ತಾಲ್ಲೂಕು ಸುದ್ದಿ

ಕೆಪಿಸಿಎಲ್ ನಿಂದ ಹೊರ ಬಿದ್ದ ಮೂರನೇ ಎಚ್ಚರಿಕೆ

ಸುದ್ದಿಲೈವ್.ಕಾಂ/ಸಾಗರ/ಭದ್ರಾವತಿ/ಶಿವಮೊಗ್ಗ

ಮಳೆಯ ಆರ್ಭಟ ಕಡಿಮೆಗೊಂಡರೂ ಸಹ ಜಿಲ್ಲೆಯ ಜಲಾಶಯಗಳು ಭರ್ತಿಯಾಗುತ್ತಿವೆ. ಲಿಂಗನಮಕ್ಕಿ,ತುಂಗಜಲಾಶಯ,ಭದ್ರ ಜಲಾಶಯಗಳು ತುಂಬಿ ತುಳುಕುತ್ತಿವೆ.

ಲಿಂಗನಮಕ್ಕಿಯಲ್ಲಿ ಈಗಾಗಲೇ ಶೇ. 85 ರಷ್ಟು ಭರ್ತಿಯಾದ ಹಿನ್ನೆಲೆಯಲ್ಲಿ ಮೂರನೇ ಎಚ್ಚರಿಕೆ ನೀಡಲಾಗಿದೆ. ಜಲಾಶಯಕ್ಕೆ 29 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಗರಿಷ್ಟ 1819 ರಷ್ಟು ಅಡಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿರುವ ಜಲಾಶಯಕ್ಕೆ ಸಧ್ಯ 1811.80 ಅಡಿ ನೀರು ಸಂಗ್ರಹವಾಗಿದೆ.

ಇಲ್ಲಿಗೆ ಮೂರನೇ ಎಚ್ಚರಿಕೆ ನೀಡಲಾಗಿದೆ. ಜಲಾಶಯದ ಸುತ್ತಮುತ್ತ ಯಾರೂ ಸುಳಿಯದಂತೆ ಯಾವುದೇ ಕ್ಷಣದಲ್ಲಿ ನೀರು ನದಿಗೆ ಹರಿಸುವ ಸಾಧ್ಯತೆ ಇದೆ. ಹಾಗಾಗಿ ನದಿಪಾಯ್ರದ‌ಜನ ಎಚ್ಚರಿಕೆಯಿಂದರಲು ಸೂಚಿಸಲಾಗಿದೆ.

ಜಾನುವಾರಗಳನ್ನ ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಸಾಗಲು ಸೂಚಿಸಲಾಗಿದೆ. ಜಲಾಶಯ 95 ರಷ್ಟು ಭರ್ತಿಯಾದಾಗ ಎಷ್ಟು ಪ್ರಮಾಣದ ನೀರು ಭರ್ತಿಯಾಗಲಿದೆ ಎಙದು ಚರ್ಷಿಸಿ ನದಿಗೆ ನೀರು ಹರಿಸಲಾಗುವುದಾಗಿ ಕೆಪಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಅದರಂತೆ ತುಂಗ ಜಲಾಶಯದ ಗಾಜನೀರಿನಲ್ಲಿ 24900 ಕ್ಯೂ ಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೆ ಪ್ರಮಾಣದ ನೀರು ನದಿಗೆ ಹರಿಸಲಾಗಿದೆ. ತುಂಗ ಜಲಾಶಯದಿಂದ 11 ಗೇಟ್ ಮೂಲಕ ನೀರು ಹರಿಸಲಾಗಿದೆ. ಭದ್ರಾ ನದಿಗೆ 31 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 30 ಸಾವಿರ ಕ್ಯೂಸೆಕ್ ನದಿಗೆ ಬಿಡಲಾಗುತ್ತಿದೆ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button