ಕ್ರೈಂ

ಚರ್ಬಿಯ ದಾಳಿಯಲ್ಲಿ ಗಾಯಗೊಂಡ ಪಿಎಸ್ಐ ಮಂಜುನಾಥ್ ಕುರಿ-ಗುರುವಾರದ ವರೆಗೆ ಸೆಕ್ಷನ್ 144 ಜಾರಿ

IMG-20220816-WA0013
ಮಂಜುನಾಥ್ ಕುರಿ

ಸುದ್ದಿಲೈವ್.ಕಾಂ/ಶಿವಮೊಗ್ಗ

ಇಂದು ಬೆಳಗ್ಗಿನ ಜಾವ ಬೆಳಿಗ್ಗೆ 2-30 ನಡೆದ ಜುಬಿ ಯಾನೆ ಚರ್ಬಿಗೆ ಹೊಡೆದ ಗುಂಡೇಟು ನಡೆದಿದೆ. ಗುಂಡೇಟು ಹೊಡೆಯುವ ಮುಂಚೆ ಜಬಿ ಪೊಲೀಸರ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ ವಿನೋಬ ನಗರ ಪಿಎಸ್ಐ ಮಂಜುನಾಥ್ ಕುರಿ ಅವರಿಗೂ ಗಾಯಗಳಾಗಿವೆ. ಅವರನ್ನೂ ಮೆಗ್ಗಾನ್ ಗೆ ದಾಖಲಿಸಲಾಗಿದೆ.

ಇಂದು ಬೆಳಗ್ಗಿನ ಜಾವ ನಡೆದ‌ಗುಂಡೇಟು ಫಲಕ್ ಪ್ಯಾಲೇಸ್ ಬಳಿ ಜುಬಿ ಇದ್ದಾನೆ ಎಂಬ ಮಾಹಿತಿ ಹಿನ್ನಲೆಯಲ್ಲಿ ವಿನೋಬ ನಗರ ಪಿಎಸ್ಐ ಮಂಜುನಾಥ್ ಕುರಿ ತೆರಳಿದ್ದರು. ಬಂಧಿಸುವ ವೇಳೆ ಆರೋಪಿ ಜುಬಿ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದನು. ಈ ಹಿನ್ನಲೆಯಲ್ಲಿ ಪಿಎಸ್ಐ ಆತ್ಮರಕ್ಷಣೆಗಾಗಿ ಗುಂಡೇಟು ಹೊಡೆದಿದ್ದಾರೆ ಎಂದು ಎಡಿಜಿಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಈ ದಾಳಿಯಲ್ಲಿ ವಿನೋಬ ನಗರ ಪಿಎಸ್ ಐ ಮಂಜುನಾಥ್ ಕುರಿಗೂ ಗಾಯಗಳಾಗಿದ್ದು ಮೆಗ್ಗಾನ್ ಗೆ ದಾಖಲಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.

ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ

ಮೇಲಿಂದ ಮೇಲೆ ಶಿವಮೊಗ್ಗದಲ್ಲಿ ನಡೆಯುವ ಈ ಕೃತ್ಯ ಒಳ್ಳೆಯ ಬೆಳವಣಿಗೆ ಅಲ್ಲ. ಶಿವಮೊಗ್ಗ ಸಾಂಸ್ಕೃತಿಕ ನಗರವಿದೆ. ಪದೇ ಪದೇ ದೊಂಬಿ ಗಲಾಟೆಗಳು ನಡೆಯೋದು ಸರಿಯಲ್ಲ. ಪ್ರತಿಷ್ಠೆಯಾಗಿ ಯಾರೂ ತಗೆದುಕೊಳ್ಳಬಾರದು. ಪೊಲೀಸರೊಂದಿಗೆ ಕೈಜೋಡಿಸುವಂತೆ ಎಡಿಜಿಪಿ ಕೋರಿದ್ದಾರೆ.

ಗಣಪತಿ ಹಬ್ಬನೂ ಸಹ ಮುಂದಿನ ದಿನಗಳಲ್ಲಿ ಬರುತ್ತಿದ್ದು ಯಾರೂ ಗಲಾಟೆ ಮತ್ತು ದೊಂಬಿ ನಡೆಸದಂತೆ ಮನವಿ ಮಾಡಿಕೊಂಡರು.

ಗುರುವಾರತನಕ ಸೆಕ್ಷನ್ ಜಾರಿ

ಫ್ಲೆಕ್ಸ್ ವಿಚಾರದಲ್ಲಿ ನಡೆದ ಗಲಭೆ ಹಿನ್ನಲೆಯಲ್ಲಿ ಗುರುವಾರದ ತನಕ ಅಂದರೆ ಆಗಸ್ಟ್ 18 ರವರೆಗೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸೆಕ್ಷನ್ 144 ಮುಂದುವರೆಯಲಿದೆ. 40 ವರ್ಷದ ಒಳಗಿನ ಎಲ್ಲಾ ದ್ವಿಚಕ್ರವಾಹನ ಸವಾರರಿಗೂ ತಪಾಸಣೆ ನಡೆಸಲು ಸೂಚಿಸಲಾಗಿದೆ ಎಂದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button