ಕ್ರೈಂ

ವೀರ ಸಾವರ್ಕರ್ ಫೊಟೊಗೆ ಅಡ್ಡಿ-ಅಪರಿಚಿತರ ಮೇಲೆ ಎಫ್ಐಆರ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಪ್ಪ ನಾಯಕ ಬ್ಯಾರಿ ಮಾಲ್ ನಲ್ಲಿ ವೀರ ಸಾವರ್ಕರ್ ಭಾವ ಚಿತ್ರಕ್ಕೆ ಆಕ್ಷೇಪವೆತ್ತಿ ಭಾವಚಿತ್ರವನ್ನ ತೆಗೆಸಿದ ಘಟನೆಗೆ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಆರ್‌ದಾಖಲಾಗಿದೆ.

ಪಾಲಿಕೆ ಆಯುಕ್ತರ ಕೆಲಸಕ್ಕೆ ಅಡ್ಡಿಪಡಿಸಿದ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂದು ಶಿವಪ್ಪ ನಾಯಕನ ಬ್ಯಾರಿ ಮಾಲ್ ನಲ್ಲಿ ಇಂದು ಸ್ವಾತಂತ್ರೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮರ ಫೊಟೊ ಗ್ಯಾಲರಿಯನ್ನ ಪಾಲಿಕೆ ಆರಂಭಿಸಿತ್ತು.

ತಾಂತ್ಯಾಟೋಪಿ, ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಸುಭಾಷ್ ಚಂದ್ರ ಭೋಸ್, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಫೊಟೊದ ಜೊತೆ ವೀರ ಸಾವರ್ಕರ್ ಫೊಟೊ ಹಾಕಲಾಗಿತ್ತು. ಆದರೆ ಸಾವರ್ಕರ್ ಫೊಟೊವನ್ನ ತೆಗೆಯುವಂತೆ ಕೆಲವರು ಆಕ್ಷೇಪಿಸಿದ್ದರು. ಸಾವರ್ಕರ್ ಫೊಟೊವನ್ನ ತೆಗೆಯಲಾಗಿತ್ತು.

ಈ ಹಿನ್ಬಲೆಯಲ್ಲಿ ಪಾಲಿಕೆ ಆಯುಕ್ತರ ಕರ್ತವ್ಯಕ್ಕೆ ಅಡ್ಡಿ ಎಂದು ಆರೋಪಿಸಿ ಅಪರಿಚಿತರ ವಿರುದ್ಧ ದೂರು ದಾಖಲಿಸಲಾಗಿದೆ. ಮೇಲಿನ ತುಂಗನಗರದಲ್ಲಿ ಕೆಲ ಸಂಘಟನೆ ಕಾರ್ಯಕರ್ತರನ್ನ ಬಂಧಿಸಲಾಗಿದೆ ಎಂದು ಆಗ್ರಹಿಸಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪೋಈಸ್ ಇಲಾಖೆ ಸ್ಪಷ್ಟಪಡಿಸಿಲ್ಲ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button