ಕ್ರೈಂ

ಐಜಿ ತ್ಯಾಗರಾಜನ್ ಸಿಟಿ ರೌಂಡ್ಸ್-ದ್ವಿಚಕ್ರವಾಹನ ಸವಾರ ತಪಾಸಣೆ

IMG_20220816_085426ಸುದ್ದಿಲೈವ್. ಕಾಂ/ಶಿವಮೊಗ್ಗ

ನಗರದಲ್ಲಿ ಐಜಿಪಿ ತ್ಯಾಗರಾಜನ್ ಬೆಳ್ಳಂಬೆಳಿಗ್ಗೆ ರೌಂಡ್ಸ್ ಹೊಡೆದಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ರೌಂಡ್ಸ್ ಹೊಡೆದಿರುವ ಅವರು ಪ್ರಮುಖ ರಸ್ತೆಯಲ್ಲಿರುವ ಪಾಯಿಂಟ್ ಗಳಲ್ಲಿ ಪೊಲೀಸ್ ಕೆಎಸ್ ಆರ್ ಪಿ ತುಕಡಿಗಳ ಬಂದೋಬಸ್ತ್ ವಿಚಾರಿಸಿದ್ದಾರೆ.

ಎನ್ ಟಿ ರಸ್ತೆ, ನ್ಯೂ ಮಂಡ್ಲಿ ವೃತ್ತ, ಬೈಪಾಸ್, ಊರುಗಡೂರು ಮತ್ತು ಸವಾಯಿ ಪಾಳ್ಯ, ಸೀಗೆಹಟ್ಟಿಯಲ್ಲಿ ರೌಂಡ್ಸ್ ಹೊಡೆದಿದ್ದಾರೆ ಎನ್.ಟಿ ರಸ್ತೆ, ಊರುಗಡೂರು ತಿರುವು ಬಳಿ ಕೆಎಸ್ ಆರ್ ಪಿ ತುಕಡಿಗಳನ್ನ ನಿಯೋಜಿಸಿದ್ದು ಐಜಿಪಿ ಬಂದೋಬಸ್ತ್ ವಿಚಾರಿಸಿದ್ದಾರೆ.

ನಗರದಲ್ಲಿ ನಿನ್ನೆ ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಾಟೆ ಹಿನ್ಬಲೆಯಲ್ಲಿ ಪ್ರೇಮ್ ಸಿಂಗ್ ಗೆ ಚಾಕು ಇರಿಯಲಾಗಿದೆ. ಕೆಲ ಮೂಲಗಳ ಪ್ರಕಾರ ಪ್ರೇಮ್ ಸಿಂಗ್ ಗುರಾಯಿಸಿದ್ದಾನೆ ಎಂಬ ಕಾರಣಕ್ಕೆ ಜಬಿ ಯಾನೆ ಚರ್ಬಿ, ಅಬ್ದುಲ್ ರೆಹಮಾನ್ ಮತ್ತು ನದೀಮ್ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

ಅಬ್ದುಲ್ ರೆಹಮಾನ್ ಮತ್ತು ನದೀಮ್ ನನ್ನ ಪೊಲೀಸರು ಬಂಧಿಸಿದ್ದರು. ಇಂದು ಬೆಳಗ್ಗಿನ ಜಾವ ಜಬಿ ಯಾನೆ ಚರ್ಬಿಯನ್ನ ಬಂಧಿಸುವ ವೇಳೆ ದಾಳಿ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ ಕಾರಣ ಗುಂಡೇಟು ಹೊಡೆಯಲಾಗಿದೆ.IMG_20220816_075847

ಡಬ್ಬಲ್ ರೈಡಿಂಗ್ ಗೆ ನಿರ್ಬಂಧ

ಸೆಕ್ಷನ್ 144 ಹಿನ್ನಲೆಯಲ್ಲಿ ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನದ ಅಡಿ ದ್ವಿಚಕ್ರ ವಾಹನವನ್ನ ತಪಾಸಣೆ ನಡೆಸಲಾಗುತ್ತಿದೆ. 40 ವರ್ಷದ ಯುವಕರ ಮೇಲೆ  ನಿಗಾ ಇಡಲಾಗಿದೆ. ಡಬ್ಬಲ್ ರೈಡಿಂಗ್ ಗೂ ನಿರ್ಬಂಧಿಸಲಾಗಿದೆ. ಎಎ ವೃತ್ತದ ಬಳಿ ತಪಾಸಣೆ ನಡೆಸಲಾಗುತ್ತಿದೆ.

ಬಸ್ ನಿಲ್ದಾಣದ ಬಳಿ ಜಿಲ್ಲಾ ಹೆಚ್ಚುವರಿ ರಕ್ಷಣ ಅಧಿಕಾರಿ ವಿಕಮ್ ಅಮಾಟೆ ಮೊಕ್ಕಾಂ ಹೂಡಿದ್ದಾರೆ. ಬಸ್ ನಿಲ್ದಾಣದಿಂದಲೇ ವಾಹನ ಸವಾರರ ಸಂಚಾರವನ್ನ ನಿರ್ಬಂಧಿಸಲಾಗುತ್ತಿದೆ. 

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button