ಸುದ್ದಿ

ವೀರ ಸಾವರ್ಕರ್ ಫೋಟೊಗೆ ವಿರೋಧ-ಓರ್ವನನ್ನ ವಿಚಾರಣೆಗೆ ಪಡೆದ ಪೊಲೀಸರು

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿವಮೊಗ್ಗದ ಶಿವಪ್ಪನಾಯಕ ಮಾಲ್ ನಲ್ಲಿ ಭಾವಚಿತ್ರ ವಿವಾದ ಪ್ರಕರಣಕ್ಕೆ ಸಂಬಙಧಿಸಿದಂತೆ ಓರ್ವನನ್ನ ಪೊಲೀಸರು ವೀಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಯನ್ನ ಬಿಡುಗಡೆ ಗೊಳಿಸುವಂತೆ ಸ್ಥಳೀಯರು ಬಾವುಟ ಹಿಡಿದುಕೊಡು ಬಂದು ತುಂಗನಗರ ಪೊಲೀಸ್ ಠಾಣೆಯ ಎದುರು ಜಮಾವಣೆಗೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಡಿ ಶರೀಫ್ ಎಂಬುವರನ್ನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು ಈ ವಶಕ್ಕೆ ಪಡೆದಿರುವುದನ್ನ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾತಕ್ಕಾಗಿ ಹೋರಾಟ ನ್ಯಾಯಕ್ಕಾಗಿ ಹೋರಾಟ ಎಂಬ ಘೋಷಣೆಯನ್ನ ಕೂಗಿ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡಿದ್ದಾರೆ.

ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ದೊಡ್ಡಪೇಟೆ ಠಾಣೆಯಲ್ಲಿ  ಪಾಲಿಕೆ ಆಯುಕ್ತರು ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಶರೀಫ್ ಎಂಬುವರನ್ನ ಕರೆದುಕೊಂಡು ಬಂದ
ತುಂಗಾನಗರ ಠಾಣೆಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆದರೆ ಸ್ಥಳೀಯರ ಪ್ರಕಾರ  ಒಟ್ಟು ನಾಲ್ಕು ಮಂದಿಯನ್ನು ಠಾಣೆಗೆ ಪೊಲೀಸರು ಕರೆತಂದಿರುವುದಾಗಿ ಆರೋಪಿಸುತ್ತಿದ್ದು ಇದನ್ನ ಪೊಲೀಸರು ನಿರಾಕರಿಸಿದ್ದಾರೆ. ಠಾಣೆ ಮುಂದೆ ಜಮಾಯಿಸಿದ್ದವರನ್ನು ಪೊಲೀಸರು  ಮನೆಯತ್ತ ಕಳುಹಿಸಿದ್ದಾರೆ. ವಿಚಾರಣೆಗೆ ಕರೆತಂದಿರುವ ವ್ಯಕ್ತಿಗಳಿಂದಲೇ ಜನರನ್ನು ತೆರಳುವಂತೆ  ಪೊಲೀಸರು ಹೇಳಿಸಿದ್ದರಿಂದ ಸ್ಥಳೀಯರು ವಾಪಾಸಾಗಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button