ಮನೋರಂಜನೆ

ವೀರ ಸಾವರ್ಕರ್ ಭಾವ ಚಿತ್ರಕ್ಕೆ ಬ್ಯಾರಿ ಮಾಲ್ ನಲ್ಲಿ ವಿರೋಧ

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ನಲ್ಲಿ ವೀರ ಸಾವರ್ಕರ್ ಭಾವ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಬ್ಯಾರಿ ಶಿವಪ್ಪ ನಾಯಕ ಮಾಲ್ ನಲ್ಲಿ ಕೆಲ ಕಾಲ ಗೊದಲದ ವಾತಾವರಣ ನಿರ್ಮಾಣವಾಗಿದೆ.

ಸ್ವಾತಂತ್ರ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ‌ ಮಾಲ್ ನಲ್ಲಿ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಹಾಕಿ ಅಲಂಕರಿಸಲಾಗಿತ್ತು.ಭಾವಚಿತ್ರಗಳ ಮಧ್ಯದಲ್ಲಿ ಸಾವರ್ಕರ್ ಭಾವಚಿತ್ರ ಗಮನಿಸಿ  ಎಸ್ ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವರ್ಕರ್ ಸ್ವಾತಂತ್ರ ಹೋರಾಟಗಾರರೇ ಅಲ್ಲ ಅವರ ಭಾವಚಿತ್ರ ಏಕೆ ಹಾಕಿದ್ದೀರಿ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟು ಬಂದ ಸಾವರ್ಕರ್ ಹೇಗೆ ಸ್ವಾತಂತ್ರ ಹೋರಾಟಗಾರನಾಗಲು ಸಾಧ್ಯ ಎಂದು ಆಕ್ಷೇಪಿಸಲಾಗಿದೆ.

ಸಾವರ್ಕರ್ ಭಾವಚಿತ್ರ ತೆಗೆಯುವಂತೆ   ಎಸ್ ಡಿಪಿಐ ಕಾರ್ಯಕರ್ತರು ವಿರೋಧ ವ್ಯಕದತಪಡಿಸಿದ್ದಾರೆ. ಸ್ವಾತಂತ್ರಕ್ಕಾಗಿ ಜೀವಕೊಟ್ಟವರ ಭಾವಚಿತ್ರ ಹಾಕುವಂತೆ ಪಟ್ಟುಹಿಡಿದಿದ್ದಾರೆ.

ಈ ವೇಳೆ ಸಾವರ್ಕರ್ ಭಾವಚಿತ್ರದೊಂದಿಗೆ ಅಬ್ದುಲ್ ಕಲಾಮ್ ಅಜಾದ್ ಅವರ ಭಾವಚಿತ್ರ ಹಾಕುವುದಾಗಿ  ಸಿಬ್ಬಂದಿ ಹೇಳಿದ್ದಾನೆ. ನಂತರ ಎಸ್ ಡಿ ಪಿ ಐ ಸ್ವಾತಂತ್ರ್ಯ ಹೋರಾಟಗಾರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನೆ ಕುಳಿತ ಬಿಜೆಪಿ.

ಕೆಲ ಮುಸ್ಲಿಂ ಕಿಡುಗೇಡಿಗಳು ಭಾವಚಿತ್ರಗಳನ್ನು ತೆಗೆಸಿದ್ದಾರೆ ಎಂದು  ನಗರ ಬಿಜೆಪಿ ಆರೋಪಿಸಿದೆ. ಮಾಲ್ ನನ್ನು ಬಂದ್ ಮಾಡಿಸಿ ಪ್ರತಿಭಟನೆ  ಬಿಜೆಪಿ ಕಾರ್ಯಕರ್ತರು ನಡೆಸಿದ್ದಾರೆ.ನ್ಯಾಯ ಸಿಗುವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ  ಬಿಜೆಪಿ ಕಾರ್ಯಕರ್ತರುಪ್ರತಿಭಟಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button