತಂಕಕಾರಿ ವಿಷಯವಾಗಿದೆ ಎಂದರು.

ಈಗಾಗಲೇ ನಮ್ಮ ನಾಯಕರಾದ ಈಶ್ವರಪ್ಪ, ರುದ್ರೇಗೌಡರು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಶಿವಮೊಗ್ಗದ ಪೊಲೀಸ್ ವ್ಯವಸ್ಥೆ ಸರಿಪಡಿಸಬೇಕಿದೆ ಎಂದು ತಿಳಿಸಿದರು.

ಮತೀಯ ಸಂಘಟನೆಗಳ ಕೈವಾಡವಿದೆಯಾ ಎಂಬ ಪತ್ರಕರ್ತರ ಪ್ರಶ್ನೆಯ ಬಗ್ಗೆ ಉತ್ತರಿಸಿದ ವಿಜೇಂದ್ರ ಮತೀಯ ಸಂಘಟನೆಗಳ ಕೈವಾಡವಿರುವುದು ಒಪನ್ ಸೀಕ್ರೆಟ್ ಆಗಿದೆ. ಉವೆಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ವಿಜೇಂದ್ರ ತಿಳಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button